ಮುಖದಲ್ಲಿನ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ಪರಿಹಾರ!

face

ಸಾಮಾನ್ಯವಾಗಿ ಎಲ್ಲರಿಗೂ ಕೂಡ ಮುಖ ಅಂದವಾಗಿ ಕಾಣಬೇಕೆಂಬ ಹಂಬಲ ಇರುತ್ತದೆ. ಅದರಲ್ಲೂ ಕೆಲವು ಮಹಿಳೆಯರಿಗೆ ಮುಖದ ಅಂದದ ಬಗ್ಗೆ ಚಿಂತೆ ಕಾಡುತ್ತಿರುತ್ತದೆ. ಮುಖದ ಸುಕ್ಕು ನಿವಾರಿಸಿ, ಮುಖ ಕಾಂತಿಯುತವಾಗಿ ಕಾಣಲು ಇಲ್ಲಿದೆ ಸುಲಭದ ಮನೆಮದ್ದುಗಳು.


• ಬೇವು, ಪುದೀನಾ, ತುಳಸಿ ಎಲೆಗಳ ಪುಡಿ ಮತ್ತು ಮೆಂತ್ಯ ಪುಡಿ ನಂಜು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಜೇನುತುಪ್ಪದಲ್ಲಿ ಕೆನೆ ಮತ್ತು ನಿಂಬೆ ರಸವನ್ನು(Lemon) ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದನ್ನು ಮುಖ ಮತ್ತು ಕಣ್ಣುಗಳ ಕೆಳಗೆ ಹಚ್ಚಿ. ಇದು ಕಣ್ಣಿನ ಕೆಳಗಿರುವ ಕಪ್ಪನ್ನು ಹೋಗಲಾಡಿಸುತ್ತದೆ ಮತ್ತು ಸುಕ್ಕುಗಳನ್ನು ನಿವಾರಿಸುತ್ತದೆ.
• ಸೌತೆಕಾಯಿಯನ್ನು ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖ ಫ್ರೆಶ್ ಆಗಿ ಕಾಣುತ್ತದೆ.
• ಸೇಬಿನ (Apple) ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ, ಸುಕ್ಕುಗಳ ವಿರುದ್ಧ ಇದು ತುಂಬಾ ಪರಿಣಾಮಕಾರಿ.
• ಇದರ ಹೊರತಾಗಿ, ನೀವು ಹಸಿ ಹಾಲಿನಿಂದ (Milk) ಮುಖವನ್ನು ಸ್ವಚ್ಛಗೊಳಿಸಿ. ಜೇನು ಮತ್ತು ಕಿತ್ತಳೆ ರಸದ ಫೇಸ್ ಪ್ಯಾಕ್ ಹಚ್ಚಿ, ಚರ್ಮವು ಸುಧಾರಿಸುತ್ತದೆ ಮತ್ತು ಸುಕ್ಕುಗಳು ನಿವಾರಣೆಯಾಗುತ್ತದೆ.
• ಮೊಟ್ಟೆ (Egg) ಮತ್ತು ನಿಂಬೆ ರಸವನ್ನು ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. • ಪಪ್ಪಾಯಿ ಮತ್ತು ಜೇನು ತುಪ್ಪವನ್ನು (Honey) ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.


ಪೇರಳೆ ಹಣ್ಣು:
ಇದರಲ್ಲಿ ನೈಸರ್ಗಿಕವಾದ ಪ್ರಬಲ ಆಂಟಿ ಆಕ್ಸಿಡೆಂಟುಗಳಿವೆ. ಜೊತೆಗೆ ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಹಾಗೂ ಪೊಟ್ಯಾಶಿಯಂ ಉತ್ತಮ ಆಂಟಿ ಆಕ್ಸಿಡೆಂಟುಗಳಾಗಿವೆ. ವಿಶೇಷವಾಗಿ ಮೊಡವೆಗಳನ್ನು ನಿವಾರಿಸಲು ಪೇರಳೆ ಉತ್ತಮವಾಗಿದೆ. ಅಲ್ಲದೇ ಪೇರಳೆ ಎಲೆಯ ರಸವನ್ನು ಹಚ್ಚುವ ಮೂಲಕ ಚರ್ಮದಲ್ಲಿರುವ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.


ಈರುಳ್ಳಿ :
ತ್ವಚೆಯ ಸೆಳೆತ ಹೆಚ್ಚಲು ಈರುಳ್ಳಿಯೂ ತನ್ನ ನೆರವನ್ನು ನೀಡುತ್ತದೆ. ಆದರೆ ಈ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಈರುಳ್ಳಿಯಲ್ಲಿ ವಿಟಮಿನ್ ಎ, ಸಿ, ಮತ್ತು ಇ ಸಹಾ ಇದ್ದು, ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ಒದಗಿಸುತ್ತವೆ. ಅಲ್ಲದೇ ನೀರುಳ್ಳಿಯ ಪ್ರತಿಜೀವಕ ಗುಣ, ತ್ವಚೆಯಲ್ಲಿ ಮೊಡವೆಗಳು ಮೂಡದಂತೆ ತಡೆಯುತ್ತದೆ ಹಾಗೂ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಂದು ತ್ವಚೆಗೆ ಎದುರಾಗುವ ಇತರ ಉರಿಯೂತಗಳಿಂದ ರಕ್ಷಿಸುತ್ತದೆ. ಅಲ್ಲದೇ ಈರುಳ್ಳಿ ಕೂದಲಿಗೂ ಉತ್ತಮವಾಗಿದೆ. ನೀರುಳ್ಳಿ ರಸವನ್ನು ತ್ವಚೆಗೆ ಹಚ್ಚಿ ಹದಿನೈದು ನಿಮಿಷಗಳ ಬಳಿಕ ತೊಳೆದುಕೊಳ್ಳುವ ಮೂಲಕ ಉತ್ತಮ ರಕ್ಷಣೆ ಪಡೆಯಬಹುದು. ಈರುಳ್ಳಿ ಸುಲಭವಾಗಿ ಮತ್ತು ಅಗ್ಗವಾಗಿ ಲಭಿಸುವ ಸಾಮಾಗ್ರಿಯಾಗಿದ್ದು ಇದರ ರಸವನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಿಕೊಳ್ಳಬಹುದು.

Exit mobile version