ಅಧಿಕ ರಕ್ತದೊತ್ತಡದ ಕಾಯಿಲೆಯನ್ನು ನಿಯಂತ್ರಿಸುವ ಆರೋಗ್ಯಕರ ಜ್ಯೂಸ್‌ಗಳು

ಅಧಿಕ ರಕ್ತದೊತ್ತಡದ ಕಾಯಿಲೆಯಿಂದ ಬಳಲುತ್ತಿರುವವರು ಈ ಕಾಯಿಲೆಯನ್ನು (Healthy juices to high bp) ನಿರ್ಲಕ್ಷಿಸಿದಲ್ಲಿ ಅಥವಾ ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ

ದೇಹದ ಪ್ರಮುಖ ಅಂಗಗಳಾದ ಹೃದಯದ ರಕ್ತನಾಳಗಳು, ಕಿಡ್ನಿ ಹಾಗೂ ಮೆದುಳುಗಳಿಗೆ ಹಾನಿ ಆಗುವುದಲ್ಲದೆ, ಪ್ರಾಣಕ್ಕೆ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚಾಗಿದ್ದು, ಈ ಕಾಯಿಲೆ ಇದ್ದವರು,

ನಿಯಮಿತವಾಗಿ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡುವುದರ ಜೊತೆಗೆ, ಕೆಲವೊಂದು ಪಾನೀಯಗಳನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

ಟೊಮೆಟೊ ಜ್ಯೂಸ್
ಮಾನಸಿಕ ಒತ್ತಡದ ಸಮಸ್ಯೆಯಿಂದ ಎದುರಾಗುವ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಿಸಲು ಪ್ರತಿದಿನ ಬೆಳಗ್ಗಿನ ಜಾವ ಒಂದು ಲೋಟ ಟೊಮೆಟೊ ಜ್ಯೂಸ್ (Tomato Juice) ಕುಡಿಯಬೇಕು.

ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದಲ್ಲದೆ ಹೃದಯದ ಆರೋಗ್ಯವು (Healthy juices to high bp) ಕೂಡ ಚೆನ್ನಾಗಿರುತ್ತದೆ.

ದಾಸವಾಳ ಹೂವಿನ ಚಹಾ
ಅಧಿಕ ರಕ್ತದೊತ್ತಡದ ಕಾಯಿಲೆ ನಿಯಂತ್ರಣ ತಪ್ಪಿದರೆ, ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ಇದರಿಂದ ಬಳಲುತ್ತಿರುವವರು, ಬೆಳಗ್ಗಿನ ಸಮಯದಲ್ಲಿ ಆಂಟಿಆಕ್ಸಿಡೆಂಟ್ (Antioxidant)

ಅಂಶಗಳು ಹೆಚ್ಚಾಗಿರುವ ದಾಸವಾಳದ ಹೂವಿನ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ದಾಳಿಂಬೆ ಜ್ಯೂಸ್
ದಾಳಿಂಬೆ ಜ್ಯೂಸ್ ನಲ್ಲಿ ಪಾಲಿಫೆನಾಲಿಕ್ (Polyphenolic) ಆಂಟಿಆಕ್ಸಿಡೆಂಟ್ ಉತ್ತಮ ಪ್ರಮಾಣದಲ್ಲಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಣ ಮಾಡು ವುದರ ಜೊತೆಗೆ ಹೃದಯದ

ಆರೋಗ್ಯವನ್ನು ಕೂಡ ಕಾಪಾಡುತ್ತದೆ.

ಬೀಟ್‌ರೂಟ್ ಜ್ಯೂಸ್
ಅಧಿಕ ನೈಟ್ರೇಟ್ (Nitrate) ಅಂಶ ಕಂಡುಬರುವ ಬೀಟ್‌ರೂಟ್ (Beetroot) ಅನ್ನು ಜ್ಯೂಸ್ ಮಾಡಿ ಬೆಳಗ್ಗಿನ ಜಾವ ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಮೂಲಂಗಿಯ ಜ್ಯೂಸ್
ಇನ್ನು ಇದರಲ್ಲಿ ಪೊಟ್ಯಾಶಿಯಮ್ (Potassium) ಅಂಶ ಹೆಚ್ಚಾಗಿದ್ದು, ಮೂಲಂಗಿಯ ಜ್ಯೂಸ್ ಮಾಡಿ ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಇದನ್ನು ಓದಿ: ಗೋಮಾಂಸ ರಫ್ತಿನ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು : ನಟ ಚೇತನ್

Exit mobile version