ಹೃದಯಾಘಾತಕ್ಕೆ 8ನೇ ತರಗತಿ ವಿದ್ಯಾರ್ಥಿ ಬಲಿ ! ಈ ಸಾವು ನ್ಯಾಯವೇ?

Mangalore : ಎರಡು ಡಿನಗಳ ಹಿಂದಷ್ಟೇ ಕೊಡಗಿನ 6ನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯದಿಂದ ಮೃತಪಟ್ಟ ಬೆನ್ನ ಹಿಂದೆಯೇ ಮತ್ತೊಂದು ಘಟನೆ ಈಗ ಮಂಗಳೂರಿನ ಸುರತ್ಕನ್ನಲ್ಲಿ(Heart attack in childrens) ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಕೃಷ್ಣಾಪುರ ಏಳನೇ ಬ್ಲಾಕ್ ನಿವಾಸಿ ಅಬ್ದುಲ್ ರೆಹಮಾನ್ ಎಂಬವರ ಪುತ್ರ ಮೊಹಮ್ಮದ್ ಹಸೀನ್(14)(Mohammad Haseen) ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಈತ 8ನೇ ತರಗತಿ ಓದುತ್ತಿದ್ದ. ಹಸೀನ್ ಸೋಮವಾರ ಬೆಳಗ್ಗೆ 9 ಗಂಟೆಗೆ ಶಾಲೆಗೆ ಹೊರಡಲು ಸಿದ್ಧವಾಗಿದ್ದ, ಅಷ್ಟರಲ್ಲಿ ಇದ್ದಕ್ಕಿದ್ದಂತೆ ಎದೆ ನೋವಿನಿಂದ ಕುಸಿದು ಬಿದ್ದ.

ತಕ್ಷಣ ಕುಟುಂಬಸ್ಥರು ಅಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೂ ಚಿಕಿತ್ಸೆ ಫಲಕಾರಿಯಾಗದೆ ಹಸೀನ್‌ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಎರಡು ದಿನಗಳ ಹಿಂದಷ್ಟೇ ಕೊಡಗು(Kodagu) ಜಿಲ್ಲಾ ಕೋಶನ್ ನಗರ ತಾಲೂಕಿನ ಕೊಡು ಮಂಗಳೂರಿನಲ್ಲಿ,

ಕೊಪ್ಪ ಭಾರತ ಮಾತಾ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದ ಕೀರ್ತನ್(12) ಹೃದಯಾಘಾತದಿಂದಾಗಿ ಶನಿವಾರ ತಡರಾತ್ರಿ (ಜ.08) ಆಸ್ಪತ್ರೆ ಕರೆದೊಯ್ಯವ ವೇಳೆ ದಾರಿ‌ಮಧ್ಯೆಯೇ ಸಾವನ್ನಪ್ಪಿದ್ದ.

ಇದನ್ನೂ ಓದಿ : https://vijayatimes.com/siddhu-haunted-fear-of-defeat/

ಅದಲ್ಲದೆ ಉತ್ತರ ಪ್ರದೇಶದ(Uttar Pradesh) ಕಾನ್ಪುರದಲ್ಲಿ ಒಂದೇ ವಾರದಲ್ಲಿ 98 ಮಂದಿ ಹೃದಯಾಘಾತದಿಂದ ಸಾವಿಗಿಡಾಗಿದ್ದಾರೆ ಎಂದು ಲಕ್ಷ್ಮೀಪತಿ ಸಿಂಘಾನಿಯಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ(Lakshmipat Singhania Institute of Cardiology) ಇಂದು ಮಾಹಿತಿ ಬಿಡುಗಡೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಯುವ ಜನರಲ್ಲಿ ಹೃದಯಾಘಾತದ (Heart attack in childrens) ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತಿದೆ.

ಇದ್ದಕ್ಕಿದ್ದಂತೆಯೇ ಅನೇಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಯುವ ಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಹಿನ್ನಲೆ ವೈದ್ಯರು ಮನವಿ ಮಾಡಿಕೊಳ್ಳುವ ರೀತಿಯಲ್ಲಿ ವಿವರಣೆ ನೀಡಿದ್ದಾರೆ.

ಬದಲಾದ ಜೀವನ ಶೈಲಿಯಿಂದ ಹೃದಯದ ಆರೋಗ್ಯವು ಹಂತ ಹಂತವಾಗಿ ಕ್ಷೀಣಿಸುತ್ತಿದೆ. ಹೃದಯದ ರಕ್ತನಾಳಗಳಲ್ಲಿ, ರಕ್ತವು ಕೆಂಪುಗಟ್ಟಿದಾಗ ಹೃದಯ ಅಪಘಾತ ಸಂಭವಿಸುತ್ತದೆ.

ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ, ಧೂಮಪಾನ, ಮಾದಕ ವಸ್ತು ಸೇವನೆ, ಒತ್ತಡದ ಜೀವನಶೈಲಿ, ವಾಯುಮಾಲಿನ್ಯ ಸೇರಿ ಹೀಗೆ ಹಲವಾರು ಕಾರಣಗಳಿಂದ ಹೃದಯ ಅಪಘಾತ(heart attack) ಸಂಬಂಧಿಸಿದಂತೆ ಅದಲ್ಲದೆ ಅನುವಂಶೀಯತೆಯಿಂದಲೂ ಕೆಲವರಿಗೆ ಹೃದಯ ಅಪಘಾತವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

Exit mobile version