ಕಣ್ಣಿನ ಸೌಂದರ್ಯ ಕಾಪಾಡಿಕೊಳ್ಳಲು ಈ ರೀತಿ ಸುಲಭ ವಿಧಾನ ಪಾಲಿಸಿ!

ಮೀನಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ, ಹೀಗೆ ಹೆಣ್ಣಿನ ಕಣ್ಣುಗಳ ವರ್ಣನೆಗೆ ಕವಿಗಳು ಬಳಸಿರುವ ಪದಗಳು ಹಲವಾರು. ಮೀನಿನಾಕಾರದ ಕಂಗಳ ಹೆಣ್ಣು ಮೀನಾಕ್ಷಿಯಾದರೆ, ಜಿಂಕೆಯಂಥ ಕಂಗಳ ಒಡತಿ ಮೃಗನಯನಿ. ಇಂತಹ ಕಂಗಳ ಸೌಂದರ್ಯ ಹೆಚ್ಚಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ ಮುಂದೆ ಓದಿ.


ಕಣ್ಣಿನ ಸೌಂದರ್ಯ ಹೆಚ್ಚಿಸಲು ನೀವು ರಾಸಾಯನಿಕ ಬೆರೆಸಿದ ಕ್ರೀಮ್ ಗಳನ್ನೇ ಬಳಸಬೇಕಿಲ್ಲ. ನೈಸರ್ಗಿಕವಾಗಿ ಸಿಗುವ ಈ ಕೆಲವು ವಸ್ತುಗಳಿಂದಲೂ ನೀವು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಮಶ್ರೂಮ್ ನಲ್ಲಿ ವಿಟಮಿನ್ ಬಿ3 ಅಂಶ ಸಮೃದ್ಧವಾಗಿವೆ. ಇವು ರಕ್ತ ಪರಿಚಲನೆಯನ್ನು ಚುರುಕುಗೊಳಿಸುತ್ತವೆ. ಕೆರಾಟಿನ್ ಉತ್ಪಾದನೆಯನ್ನು ಹೆಚ್ಚಿಸಿ, ತ್ವಚೆಯ ಸೆಲ್ ಗಳ ಸಂತಾನೋತ್ಪತ್ತಿಗೆ ನೆರವಾಗುತ್ತದೆ.

ಕಣ್ಣಿನ ರೆಪ್ಪೆ ವೇಗವಾಗಿ ಬೆಳೆಯಲೂ ಇದು ಸಹಾಯ ಮಾಡುತ್ತದೆ. ಡ್ರೈಫ್ರುಟ್ ಗಳು ದೇಹದ ಆರೋಗ್ಯವನ್ನು ಕಾಪಾಡುವ ಜೊತೆಗೆ ಕಣ್ಣಿನ ರೆಪ್ಪೆಗಳ, ಅದರ ಬೇರುಗಳ ಬೆಳವಣಿಗೆಗೂ ನೆರವಾಗುತ್ತದೆ. ಬೀನ್ಸ್ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಪೋಲಿಕ್ ಆಮ್ಲ ಮತ್ತು ವಿಟಮಿನ್ ಎಚ್ ಇದ್ದು ಇದು ಕೂಡ ರೆಪ್ಪೆಯ ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ.


ನಿಮ್ಮ ಊಟದಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಧಾರಾಳವಾಗಿ ಸೇವಿಸಿ. ಇವು ದೇಹದಲ್ಲಿ ಕೊಲಾಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಹಾಗೂ ಕಣ್ಣಿನ ಸೌಂದರ್ಯ ಹೆಚ್ಚಿಸಲು ನೆರವಾಗುತ್ತದೆ.

Exit mobile version