ಚಳಿಗಾಲದಲ್ಲಿ ಉಂಟಾಗುವ ಚರ್ಮದ ಸಮಸ್ಯೆ ಮತ್ತು ಅದರ ರಕ್ಷಣೆ ಹೇಗೆ?

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ತ್ವಚೆಯ ಮೆಲೆ ಅದರ ಪ್ರಭಾವ ಬೀರಲು ಆರಂಭಿಸುತ್ತದೆ. ಚಳಿಗಾಲದ ಗಾಳಿಯು ಹೆಚ್ಚಾಗಿ ಶು‍‍‍ಷ್ಕವಾಗಿರುತ್ತದೆ ಅದ್ದರಿಂದ ಒಣ ಚರ್ಮ, ಕೈ ಕಾಲು ಒಡೆಯುಲು ಪ್ರಾರಂಭವಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಚರ್ಮದ ಮೇಲಿನ ಆರೈಕೆಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ.  ಮತ್ತು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದರಿಂದ ದೇಹವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ನಮ್ಮ ದೇಹದ ತೇವಾಂಶ ಉಸಿರಾಟ, ಬೆವರು ಅಥವಾ ಮೂತ್ರ ವಿಸರ್ಜನೆಯೆಂದ ಕಳೆದುಕೊಳುತ್ತದೆ. ಹಾಗಾಗಿ ಈ ಕಾಲಗಳಲ್ಲಿ ಹೆಚ್ಚಾಗಿ ತರಕಾರಿಗಳು, ಹಣ್ಣುಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಆಭ್ಯಾಸವಾಗಿದೆ.  ಮತ್ತು ಅದಷ್ಟು ನೀರನ್ನು ಕುಡಿಯುವುದರಿಂದ ದೇಹವು ತೇವಾಂಶ ಭರಿತವಾಗಿ ಹಾಗೂ ತಾಜಾವಾಗಿ ಇರಲು ಸಹಕಾರಿಯಾಗುತ್ತದೆ. ದೇಹಕ್ಕೆ ಯಾವುದಾದರೂ ರೀತಿಯಿಂದ ನೀರನ್ನು ಸೇರಿಸುವುದು ಉತ್ತಮ. ಫ್ರೆಶ್ ಜ್ಯೊಸ್, ಸೊಪ್ಪುಗಳು ಬಹಳ ನೀರಿನ ಅಂಶವನ್ನು ಒಳಗೊಂಡಿರುತ್ತದೆ.  ಚಳಿಗಾಲದಲ್ಲಿ ಹೆಚ್ಚು ಹಸಿರು ತರಕಾರಿ ಸೇವಿಸುವುದು ಉತ್ತಮ, ಪಾಲಕ್ ನಂತಹ ಹಸಿರು ತರಕಾರಿಯಲ್ಲಿ ಕ್ಯಾಲೋರಿಸ್ ಹೆಚ್ಚು ಇದ್ದು,  ಪೋಷಕಾಂಶಗಳನ್ನು ಒದಗಿಸುತ್ತದೆ. ಮತ್ತು ನಮ್ಮ ದೇಹ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ.

ದೇಹಕ್ಕೆ ಮತ್ತು ಮುಖಕ್ಕೆ ಬೆಸ್ಟ್ ಮಾಯಿಶ್ಚರೈಸರ್.

ಒಣ ಚರ್ಮವು ಚಳಿಗಾಲದ ಬಹಳ ದೊಡ್ಡ ಸಮ್ಯಸೆಯಾಗಿದೆ, ಇದಕ್ಕೆ ರಾಸಾಯನಿಕ ಮಾಹಿಶ್ಕರೈಸರ್ ಬದಲು ತೈಲ ಆಧಾರಿತ ಮಾಹಿಶ್ಚರೈಸರ್ ಉಪಯೋಗಿಸುವುದು ಉತ್ತಮ. ಬಾದಾಮಿ ಎಣ್ಣೆ, ತೆಂಗಿನ ಎಣ್ಣೆಯಂತಹ ತೈಲಗಳು ದೇಹದ ತೇವಾಂಶವನ್ನು ಹಿಡಿದಿಡುತ್ತದೆ ಮತ್ತು ಮುಚ್ಚಿರುವ ಚ್ರಮದ ರಂಧ್ರಗಳಿಗೂ ತೇವಾಂಶವನ್ನು ಒದಗಿಸಲು ಸಹಾಯ ಮಾಡುತ್ತದೆ. ಮುಖದ ಚರ್ಮಕ್ಕೆ ಆಲಿವ್ ಎಣ್ಣೆ ಮತ್ತು ತೆಂಗಿನ ಎಣ್ಣೆ ಉತ್ತಮ. ರಾಸಾಯನಿಕ ಮಾಯಿಶ್ಚರೈಸರ್ ಬದಲು ಅಲೋವೆರದಂತಹ  ನೈಸಗರ್ಗಿಕ ಉತ್ಪನ್ನಗಳನ್ನು ಬಳಸುವುದು ಉತ್ತಮ.ಇದು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಚರ್ಮದ ಅಂದವನ್ನು ಹೆಚ್ಚಿಸುತ್ತದೆ.  ಚಳಿಗಾಲದಲ್ಲಿ ತ್ವಚೆ ಬಹಳ ಮೃದುವಾಗಿರುತ್ತದೆ ಮತ್ತು ಅದರ ಆರೈಕೆ ಬಹಳ ಮುಖ್ಯ ಆದ್ದರಿಂದ ದೇಹವನ್ನು ಸದಾ ತೇವಾಂಶವಾಗಿರುವಂತೆ ಕಾಪಡಿಕೊಳ್ಳಬೇಕು

Exit mobile version