ಮುಖದ ಅಂದಗೆಡಿಸುವ ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳಿಗೆ ಇಲ್ಲಿವೆ ಸರಳ ಪರಿಹಾರ

ಕಣ್ಣಿನ ಕೆಳಗಿನ ಕಪ್ಪು ಕಲೆಗಳು (Dark Circles) ಇಡೀ ಮುಖದ ಅಂದವನ್ನು ಹಾಳುಮಾಡುತ್ತದೆ. ಈ ಡಾರ್ಕ್‌ ಸರ್ಕಲ್‌ನಿಂದ ಮುಕ್ತಿ ಪಡೆಯಲು ಅಡುಗೆ ಮನೆಯಲ್ಲೇ ಇದೆ ಹಲವಾರು ಪರಿಹಾರಗಳು. ಹೀಗೆ, ಮನೆಮದ್ದುಗಳಿಂದ (Home Remedies) ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ನಿವಾರಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌.


ಬಾದಾಮಿ ಎಣ್ಣೆ (Badam Oil) : ವಿಟಮಿನ್ ಇ ಸಮೃದ್ಧವಾಗಿರುವ ಬಾದಾಮಿ ಎಣ್ಣೆ ಡಾರ್ಕ್ ಸರ್ಕಲ್‌ಗಳಿಗೆ ಬೆಸ್ಟ್‌. ಮಲಗುವ ಮೊದಲು ಸ್ವಲ್ಪ ಬಾದಾಮಿ ಎಣ್ಣೆಯನ್ನು ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ. ಮರುದಿನ ತಣ್ಣೀರಿನಿಂದ ತೊಳೆಯಿರಿ.


ಐಸ್ ಕ್ಯೂಬ್ ಬಳಸಿ (Ice Cube) : ಐಸ್ ಕ್ಯೂಬ್ ಅನ್ನು ಬಟ್ಟೆಯಲ್ಲಿ ಹಾಕಿಕೊಂಡು ಕಣ್ಣಿನ (Health Tips For Dark Circle) ಮೇಲೆ ಇರಿಸಿಕೊಳ್ಳಿ.

ಇದರಿಂದ ಒತ್ತಡದಿಂದ ಬಳಲಿದ ಕಣ್ಣಿಗೆ ಹಿತವಾಗುತ್ತದೆ ಅಥವಾ ಒದ್ದೆ ಬಟ್ಟೆಯನ್ನು ಕೂಡ ಕಣ್ಣಿನ ಮೇಲೆ ಹಾಕಿಕೊಳ್ಳಿ.

20 ನಿಮಿಚಗಳ ಕಾಲ ಪ್ರತಿದಿನ ಹೀಗೆ ಮಾಡಿದರೆ ಡಾರ್ಕ್ ಸರ್ಕಲ್ಗಳು ಕಡಿಮೆಯಾಗುತ್ತವೆ.


ಆಹಾರ(Food) : ಕ್ಯಾರೆಟ್, ಬಿಟ್ರೂಟ್ಗಳಂತಹ ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಿ. ಇದರಿಂದ ನಿಮ್ಮ ಕಣ್ಣಿನ ಸುತ್ತ ಮೂಡಿದ ಕಪ್ಪು ವರ್ತುಲಗಳು ನಿವಾರಣೆಯಾಗುತ್ತದೆ.

ವಿಟಮಿನ್ ಮತ್ತು ಮಿನರಲ್ಸ್ಗಳಿಂದ ಕೂಡಿದ ತರಕಾರಿಗಳು ದೇಹವನ್ನೂ ಕೂಡ ಆರೋಗ್ಯಯುತವಾಗಿಡುತ್ತದೆ.

https://youtu.be/q0WcMtWO6bo ಹಬ್ಬಕ್ಕೆ ದುಬಾರಿಯಾಗಿದೆ ಹೂವು, ಹಣ್ಣು .


ತೆಂಗಿನ ಎಣ್ಣೆ(Coconut Oil) : ತೆಂಗಿನ ಎಣ್ಣೆಯಲ್ಲಿರುವ ಪೋಷಕಾಂಶಗಳು ಕಣ್ಣಿನ ಕೆಳಗಿರುವ ಚರ್ಮವನ್ನು ಕಾಪಾಡುತ್ತದೆ. ಪ್ರತಿದಿನ ಮಲಗುವ ಮೊದಲು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.

ಇದರಿಂದ ಚರ್ಮ ಹೊಳಿಪಿನಿಂದ ಕೂಡಿಕೊಂಡು ಡಾರ್ಕ್ ಸರ್ಕಲ್ಗಳು ಕಡಿಮೆಯಾಗುತ್ತವೆ.


ಇನ್ನು, ಕಣ್ಣುಗಳ ಕೆಳಗಿರುವ ಚರ್ಮವು ತೆಳ್ಳಗಿರುವುದರಿಂದ, ಇದಕ್ಕೆ ಕೋಮಲ ಚಿಕಿತ್ಸೆಯ (Health Tips For Dark Circle) ಅಗತ್ಯವಿರುತ್ತದೆ.

ವಿಟಮಿನ್ ಸಿ, ರೆಟಿನಾಯ್ಡ್‌ಗಳು ಮತ್ತು ಹೈಲುರಾನಿಕ್ ಆಮ್ಲಗಳು ಸಮೃದ್ಧವಾಗಿರುವ ಕ್ರೀಮ್‌ಗಳು ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಹೀಗಾಗಿ ನೀವು ಕ್ರೀಮ್ಗಳನ್ನು ಕೊಳ್ಳುವಾಗ ಎಚ್ಚರಿಕೆಯಿಂದಿರಿ.


ಸೌತೆಕಾಯಿ(Cucumber) : ಯಥೇಚ್ಛವಾದ ನೀರಿನ ಅಂಶವಿರುವ ಸೌತೆಕಾಯಿ ನಿಮ್ಮ ಡಾರ್ಕ್ ಸರ್ಕಲ್ಗಳನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಕಣ್ಣಿನ ಮೇಲೆ ಸೌತೆಕಾಯಿಯ ಸ್ಲೈಸ್ಗಳನ್ನು ಮಾಡಿ ಇಟ್ಟುಕೊಳ್ಳಿ.

ವಾರದಲ್ಲಿ 3 ಬಾರಿಯಾದರೂ ಹೀಗೆ ಮಾಡಿ, ಕ್ರಮೇಣ ನಿಮ್ಮ ಡಾರ್ಕ್ ಸರ್ಕಲ್ಸ್ ಕಡಿಮೆಯಾಗುತ್ತದೆ.


ಟೀ ಬ್ಯಾಗ್(Tea Bag) : ಟೀ ಬ್ಯಾಗ್ಅನ್ನು ರಾತ್ರಿ ನೆನೆಹಾಕಿ ಬೆಳಗ್ಗೆ 10 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಇದು ನಿಮ್ಮ ಕಣ್ಣಿನ ಕೆಳಗೆ ಕಪ್ಪು ಕಲೆಯಾಗುವುದನ್ನು ತಡೆಯುತ್ತದೆ.

ಇದನ್ನೂ ಓದಿ : https://vijayatimes.com/history-of-anantha-padmanabha-swamy-temple/


ವ್ಯಾಸಲೀನ್(Vaseline) : ವ್ಯಾಸಲೀನ್ ಸಹ ಡಾರ್ಕ್ ಸರ್ಕಲ್‌ಗಳನ್ನು ನಿವಾರಿಸಲು ಬಳಸಬಹುದು. ವ್ಯಾಸಲೀನ್‌ಗೆ ಒಂದು ಹನಿ ನಿಂಬೆ ರಸವನ್ನು ಸೇರಿಸಿ ಮತ್ತು ಕಣ್ಣಿನ ಕೆಳಗೆ ಹಚ್ಚಿಕೊಳ್ಳಿ.

ಸುಮಾರು 45 ನಿಮಿಷಗಳ ಕಾಲದನಂತರ ತಣ್ಣೀರಿನಿಂದ ತೊಳೆಯಿರಿ. ಇವುಗಳ ಜೊತೆ ರಾತ್ರಿ 7-8 ಗಂಟೆಯ ನಿದ್ರೆ ಸಹ ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಅಗತ್ಯ.

Exit mobile version