ಈ ಲಕ್ಷಣಗಳು ಕಾಣಿಸಿಕೊಂಡರೆ ಹೈಪೋಥೈರಾಯ್ಡಿಸಮ್ ಇರಬಹುದು ಎಚ್ಚರ!

ಥೈರಾಯ್ಡ್(Thyroid) ರೋಗವು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಥೈರಾಯ್ಡ್ ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ, ಪುರುಷರಿಗೆ ಈ ಸಮಸ್ಯೆ ಬರುವುದಿಲ್ಲ ಎಂದಲ್ಲ. ಇನ್ನು ಈ ಲಕ್ಷಣಗಳು  ನಿಮ್ಮಲ್ಲಿ ಕಾಣಸಿಕೊಂಡರೆ ಥೈರಾಯ್ಡ್ ನಿಮಗೂ ಬಂದಿರಬಹುದು. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಿ.  ಥೈರಾಯ್ಡ್ ರೋಗದ ಕೆಲ ಪ್ರಮುಖ ಮಾಹಿತಿ ಇಲ್ಲಿದೆ ನೋಡಿ.

ಹೈಪೋಥೈರಾಯ್ಡಿಸಮ್ ಎಂದರೇನು? : ಥೈರಾಯ್ಡ್ ರೋಗವನ್ನು ಹೈಪೋಥೈರಾಯ್ಡಿಸಮ್ (Hypothyroidism) ಎಂದೂ ಕೂಡ ಕರೆಯುತ್ತಾರೆ. ಈ ರೋಗದ ಕುರಿತು ಹೆಚ್ಚು ಭಯ ಪಡುವ ಅಗತ್ಯವಿಲ್ಲ. ಇದನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಪ್ರೈಮರಿ ಮತ್ತು ಸೆಕೆಂಡರಿ ಹೈಪೋಥೈರಾಯ್ಡಿಸಮ್ ಎಂದು.

ಇದನ್ನೂ ಓದಿ : https://vijayatimes.com/anand-mahindra-shares-a-valuable-tweet/

ಪ್ರೈಮರಿ ಮತ್ತು ಸೆಕೆಂಡರಿ ಹೈಪೋಥೈರಾಯ್ಡಿಸಮ್ ನಡುವಿನ ವ್ಯತ್ಯಾಸ : ಪ್ರೈಮರಿ ಹೈಪೋಥೈರಾಯ್ಡಿಸಮ್  ಹೆಚ್ಚಾಗಿ ಅಯೋಡಿನ್(Iodine) ಕೊರತೆಯಿಂದ ಉಂಟಾಗುತ್ತದೆ. ಆದರೆ ಹೈಪೋಥಾಲಮಸ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಸೆಕೆಂಡರಿ ಹೈಪೋಥೈರಾಯ್ಡಿಸಮ್ ಉಂಟಾಗುತ್ತದೆ.

ಹೈಪೋಥೈರಾಯ್ಡಿಸಮ್ನ  ಸಾಮಾನ್ಯ ಲಕ್ಷಣಗಳು : ಮುಟ್ಟಿನ  ಸಂಬಂಧಿಸಿದ ಸಮಸ್ಯೆಗಳು, ಬೊಜ್ಜು ಬೆಳೆಯುವುದು, ಅತಿಯಾದ ತೂಕ, ಸ್ತನಗಳಿಂದ ಸ್ವಯಂಚಾಲಿತ ಬಿಳಿ ಹೋಗುವುದು, ಬೆವರುವುದು ಕಡಿಮೆಯಾಗುವುದು, ಚರ್ಮದ ಶುಷ್ಕತೆ  ಮತ್ತು ಸ್ನಾಯು ಸೆಳೆತ, ಸ್ವಲ್ಪ ಶೀತವನ್ನು ಸಹಿಸಲು ಅಸಮರ್ಥತೆ, ಸರಿಯಾಗಿ ನಿದ್ರೆ ಬಾರದೇ ಇರುವುದು, ಚರ್ಮದ ಬಣ್ಣ ಬದಲಾವಣೆ ಆಗುವುದು ಧ್ವನಿಯಲ್ಲಿ ಬದಲಾವಣೆ, ತ್ವರಿತವಾಗಿ ಕೂದಲು ಉದುರುವುದು, ಮಲಬದ್ಧತೆ ಮತ್ತು ಸುಸ್ತಾಗುವುದು.

https://fb.watch/f36oh59I2t/

ಹೈಪೋಥೈರಾಯ್ಡಿಸಮ್ ನ ಗಂಭೀರ ಲಕ್ಷಣಗಳು : ಕೂದಲು ಒಣ ಮತ್ತು ನಿರ್ಜೀವವಾಗಿ ಕಾಣುವುದು, ನಾಲಿಗೆಯ ಅಸಹಜ ಆಕಾರ, ತುಂಬಾ ಹಗುರವಾದ ಹೃದಯ ಬಡಿತದ ಭಾವನೆ, ನಿಧಾನವಾಗಿ ಮಾತನಾಡುವುದು ಮತ್ತು ನಿಧಾನವಾಗಿ ನಡೆಯುವುದು, ಗಂಟಲು ದೊಡ್ಡದಾಗಿ ಕಾಣುವುದು, ಚರ್ಮದ ಹಳದಿಯಾಗಿ ಕಾಣುವುದು.

ಈ ಜನರಿಗೆ ತಪ್ಪದೇ ಹೈಪೋಥೈರಾಯ್ಡಿಸಮ್ ನ ಪರೀಕ್ಷೆ ಮಾಡಿಸಬೇಕು : ಥೈರಾಯ್ಡ್ ಕಾಯಿಲೆಯ ಕುಟುಂಬದ ಇತಿಹಾಸ ಹೊಂದಿರುವವರು. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ಟೈಪ್ -1 ಡಯಾಬಿಟಿಸ್ ಇರುವವರು. ತಮ್ಮ ರಕ್ತದಲ್ಲಿ ಥೈರಾಯ್ಡ್ ಪೆರಾಕ್ಸಿಡೇಸ್ ಪ್ರತಿಕಾಯಗಳನ್ನು ಹೊಂದಿರುವವರು. ಗರ್ಭಿಣಿಯರು, ರೇಡಿಯೇಶನ್ ಥೆರಪಿ ಮಾಡಿಸಿದ ಜನರು. ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವ ಜನರು.

Exit mobile version