ನಾಲಿಗೆಗೂ ಸಿಹಿ ಆರೋಗ್ಯಕ್ಕೂ ಸಿಹಿ ಈ ಸೀಬೆ ಹಣ್ಣು: ಸೀಬೆಯ ಆರೋಗ್ಯಕ್ಕರ ಗುಣಗಳು ಇಲ್ಲಿವೆ ಓದಿ

Fruit

Health Tips : ಸೀಬೆಹಣ್ಣು (Guava Fruit) ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಒಂದು ಸೂಪರ್‌ ಫ್ರೂಟ್ ಆಗಿದೆ. ಇದರ ಸಿಪ್ಪೆ, ತಿರುಳು,

ಬೀಜ ಎಲ್ಲವನ್ನು ತಿನ್ನಬಹುದಾಗಿದ್ದು, ದಿನ ಒಂದು ಸೀಬೆಹಣ್ಣು ತಿನ್ನುವುದರಿಂದ ಹಲವಾರು ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ಇನ್ನು ಇದರ ಎಲೆಯನ್ನು ಕೂಡ ಮನೆಮದ್ದಾಗಿ (Home Remedies) ಬಳಸುತ್ತಾರೆ. ಅತಿಸಾರ ಉಂಟಾದಾಗ ಸೀಬೆಕಾಯಿ ಚಿಗುರು ಎಲೆಯ ರಸ ಕುಡಿದರೆ ತಕ್ಷಣ ನಿಲ್ಲುವುದು.

ಇದು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ದೊರೆಯುವುದರಿಂದ ದಿನನಿತ್ಯದ ಆಹಾರ ಕ್ರಮದಲ್ಲಿ ಸೇರಿಸಬಹುದು.

ಸೀಬೆಹಣ್ಣಿನಲ್ಲಿರುವ ಅದ್ಭುತ ಆರೋಗ್ಯಕರ ಗುಣಗಳ ಪಟ್ಟಿ ಇಲ್ಲಿದೆ ನೋಡಿ. ಸೀಬೆಹಣ್ಣು ಗರ್ಭಿಣಿಯರು ತಿನ್ನಲೇಬೇಕಾದ ಅತ್ಯುತ್ತಮವಾದ ಹಣ್ಣಾಗಿದೆ.

ಸೀಬೆ ಹಣ್ಣಿನ ಬೀಜ ತೆಗೆದು ತಿರುಳಿಗೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಗರ್ಭಿಣಿಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು, ಹೀಗೆ ಬಳಸುವುದರಿಂದ ಹೃದ್ರೋಗ, ಅರಿಶಿನ ಕಾಮಾಲೆ, ಉಬ್ಬಸ ಹಾಗೂ ಕ್ಷಯದಂತಹ ಕಾಯಿಲೆಗಳಿಗೆ ದೂರವಾಗುತ್ತವೆ.

ಇದನ್ನೂ ಓದಿ : https://vijayatimes.com/supremecourt-verdict-is-final/


ಚರ್ಮದ ಕಾಂತಿಗೆ ತುಂಬಾ ಒಳ್ಳೆಯದು : ದಿನ ಒಂದು ಸೀಬೆಕಾಯಿ ತಿಂದು ನೋಡಿ, ನಿಮ್ಮ ತ್ವಚೆಯಲ್ಲಿ ಅಕಾಲಿಕ ನೆರಿಗೆ ಸಮಸ್ಯೆ ಕಾಣಿಸುವುದೇ ಇಲ್ಲ.

ಇನ್ನು ಇದನ್ನು ತಿನ್ನುವ ಮೂಲಕ ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿಡುತ್ತದೆ. ಸೀಬೆಕಾಯಿಯಲ್ಲಿ ಅಗತ್ಯವಾದ ಕಬ್ಬಿಣಾಂಶ,

ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ನಾರಿನಂಶ, ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಎ, ಬಿ ಮತ್ತು ಸಿ ಎಲ್ಲವೂ ಇರುವುದರಿಂದ ತ್ವಚೆ ರಕ್ಷಣೆಯನ್ನು ಮಾಡುತ್ತದೆ.


ಇನ್ನು, ಸೀಬೆಕಾಯಿಯನ್ನು ಕೆಲವರು ಸಿಪ್ಪೆ ತೆಗೆದು ತಿನ್ನುತ್ತಾರೆ, ಆದರೆ ಇದನ್ನು ಸಿಪ್ಪೆ ಸಹಿತ ತಿಂದರೆ ಹೆಚ್ಚು ಆರೋಗ್ಯಕರ. ಸೀಬೆ ಕಾಯಿಯನ್ನು ಹಲ್ಲಿನಿಂದ ಕಚ್ಚಿ ತಿಂದರೆ ದಂತಕ್ಷಯ ಬಾಧೆ ಕಾಣಿಸುವುದಿಲ್ಲ, ಆದ್ದರಿಂದ ಹಲ್ಲುಗಳ ಆರೋಗ್ಯಕ್ಕೆ ಸೀಬೆಕಾಯಿ ತಿನ್ನುವುದು ಸೂಕ್ತ.


ತೂಕ ಇಳಿಸುವಲ್ಲಿ ಸಹಕಾರಿ : ತೆಳ್ಳಗಾಗಬೇಕು ಎಂದು ಬಯಸುವವರು ತಮ್ಮ ಆಹಾರ ಕ್ರಮದಲ್ಲಿ ಸೀಬೆಹಣ್ಣು ಬಳಸುವುದು ಒಳ್ಳೆಯದು. ಅದೇ ರೀತಿ,

ಸೀಬೆಕಾಯಿಯಲ್ಲಿ ಕಾರ್ಬೊಹೈಡ್ರೇಡ್ ಮತ್ತು ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ಬೊಜ್ಜನ್ನು ನಿಯಂತ್ರಿಸುತ್ತದೆ.

ಇದರಲ್ಲಿ ಕೊಬ್ಬಿನಂಶ ಕೇವಲ 0.9 ಇದ್ದು, 84 ಕ್ಯಾಲೋರಿ ಇರುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಈ ಹಣ್ಣು ತುಂಬಾ ಸಹಕಾರಿ. ಇನ್ನು, ಈ ಹಣ್ಣಿನಲ್ಲಿ ನಾರಿನಂಶ ಹಾಗೂ ಖನಿಜಾಂಶಗಳು ಅಧಿಕವಿದ್ದು,

ಇದನ್ನು ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುವುದಲ್ಲದೆ, ಹೊಟ್ಟೆಯೂ ತುಂಬುತ್ತದೆ. ಆದ್ದರಿಂದ ತೂಕ ಕಡಿಮೆಯಾಗಲು ಬಯಸುವವರು ಇದನ್ನು ತಿಂದು ಮೈಬೊಜ್ಜು ಕರಗಿಸಿಕೊಂಡು ಆರೋಗ್ಯ ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ : https://vijayatimes.com/smriti-irani-supports-18-year-old-girl/


ಬೆವರಿನ ಸಮಸ್ಯೆ ಇಲ್ಲವಾಗಿಸುತ್ತೆ : ಬೆವರಿನ (Sweat Odour) ದುರ್ನಾತ ನಮಗೆ ಮುಜುಗರ ತಂದರೆ, ನಮ್ಮ ಪಕ್ಕದಲ್ಲಿರುವವರಿಗೆ ಕಿರಿಕಿರಿ ಉಂಟಾಗುತ್ತದೆ.

ಕೆಲವರಿಗೆ ದಿನಕ್ಕೆರಡು ಬಾರಿ ಸ್ನಾನ ಮಾಡಿದರೂ ಬೇಗನೆ ಮೈ ಬೆವರುವುದರಿಂದ ದುರ್ವಾಸನೆ ಬೀರಲಾರಂಭಿಸುತ್ತದೆ.

ಪಾದಗಳು ಬೆವರಿದರಂತೂ ಹತ್ತಿರ ಯಾರೂ ಕೂರಲಿಕ್ಕೆ ಆಗುವುದಿಲ್ಲ ಅಷ್ಟೊಂದು ದುರ್ನಾತ ಬೀರಲಾರಂಭಿಸುತ್ತದೆ. ಈ ಸಮಸ್ಯೆಯನ್ನು ಸೀಬೆ ಗಿಡದ ಎಲೆಯಿಂದ ಇಲ್ಲವಾಗಿಸಬಹುದು.

ಹೌದು, ಸೀಬೆ ಗಿಡದ ಎಲೆಗಳನ್ನು ನುಣ್ಣಗೆ ಅರೆದು ಮೈಕೈಗೆ ತಿಕ್ಕಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾ ಬಂದರೆ, ಬೆವರಿನ ವಾಸನೆಯೂ ಇಲ್ಲದಂತಾಗುತ್ತದೆ.

ಇನ್ನೂ ಹೀಗೆ ಸ್ನಾನ ಮಾಡುವುದರಿಂದ ತ್ವಚೆ ಕಾಂತಿ ಕೂಡ ಹೆಚ್ಚುವುದು, ಇದರಲ್ಲಿರುವ ಗುಣಗಳು ಯೌವನದ ಕಳೆ ಮಾಸದಂತೆ ತ್ವಚೆಯನ್ನು ರಕ್ಷಣೆ ಮಾಡುತ್ತದೆ.

ಬಾಯಿ ದುರ್ವಾಸನೆ ತಡೆಗಟ್ಟಲು ಸೀಬೆಯ ಚಿಗುರು ಎಲೆಗಳ ಕಷಾಯಕ್ಕೆ ಉಪ್ಪು ಹಾಕಿ ದಿನಕ್ಕೆ ಮೂರು ಬಾರಿ ಬಾಯಿ ಮುಕ್ಕಳಿಸಿದರೆ ಸಾಕು. ಇನ್ನು ಹೀಗೆ ಮಾಡುವ ಮೂಲಕ ಬಾಯಿ ಹುಣ್ಣು ಹಾಗೂ ವಸಡಿನ ರಕ್ತಸ್ರಾವದಿಂದಲೂ ಮುಕ್ತಿ ಪಡೆಯಬಹುದು.

https://fb.watch/g8JKnByae7/ ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ !


ಸಾಮಾನ್ಯವಾಗಿ, ಶೀತ ಇದ್ದಾಗ ಸೀಬೆಕಾಯಿ ತಿಂದರೆ ಹೆಚ್ಚಾಗುತ್ತದೆ ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದರಿಂದ ಶೀತ ಕಡಿಮೆ ಮಾಡುವಲ್ಲಿ ಸಹಕಾರಿ. ಇದರಲ್ಲಿ ಕಬ್ಬಿಣದಂಶ ಅಧಿಕವಾಗಿರುವುದರಿಂದ ದೇಹಕ್ಕೂ ಶಕ್ತಿ ದೊರೆಯುತ್ತದೆ.
Exit mobile version