Acidity : ಆ್ಯಸಿಡಿಟಿ ನಿವಾರಣೆಗೆ 7 ಸುಲಭ ಮನೆಮದ್ದುಗಳು

Health : ಆಧುನಿಕ ಜೀವನ ಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಆ್ಯಸಿಡಿಟಿ(Acidity) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಗಂಭೀರವಾದಂತಹ ರೋಗವಲ್ಲದಿದ್ದರು, ನಿಧಾನವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಅದರಲ್ಲೂ ಮುಖ್ಯವಾಗಿ ನಮ್ಮ ಆಹಾರ ಸೇವನೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಅತಿಯಾದ ಆ್ಯಸಿಡಿಟಿಯಿಂದಾಗಿ ಉಸಿರಾಟದ ತೊಂದರೆ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಸರಳ ಮನೆಮದ್ದುಗಳ(HomeRemedies) ಮೂಲಕ ಪರಿಹರಿಸಿಕೊಳ್ಳುವುದು ಅತಿಮುಖ್ಯ.

ಆ್ಯಸಿಡಿಟಿ ಸಮಸ್ಯೆಯನ್ನು ತಡೆಗಟ್ಟಲು 7 ಮನೆ ಮದ್ದುಗಳ ವಿವರ ಇಲ್ಲಿದೆ ನೋಡಿ :

ತುಳಸಿ ಎಲೆ : ತುಳಸಿ(Tulasi) ಎಲೆಯಲ್ಲಿರುವ ಕಾರ್ಮಿನೇಟಿವ್ ಗುಣಗಳು ಆ್ಯಸಿಡಿಟಿಯಿಂದ ತಕ್ಷಣದ ಪರಿಹಾರವನ್ನು ನೀಡಬಲ್ಲದು. ಹೀಗಾಗಿ ಪ್ರತಿದಿನ ತುಳಸಿ ಎಲೆಗಳನ್ನು ತಿನ್ನಿರಿ.

ಜೀರಿಗೆ : ಊಟ ಮಾಡಿದ ಬಳಿಕ ಸ್ವಲ್ಪ ಜೀರಿಗೆ ಸೇವಿಸಿ. ಜೀರಿಗೆಯು(Jeera) ಜೀರ್ಣ ಕ್ರಿಯೆಗೆ ಮತ್ತು ಉದರ ನೋವು ನಿವಾರಣೆಗೆ ಸಹಕಾರಿ.

ಇದನ್ನೂ ಓದಿ : https://vijayatimes.com/critic-of-monsoon-raaga/

ಮಜ್ಜಿಗೆ : ಮಜ್ಜಿಗೆ(Butter Milk) ಸಾತ್ವಿಕ ಆಹಾರ. ಹೀಗಾಗಿ ಇದನ್ನು ಆ್ಯಸಿಡಿಟಿ ಸಮಸ್ಯೆ ಇರುವವರು ಸೇವಿಸಬಹುದು. ಇನ್ನು ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆ್ಯಸಿಡ್ ಇದೆ, ಅದು ಆ್ಯಸಿಡಿಟಿಯ ಸಮತೋಲನಕ್ಕೆ ಸಹಾಯ ಮಾಡುತ್ತದೆ.

ಬಾಳೆಹಣ್ಣು : ಬಾಳೆಹಣ್ಣಿನಲ್ಲಿ(Banana) ನೈಸರ್ಗಿಕ ಅಂಟಾಸಿಡ್ಗಳು ಹೇರಳವಾಗಿದೆ. ಹೊಟ್ಟೆಯ ಆಮ್ಲೀಯತೆಯನ್ನು ಕಡಿಮೆ ಮಾಡಲು ಪ್ರತಿದಿನ ಒಂದು ಬಾಳೆ ಹಣ್ಣು ತಿನ್ನಿರಿ.

ದಾಲ್ಚಿನ್ನಿ : ಇದು ಜೀರ್ಣಕ್ರೀಯೆ ಮತ್ತು ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಿ, ಹೊಟ್ಟೆಗೆ ಆರಾಮ ನೀಡುತ್ತದೆ. ಜೀರ್ಣಾಂಗ ವ್ಯೂಹದ ಸೋಂಕನ್ನು ಸರಿ ಮಾಡಲು ದಾಲ್ಚಿನ್ನಿ ಸಹಾಯ ಮಾಡುತ್ತದೆ.

ಲವಂಗ : ಲವಂಗ(Clove) ದೇಹದ ಜೀರ್ಣಾಂಗವ್ಯೂಹದಲ್ಲಿ ಗ್ಯಾಸ್ನ ಬೆಳವಣಿಗೆಯನ್ನು ತಡೆಯುತ್ತದೆ. ಹೀಗಾಗಿ ಅಡುಗೆಗಳನ್ನು ತಯಾರಿಸುವಾಗ ಅದಕ್ಕೆ ಲವಂಗವನ್ನು ಸೇರಿಸಿ. ಲವಂಗಗಳು ಕಾರ್ಮೆಟಿವ್ ಪರಿಣಾಮವನ್ನು ಹೊಂದಿದ್ದು, ಆ್ಯಸಿಡಿಟಿ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತವೆ.

ಇದನ್ನೂ ಓದಿ : https://vijayatimes.com/unknown-facts-about-bloodwood-tree/

ಆ್ಯಪಲ್ ಸೈಡರ್ ವಿನೇಗರ್ : ಆ್ಯಸಿಡಿಟಿ ನಿವಾರಣೆಗೆ ಒಂದು ಲೋಟ ನೀರಿಗೆ ಫಿಲ್ಟರ್ ಮಾಡದ ಆ್ಯಪಲ್ ಸೈಡರ್ ವಿನೇಗರ್ ಹಾಕಿ ಸೇವಿಸಿ. ಇದು ಹೊಟ್ಟೆಯಲ್ಲಿ ಆಮ್ಲ ಉತ್ಪತ್ತಿನಲ್ಲಿ ತಡೆಯುತ್ತದೆ.

Exit mobile version