ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿದ್ದರೆ ಈ ಆಹಾರಗಳನ್ನು ಸೇವನೆ ಮಾಡಿ: ಮಾತ್ರೆಯಿಂದ ದೂರವಿರಿ..

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರಲ್ಲಿ ಅರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಕಬ್ಬಿಣಾಂಶದ ಕೊರತೆಯು #Iron Deficiency ಕೂಡ ಒಂದಾಗಿದೆ. ಒಂದು ವೇಳೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಣಿಸಿಕೊಂಡರೆ ಅದಕ್ಕೆ ಸಂಬಂಧ ಪಟ್ಟಂತೆ ಆರೋಗ್ಯದಲ್ಲಿ ಕೆಲವೊಂದು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಹಾಗಾಗಿ ಪ್ರತಿಯೊಂದು ಸಮಸ್ಯೆಗೂ ಮಾತ್ರೆ ಬಳಕೆ ಒಳ್ಳೆಯದಲ್ಲ ಆದ್ದರಿಂದ ಈ ಕಬ್ಬಿಣಾಂಶದ ಕೊರತೆಯಿಂದ ದೂರವಿರಲು ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯೋಣ…

ಈ ಕಬ್ಬಿಣಾಂಶದ ಕೊರತೆ ಉಂಟಾದಾಗ ಮೈ ಬೆವರುವುದು, ಆಗಾಗ ಆಯಾಸ ಕಾಣಿಸಿಕೊಳ್ಳುವುದು, ದುರ್ಬಲ ರೋಗನಿರೋಧಕ ಶಕ್ತಿ, ಕೂದಲು ಉದುರುವಿಕೆ, ದೇಹದಲ್ಲಿ ರಕ್ತದ ಕೊರತೆ ಎದ್ದು ಕಾಣುವುದು, ಆಗಾಗ ತಲೆಸುತ್ತು (Dizziness) ಬರುವುದು, ಇವೆಲ್ಲಾವು ಕೂಡ, ಕಬ್ಬಿಣಾಂಶದ ಕೊರತೆಯ ಪ್ರಮುಖ ರೋಗ ಲಕ್ಷಣಗಳು ಎಂದು ಹೇಳಬಹುದಾಗಿದೆ.

ಮುಟ್ಟಿನ ಪ್ರಕ್ರಿಯೆಯಲ್ಲಿರುವ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಮಹಿಳೆಯರಲ್ಲಿ ಹೆಚ್ಚಿನ ರಕ್ತಸ್ರಾವ ಕಾಣಿಸಿಕೊಳ್ಳುವುದರಿಂದ, ದೇಹದಿಂದ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶದ ಪ್ರಮಾಣವು ಕಡಿಮೆಯಾಗಿ ಬಿಡುತ್ತದೆ. ಕೊನೆಗೆ ಇದೇ ಕಾರಣಕ್ಕೆ ಅನೀಮಿಯಾ (Anemia) ಅಥವಾ ರಕ್ತಹೀನತೆ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಬಾಳೆಹಣ್ಣು:
ವರ್ಷದ ಎಲ್ಲಾ ಮಾಸದಲ್ಲೂ ಕೈಗೆಟಕುವ ಬೆಲೆಯಲ್ಲಿ ಸಿಗುವ ಹಣ್ಣು ಅಂದರೆ ಅದು ಬಾಳೆಹಣ್ಣು (Banana). ಪ್ರತಿಯೊಬ್ಬರು ಕೂಡ ಈ ಹಣ್ಣನ್ನು ತಿನ್ನುತ್ತಾರೆ ಮತ್ತು ಇದರಲ್ಲಿ ಹಲವಾರು ಬಗೆಯ ವಿಟಮಿನ್ಸ್ ಗಳನ್ನು, ಪೋಷಕಾಂಶಗಳನ್ನು ಹಾಗೂ ಇತರ ಖನಿಜಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಕಬ್ಬಿಣಾಂಶವು ಹೆಚ್ಚಾಗಿ ಕಂಡು ಬರುವುದರಿಂದ, ದೇಹದಲ್ಲಿ ಕೆಂಪು ರಕ್ತಕಣಗಳು ಹಾಗೂ ಹಿಮೋಗ್ಲೋಬಿನ್ (Hemoglobin) ಪ್ರಮಾಣವನ್ನು ಹೆಚ್ಚಿಸುವುದರಿಂದ ರಾತ್ರಿ ಊಟವಾದ ಬಳಿಕ ಒಂದು ಬಾಳೆಹಣ್ಣು ತಿಂದು ಮಲಗುವುದರಿಂದ ಕಬ್ಬಿಣಾಂಶದ ಕೊರತೆ ಉಂಟಾಗದಂತೆ ತಡೆಯುತ್ತದೆ. ಇದರಿಂದ ರಕ್ತಹೀನತೆಯಂತಹ ಸಮಸ್ಯೆಯೂ ಕೂಡ ದೂರವಾಗುತ್ತದೆ.

ಚಿಯಾ ಬೀಜಗಳು:
ಇನ್ನು ಈ ಚಿಯಾ ಬೀಜಗಳಲ್ಲಿ (Chia Seeds) ಹಲವಾರು ಬಗೆಯ ಪೋಷಕಾಂಶಗಳು ಕಂಡು ಬರುವುದರಿಂದ ಅಧಿಕ ಪ್ರಮಾಣದಲ್ಲಿ ಪ್ರೋಟೀನ್, ನಾರಿನಾಂಶ, ಮೆಗ್ನೀಸಿಯಮ್ ಒಮೆಗಾ-3 ಕೊಬ್ಬಿನಾಮ್ಲ, ಹಾಗೂ ಕಬ್ಬಿಣಾಂಶದ ಪ್ರಮಾಣದಲ್ಲಿಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಹಾಗಾಗಿ ಪ್ರತಿ ದಿನ ಚಿಯಾ ಬೀಜಗಳನ್ನು ನೀರಿನಲ್ಲಿ ರಾತ್ರಿ ಮಲಗುವ ಮುನ್ನ ನೆನೆಸಿಟ್ಟು ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಗೆ (Empty Stomach) ಅಥವಾ ದಿನದ ಇತರ ಯಾವುದೇ ಸಮಯದಲ್ಲಿ ನೀರಿನ ಜೊತೆಗೆ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು. ​

ಬೆಲ್ಲ
ಬೆಲ್ಲದಲ್ಲಿ (Jaggery) ದೇಹಕ್ಕೆ ಬೇಕಾಗುವ ವಿಟಮಿನ್ಸ್ ಅಂಶಗಳು, ಖನಿಜಾಂಶಗಳು, ಪೊಟ್ಯಾಶಿಯಮ್ (Potassium), ಮೆಗ್ನೀಸಿಯಮ್ ಅಂಶದ ಜೊತೆಗೆ ಅಪಾರ ಪ್ರಮಾ ಣದ ಕಬ್ಬಿಣಾಂಶ ಕಂಡುಬರುವುದರಿಂದ, ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ವೃದ್ಧಿಯಾಗದಂತೆ ನೋಡಿಕೊಳ್ಳಬಹುದು. ಹಾಗಾಗಿ ಪ್ರತಿನಿತ್ಯ ಸಕ್ಕರೆಯ ಬದಲಾಗಿ ಬೆಲ್ಲವನ್ನು ಬಳಸುವುದರಿಂದ ಈ ಕೊರತೆಯಿಂದ ದೂರವಿರಬಹುದು..

ಪಾಲಕ್ ಸೊಪ್ಪು, ಬೀಟ್ರೂಟ್ ಬಳಸಿ
ಪಾಲಕ್ ಸೊಪ್ಪು, ಬೀಟ್ರೂಟ್ ಅಥವಾ ಈ ತರಕಾರಿ ಜ್ಯೂಸ್, ಮೆಂತೆಸೊಪ್ಪು, ದಾಳಿಂಬೆ (Pomegranate), ಕುಂಬಳಕಾಯಿ ಬೀಜಗಳು, ಒಣಖರ್ಜೂರ ಅಥವಾ ಹಸಿ ಖರ್ಜೂರ, ಒಣ ದ್ರಾಕ್ಷಿ, ಬಾದಾಮಿ, ಗೋಡಂಬಿ, ಮತ್ತು ಹೂಕೋಸು, ಆಲೂಗಡ್ಡೆಯನ್ನು ತಿನ್ನುವುದರಿಂದಲೂ ಕೂಡ ದೇಹದಲ್ಲಿ ಕಬ್ಬಿಣದ ಅಂಶದ ಪ್ರಮಾಣ ಕೊರೆತೆಯಾಗದಂತೆ ನೋಡಿಕೊಳ್ಳಬಹುದು

ಭವ್ಯಶ್ರೀ ಆರ್ ಜೆ

Exit mobile version