Health Tips : ಪ್ರತಿದಿನ ಒಂದು ಬಾಳೆಹಣ್ಣು ಸೇವಿಸಿ, ಈ 11 ಪ್ರಯೋಜನಗಳನ್ನು ಪಡೆದುಕೊಳ್ಳಿ

Health Tips : ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಬಾಳೆಹಣ್ಣನ್ನು(Banana) ಸೇವಿಸುವುದರಿಂದ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದು. ನಮ್ಮ ಪೂರ್ವಜರು ನೂರಾರು ವರ್ಷಗಳಿಂದಲೂ ಊಟವಾದ ನಂತರ ಒಂದು ಬಾಳೆಹಣ್ಣನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು.

ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್(Pottasium) ಮತ್ತು ಮೆಗ್ನೀಸಿಯಮ್ಗಳು(Magnesium) ನಮ್ಮ ಕರುಳನ್ನು ಆರೋಗ್ಯಕರವಾಗಿರಿಸಿ, ಜೀರ್ಣಕ್ರಿಯೆ(Digestion) ಉತ್ತಮವಾಗಿರಲು ಸಹಾಯ ಮಾಡುತ್ತವೆ. ಹೀಗೆ ಬಾಳೆಹಣ್ಣು ಸೇವಿಸುವುದರಿಂದ ಆಗುವ ಏಳು ಆರೋಗ್ಯಕರ ಲಾಭಗಳ ವಿವರ ಇಲ್ಲಿದೆ ನೋಡಿ.

ಇದನ್ನೂ ಓದಿ : https://vijayatimes.com/congress-allegation-on-basavaraj-bommai/

ಸಂಶೋಧಕರ ಪ್ರಕಾರ ದಿನಕ್ಕೆ ೧ ಬಾಳೆಹಣ್ಣು ತಿನ್ನುವ ಮಕ್ಕಳಲ್ಲಿ ಆಸ್ತಮಾ(Asthama) ಬರುವ ಸಾಧ್ಯತೆ ಶೇಕಡಾ ೨೫ರಷ್ಟು ಕಡಿಮೆಯಾಗಿರುತ್ತದೆ. ಬಾಳೆಹಣ್ಣು ಪುರುಷರಲ್ಲಿ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಮತ್ತು ಬಾಳೆಹಣ್ಣಿನಲ್ಲಿರುವ ಟ್ರಿಪ್ಟೊಫಾನ್ ಸಿರೊಟೋನಿನ್ ಸ್ರವಿಸುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬಾಳೆಹಣ್ಣಿನಲ್ಲಿರುವ ವಿಟಮಿನ್ ಎ, ಬಿ, ಸಿ ಮತ್ತು ವಿಟಮಿನ್ B6 ಅಧಿಕ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕರುಳನ್ನು ಆರೋಗ್ಯಕರವಾಗಿರುಸುತ್ತವೆ. ಬಾಳೆಹಣ್ಣನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿಯನ್ನು ಬಲಪಡಿಸುತ್ತದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ B6 ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ನೀಡುತ್ತದೆ.

https://youtu.be/x-sWN7wKQ_U ಸರ್ಕಾರಿ ವಾಹನ ದುರ್ಬಳಕೆ.

ತಜ್ಞರ ಪ್ರಕಾರ, ಬಾಳೆಹಣ್ಣುಗಳು ಹಣ್ಣಾಗುತ್ತಿದ್ದಂತೆ ಅದರಲ್ಲಿರುವ ಪೋಷಕಾಂಶಗಳ ಮಟ್ಟವು ನಿರಂತರವಾಗಿ ಹೆಚ್ಚಾ ಗುತ್ತ ದೆ. ಹೀಗಾಗಿ ಹಣ್ಣಾದ ಬಾಳೆಹಣ್ಣನ್ನೇ ಹೆಚ್ಚಾಗಿ ಸೇವಿಸಬೇಕು. ಜೀರ್ಣಕ್ರಿಯೆಯನ್ನು ಬಲಪಡಿಸಲು ಬಾಳೆಹಣ್ಣು ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲಾಗಿದೆ. ಬಿಳಿರಕ್ತ ಕಣಗಳಿಗೆ ಹಸಿರು ಬಾಳೆಹಣ್ಣುಗಳಿಗಿಂತ ಕಪ್ಪು ಬಾಳೆಹಣ್ಣುಗಳು ೮ ಪಟ್ಟು ಹೆಚ್ಚು ಪರಿಣಾಮಕಾರಿ.

ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು ಹೃದಯದ ಆರೋಗ್ಯಕ್ಕೆ ಸಹಕಾರಿ. ಅತಿಸಾರದ ಸಮಯದಲ್ಲಿ ಬಾಳೆಹಣ್ಣುಗಳನ್ನು ಸೇವಿಸುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಬಾಳೆಹಣ್ಣು ಹೊಟ್ಟೆಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ಉದರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುತ್ತದೆ.

Exit mobile version