ಬೆಳಗ್ಗೆ ಖಾಲಿ ಹೊಟ್ಟೆಗೆ ನೀರು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ? ಇಲ್ಲಿದೆ ಮಾಹಿತಿ

water

Health Tips : ನೀರಿಲ್ಲದ (Health Tips of Drinking Water) ಬದುಕನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಕುಡಿಯುವುದು ಅತ್ಯಗತ್ಯ.

ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಾಣೆ ಮಾಡಲು, ದೇಹದ ತಾಪಮಾನವನ್ನು(Body Temperature) ನಿಯಂತ್ರಿಸಲು ಮತ್ತು ಕೀಲುಗಳ ಸಮರ್ಪಕವಾಗಿರಲು ಇದು ಆವಶ್ಯಕ.

ಹಾಗಾಗಿ ಮುಂಜಾನೆ ವೇಳೆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಯಾವ (Health Tips of Drinking Water) ರೀತಿಯ ಅನುಕೂಲತೆಗಳಿವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.


ತೂಕ ಇಳಿಸಲು : ಮುಂಜಾನೆ ಎದ್ದು ನೀರು ಕುಡಿಯುವುದರಿಂದ ತೂಕ ಇಳಿಸಬಹುದು ಎಂದು ಬಹಳಷ್ಟು ಮಂದಿ ಭಾವಿಸಿದ್ದಾರೆ. ಉದಾಹರಣೆಗೆ, ಹೆಚ್ಚು ನೀರು ಕುಡಿಯುವ ಯುವಜನರು ಸುಧಾರಿತ ದೇಹ ಸಮಯೋಜನೆಯನ್ನು ಹೊಂದಿದ್ದಾರೆ ಎಂದು 2019 ರಲ್ಲಿ ನಡೆಸಲ್ಪಟ್ಟ ಅಧ್ಯಯನವೊಂದರಿಂದ ತಿಳಿದು ಬಂದಿದೆ.


ಮಾನಸಿಕ ಸ್ವಾಸ್ಥ್ಯ : ನೀರು ಎನ್ನುವುದು ಅರಿವಿನ ಮತ್ತು ಮಾನಸಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. 2016ರ ಅಧ್ಯಯನವೊಂದರ ಪ್ರಕಾರ, ಸಣ್ಣ ನಿರ್ಜಲೀಕರಣವೂ ಕೂಡ ಅರಿವಿನ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿದುಬಂದಿದೆ.

ಬೆಳಗ್ಗೆ ಮಾತ್ರ ನೀರು ಕುಡಿಯುವ ಬದಲು, ಇಡೀ ದಿನ ಆಗಾಗ ನೀರು ಕುಡಿಯುತ್ತಿರುವುದು ಉತ್ತಮ ಮಾನಸಿಕ ಕ್ಷಮತೆಗೆ ಪೂರಕ ಎಂಬುದು 2019ರಲ್ಲಿ ನಡೆದ ಅಧ್ಯಯನವೊಂದರಿಂದ ತಿಳಿದು ಬಂದಿದೆ.

https://fb.watch/gdUU-PuSVP/


ಕಾಲೇಜು ವಿದ್ಯಾರ್ಥಿಗಳ ಮೇಲೆ 2019 ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ, ನಿರ್ಜಲೀಕರಣವು ಅಲ್ಪಾವಧಿಯ ಸ್ಮರಣೆ ಮತ್ತು ಗಮನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬಂದಿದೆ. ನೀರು ಕುಡಿದ ಬಳಿಕ, ಅಲ್ಪಾವಧಿಯ ಸ್ಮರಣೆ ಮತ್ತು ಗಮನ ಸುಧಾರಿಸಿರುವುದು ಕಂಡುಬಂದಿದೆ. ಹಾಗಾಗಿ ಮಾನಸಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬಯಸುವ ವ್ಯಕ್ತಿಗೆ, ಮುಖ್ಯವಾಗಿ ಬೆಳಗಿನ ಹೊತ್ತು ನೀರು ಕುಡಿಯುವುದರಿಂದ ಉಪಯೋಗವಾಗಬಹುದು.


ಚರ್ಮದ ಆರೋಗ್ಯ : ಹೆಚ್ಚಾಗಿ ನೀರು ಕುಡಿಯುವುದರಿಂದ ಚರ್ಮದ ಆರೋಗ್ಯ (Skin Health) ಮತ್ತು ಸೌಂದರ್ಯ ವೃದ್ಧಿಸುತ್ತದೆ ಎಂಬುದು ಹೆಚ್ಚಿನವರ ನಂಬಿಕೆ. ಚರ್ಮವು 30% ನೀರನ್ನು ಹೊಂದಿರುತ್ತದೆ, ಅದು ಅದರ ಆರೋಗ್ಯಕ್ಕೆ ಅಗತ್ಯ. ಹೆಚ್ಚು ನೀರಿನ ಸೇವನೆ ಚರ್ಮದ ರಚನೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುವುದು ಅಧ್ಯಯನಗಳಿಂದ ತಿಳಿದುಬಂದಿದೆ.

ನೀರು ಕುಡಿಯುವುದರಿಂದ ಕಿಡ್ನಿಗಳಿಗೆ ಕಲ್ಮಶವನ್ನು ದೇಹದಿಂದ ಹೊರ ಹಾಕಲು ಸಹಾಯವಾಗುತ್ತದೆ. 2010ರ ಅಧ್ಯಯನವೊಂದರ ಪ್ರಕಾರ, ಹೆಚ್ಚು ನೀರು ಸೇವಿಸುವುದರಿಂದ ಯುರೋಲಿಥಿಯಾಸಿಸನ್ನು ತಡೆಯಬಹುದು. ಅದು ಮೂತ್ರನಾಳದಲ್ಲಿ ಕಲ್ಲುಗಳು ಇದ್ದಾಗ ಸಂಭವಿಸುತ್ತದೆ.


ಹೃದಯ ರಕ್ತನಾಳದ ವ್ಯವಸ್ಥೆ ಸರಿಯಾಗಿ ನಡೆಯಬೇಕಾದರೆ ಹೆಚ್ಚು ನೀರು ಅವಶ್ಯಕ ಎಂಬುವುದು 2019ರ ಸಂಶೋಧನೆಯಿಂದ ತಿಳಿದು ಬಂದಿದೆ. ನೀರು, ಕೀಲುಗಳ ಸುತ್ತ ಇರುವ ನಯಗೊಳಿಸುವ ದ್ರವದ ಒಂದು ಅಂಶ. ಇದು ಕೀಲು ನೋವು ನಿವಾರಣೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ : https://vijayatimes.com/7-dead-in-helicopter-crash/


ಆದರೆ ಅತಿಯಾಗಿ ನೀರು ಕುಡಿಯುವುದರಿಂದ, ಮೆದುಳಿನ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು, ಗೊಂದಲ, ವಾಕರಿಕೆ ಮತ್ತು ವಾಂತಿ ಉಂಟಾಗಬಹುದು ಎನ್ನುವುದು ನೆನಪಿರಲಿ.
Exit mobile version