ಸಬ್ಬಸಿಗೆ ಸೊಪ್ಪು/ ಸಬ್ಬಕ್ಕಿ ಸೊಪ್ಪಿನಲ್ಲಿ ಇಷ್ಟೊಂದು ಪೋಷಕಾಂಶಗಳು ಇದೆಯಾ

health

ಸೊಪ್ಪಿನ ಸಾರು, ಸೊಪ್ಪಿನ ಪಲ್ಯ ಊಟ ಇಷ್ಟಪಡುವವರಿಗೆ ಮತ್ತು ಆರೋಗ್ಯ ವೃದ್ಧಿಸಿಕೊಳ್ಳಲು(Healthtips of dill leaves) ಇಚ್ಛಿಸುವವರಿಗೆ ಸಬ್ಬಸಿಗೆ ಸೊಪ್ಪನ್ನು ಸೇವಿಸುವುದು ಉತ್ತಮ.

ನಮ್ಮ ಜನರು ಆರೋಗ್ಯ (Healthtips of dill leaves) ದೃಷ್ಟಿಯಿಂದ ಯಾವುದನ್ನು ಸೇವಿಸಬೇಕು ಎಂಬ ನಿರ್ಧಾರದಲ್ಲಿ ಬಹಳ ಎಡವಟ್ಟು ಮಾಡಿಕೊಳ್ಳುತ್ತಾರೆ.

ಕೈಗೆ ಸುಲಭವಾಗಿ ಸಿಗುವ ಒಳ್ಳೆ ಪೋಷಕಾಂಶಗಳ ಆಗರ ಆಹಾರಗಳನ್ನು ಹೆಕ್ಕಿ ಉಪಯೋಗಿಸದೇ ದುಬಾರಿ ಆಹಾರಗಳತ್ತ ತಮ್ಮ ಚಿತ್ತ ಮೂಡಿಸುತ್ತಾರೆ.

ಸಬ್ಬಸಿಗೆ ಸೊಪ್ಪಿನಲ್ಲಿ(Healthtips of dill leaves) ನಿಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಿರುವ ವಿಟಮಿನ್ ಎ(Vitamin A), ಸಿ, ಕ್ಯಾಲ್ಸಿಯಂ(Calcium), ಕಬ್ಬಿಣ(Iron) ಮತ್ತು ಮ್ಯಾಂಗನೀಸ್(Manganese) ಅಂಶಗಳನ್ನು ಹೊಂದಿದೆ.

ಇದು ದೇಹಕ್ಕೆ ಹತ್ತು ಹಲವು ಪ್ರಯೋಜನಗಳನ್ನು ನೀಡುತ್ತದೆ.

ದೇಹದ ತೂಕ ನಿವಾರಣೆ : ನಮ್ಮಲ್ಲಿ ಸಾಕಷ್ಟು ಜನರು ದೇಹದ ತೂಕ ಇಳಿಸಲು ಹರಸಾಹಸ ಪಡುತ್ತಾರೆ. ಆದರೆ, ಇದಕ್ಕೆ ಸುಲಭ ಪರಿಹಾರ ಸಬ್ಬಸಿಗೆ ಸೊಪ್ಪಿನ (dill leaves)ಸಾಂಬಾರು ಅಥವಾ ಸಬ್ಬಸಿಗೆ ಪಲ್ಯ ಸೇವೆನೆಯಿಂದ ತೂಕ ಇಳಿಕೆಗೆ ಸಹಾಕಾರಿಯಾಗಲಿದೆ. ಗ್ರೀನ್ ಟೀ ಜೊತೆಗೆ ಸಬ್ಬಸಿಗೆ ಎಲೆಗಳನ್ನು ಬೆರೆಸಿ ಕುಡಿಯುವುದರಿಂದ ದೇಹದಲ್ಲಿರುವ ಕೆಟ್ಟ ಕೊಬ್ಬಿನಾಂಶ ಕರಗುತ್ತದೆ.

https://www.youtube.com/watch?v=Fk-DxQhZ02U

ನಿದ್ರಾಹೀನತೆ ಸಮಸ್ಯೆ : ಅನೇಕ ಜನರಿಗೆ ಬೆಳಗ್ಗಿನಿಂದ ಕೆಲಸ ಮಾಡಿ ಆಯಾಸವಾದರು ರಾತ್ರಿ ಸಮಯದಲ್ಲಿ ನಿದ್ದೆ ಬರುವುದಿಲ್ಲ. ಒಬ್ಬ ಮನುಷ್ಯನಿಗೆ ಕನಿಷ್ಟ ಅಂದ್ರೂ 8 ಗಂಟೆಗಳ ಕಾಲ ನಿದ್ರೆ ಸಿಗಬೇಕು. ಅದು ಆರೋಗ್ಯವನ್ನು ಉತ್ತಮವಾಗಿಡುತ್ತದೆ. ಹೀಗಾಗಿ ನಿದ್ರಾಹೀನತೆ ಸಮಸ್ಯೆಯಿಂದ ಬಳಲುವವರು ಸಬ್ಬಸಿಗೆ ಸೊಪ್ಪನು ಸೇವಿಸುವ ಅಭ್ಯಾಸ ರೂಡಿಸಿಕೊಳ್ಳಿ.

https://vijayatimes.com/russia-detains-islamic-state-terrorist/

ಬಿಕ್ಕಳಿಕೆ ನಿವಾರಣೆ : ಹಲವರಿಗೆ ಊಟ ಮಾಡುವಾಗ ಬಿಕ್ಕಳಿಕೆ, ನೀರು ಸೇವಿಸದೇ ಇದ್ದರೇ ಬಿಕ್ಕಳಿಕೆ ಸಮಸ್ಯೆ ಕಾಡುತ್ತದೆ. ಪದೇ ಪದೇ ಬಿಕ್ಕಳಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ, ಅಂಥವರು ಬಿಕ್ಕಳಿಕೆ ನಿವಾರಣೆಗೆ ಸಬ್ಬಸಿಗೆ ಸೇವಿಸುವುದನ್ನು ಹೆಚ್ಚು ಮಾಡಿಕೊಳ್ಳಿ.

https://vijayatimes.com/russia-detains-islamic-state-terrorist/

ಮೂಳೆಗಳಿಗೆ ಉತ್ತಮ : ಸಬ್ಬಸಿಗೆ ಸೇವನೆ ರೂಡಿಸಿಕೊಳ್ಳುವುದರಿಂದ ದೇಹದ ಮೂಳೆಗಳು ಬಲಿಷ್ಟವಾಗುತ್ತದೆ. ಆದಷ್ಟು ಸಬ್ಬಸಿಗೆ ಸಾರು ಅಥವಾ ಸಬ್ಬಸಿಗೆ ಸೊಪ್ಪಿನ ಪಲ್ಯ ಸೇವಿಸುವ ಅಭ್ಯಾಸ ಮಾಡಿಕೊಂಡರೆ, ಮೂಳೆಗಳ ಆರೋಗ್ಯ ವೃದ್ದಿಸುವಲ್ಲಿ ಸಬ್ಬಸಿಗೆ ಬಲು ಸಹಾಯಕಾರಿ.

Exit mobile version