ಕೂದಲು ಉದುರುವ ಸಮಸ್ಯೆ ಇದೀಯಾ? ಹಾಗಾದ್ರೆ, ಈ ಸಮಸ್ಯೆಗೆ ಇಲ್ಲಿದೆ ಪರಿಹಾರ

Health tips for Hairfall: ಭೂಮಿ ಮೇಲೆ ಬೆಳೆಯುವ ಪ್ರತಿ ಗಿಡಮೂಲಿಕೆಗಳು ಒಂದಲ್ಲ ಒಂದು ವಿಶೇಷಗುಣ ಹೊಂದಿರುತ್ತವೆ ಹಾಗೆಯೇ ಸೀಬೆ (ಪೇರಳೆ) ಗಿಡಕೂಡ (Guava Leaves)

ಒಂದು ಎಲೆಗಳಲ್ಲಿಯೂ ಹಲವಾರು ಔಷಧೀಯ ಗುಣಗಳು ಮತ್ತು ಪೋಷಕಾಂಶಲಿದ್ದು, ಇದರ ಎಲೆಗಳಿಂದ ಕೂದಲು ರಕ್ಷಣೆ ಮಾತ್ರವಲ್ಲದೆ ಕೆಮ್ಮು,ನೆಗಡಿ (Cold),ಗಂಟಲು ನೋವು,ಬಾಯಿ

ಹುಣ್ಣು,ಮುಂತಾದ ಸಮಸ್ಯೆಗಳನ್ನೂ (Health tips for Hairfall) ನಿವಾರಿಸಬಹುದು.

ಸರಿಯಾದ ಪೋಷಣೆಯಿಲ್ಲದೆ ಯಾವುದಾದರೊಂದು ಸಮಸ್ಯೆಯಿಂದ ಪ್ರತಿಯೊಬ್ಬರು ಬಳಲುತ್ತಾರೆ ಅದರಲ್ಲಿ ಎಲ್ಲರೂ ಎದುರಿಸುತ್ತಿರುವ ಕೂದಲು ಸಮಸ್ಯೆಯು ಒಂದು ವಯಸ್ಸಿನ ಹೊರತಾಗಿಯೂ,

ಅನಾರೋಗ್ಯಕರ ಆಹಾರ (Food) ಹಾಗೂ ಮಾಲಿನ್ಯದಿಂದಾಗಿ,ಒತ್ತಡದ ಜೀವನ ಶೈಲಿ ಇಂದಾಗಿ ನೆತ್ತಿಯೊಳಗೆ ಕಾಲಜನ್ (Collagen) ಹಾನಿಯಿಂದಾಗಿ ಕೂದಲಿನ ಕಿರುಚೀಲಗಳು ದುರ್ಬಲಗೊಳ್ಳುತ್ತವೆ.

ಕೂದಲು ಉದುರಿವಿಕೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಕೆಲವೊಂದು ಮನೆಮದ್ದು ಗಳಿಂದ ಕೂದಲು ಉದುರುವಿಕೆ ಸಮಸ್ಯೆಯಿಂದ ಮುಕ್ತಿ

ಪಡೆಯಬಹುದಾಗಿದೆ. ಹೇಗೆ ಅಂತ ನೋಡೋಣ..

ಹೇರ್ ಮಾಸ್ಕ್
ಹೇರ ಫಾಲ್ (Hair Fall) ಇರುವವರು ಸೀಬೆ ಗಿಡದ ಎಲೆಗಳನ್ನು ತೆಗೆದುಕೊಂಡು ಸ್ವಚ್ಛಗೊಳಿಸಿ, ನಂತರ ಎಲೆಗಳನ್ನು ಮಿಕ್ಸಿಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ನಂತರ ಸ್ವಲ್ಪ ನೀರು ಸೇರಿಸಿ ಈ ಮಿಶ್ರಣವನ್ನು

ತಲೆಯ ನೆತ್ತಿಭಾಗದಿಂದ ಕೂದಲಿನ (Hair) ತುದಿಯವರೆಗೂ ಚೆನ್ನಾಗಿ ಹಚ್ಚಬೇಕು. ಒಂದು ಗಂಟೆಯ ನಂತರ ತಲೆಯನ್ನು ಉಗುರು ಬೆಚ್ಚಗಿನ ನೀರಿನಲಿ ತೊಳೆಯಿರಿ. ಒಂದು ವಾರದಲ್ಲಿ ಎರಡು ಬಾರಿ ಹೀಗೆ

ಮಾಡುವುದರಿಂದ ಒಂದೇ ತಿಂಗಳೊಳಗೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

8 ರಿಂದ 10 ಪೇರಳೆ ಎಲೆಗಳನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆದು ಬಿಸಿನೀರಿನಲ್ಲಿ ಹಾಕಿ ಕುದಿಸಬೇಕು ಅದು ತಣ್ಣಗಾದ ನಂತರ ಸೋಸಿಕೊಳ್ಳಬೇಕು. ನಂತರ ಈ ನೀರನ್ನು ಕೂದಲಿನ ತಲೆಬಾಗದಿಂದ

ತುದಿಯವರೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಒಂದು ಗಂಟೆಯ ಬಳಿಕ ತಲೆಗೆ ಸ್ನಾನ ಮಾಡಬೇಕು.

ಹೀಗೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಹಾಗೂ ಕೂದಲು ಉದ್ದವಾಗಿ ಬೆಳೆಯುತ್ತವೆ. ಬೇರೆ ಬೇರೆ ರಾಸಾಯನಿಕಗಳನ್ನೂ ಬಳಸುವ ಬದಲು ಸೀಬೆ (ಪೇರಳೆ) ಎಲೆಗಳನ್ನು

ಬಳಸಿದ್ದೆಯಾದರೆ ಆದಷ್ಟು ಬೇಗ ಈ ಸಮಸ್ಯೆ ಇಂದ ಪರಿಹಾರ ಪಡೆಯಬಹುದಾಗಿದೆ.

ಇದನ್ನು ಓದಿ: ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮುರುಘಾಶ್ರೀ‌: ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ

Exit mobile version