ಯುವಜನತೆಯಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣವೇನು..? ತಪ್ಪಿಸುವ ಮಾರ್ಗಗಳು..!

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಯುವಜನತೆಯೇ ಹೃದಯಾಘಾತಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಯುವಜನತೆಯಲ್ಲಿ ಹೃದಯಾಘಾತದ ಪ್ರಮಾಣ ತೀವ್ರ ಗತಿಯಲ್ಲಿ (heart attacks Ways to avoid)

ಏರಿಕೆಯಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಸಂಶೋಧನೆಯ ಪ್ರಕಾರ, ಹೃದಯಾಘಾತಕ್ಕೆ ತುತ್ತಾದವರಲ್ಲಿ ಶೇಕಡಾ 25 ಪ್ರತಿಶತದಷ್ಟು ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಇದರಲ್ಲಿ,

ಶೇಕಡಾ 30ರಷ್ಟು ಮಧ್ಯವಯಸ್ಕರು ಕಂಡುಬರುತ್ತಿದ್ದಾರೆ. ಧೂಮಪಾನ, ಅಧಿಕ ಬಿಪಿ, ಮಧುಮೇಹ ಮುಂತಾದ ಅಭ್ಯಾಸವಿಲ್ಲದ ಯುವಕರಲ್ಲಿ ಕೂಡ ಹೃದಯಾಘಾತವಾಗುತ್ತಿದೆ. ಹೃದಯಾಘಾತಕ್ಕೆ ನಿಖರವಾದ

ಇದನ್ನು ಓದಿ: ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ಕಾರಣಗಳನ್ನು ಪತ್ತೆ ಹೆಚ್ಚಲು ಸಾಧ್ಯವಾಗಿಲ್ಲ. ಆದರೆ ಆಧುನಿಕ ಜೀವನಶೈಲಿ, ಆಹಾರ ಕ್ರಮ, ನಗರ ಜೀವನದ ಒತ್ತಡದ ಮಟ್ಟಗಳು ಇದಕ್ಕೆ ಕಾರಣವಾಗುತ್ತದೆ. ಹೃದಯಾಘಾತ ಕೆಲವೊಮ್ಮೆ ಸೂಚನೆ ನೀಡದರೆ, ಮತ್ತೆ ಕೆಲವೊಮ್ಮೆ ಸೂಚನೆಯನ್ನು ನೀಡಿಲ್ಲ.

ಪುನೀತ್ ರಾಜ್ ಕುಮಾರ್, ಮತ್ತು ಚಿರಂಜೀವಿ ಸರ್ಜಾರಲ್ಲಿ ಯಾವುದೇ ಸೂಚನೆ ನೀಡದೆ (heart attacks Ways to avoid) ಹೃದಯಾಘಾತವಾಗಿರುತ್ತದೆ.

– ತೀವ್ರವಾದ ವರ್ಕೌಟ್ಗಳು, ಪ್ರೋಟೀನ್ ಶೇಕ್ಗಳು ಮತ್ತು ಇತರ ಅಂಶಗಳು ಹೃದಯಾಘಾತವನ್ನು ಪ್ರಚೋದಿಸಬಹುದು.

– ಜಿಮ್ನಲ್ಲಿ ಐಸೊಮೆಟ್ರಿಕ್ ವ್ಯಾಯಾಮಗಳನ್ನು ತಪ್ಪಿಸುವುದು ಒಳ್ಳೆಯದು. ವಾಕಿಂಗ್ ಮತ್ತು ಸೈಕ್ಲಿಂಗ್ನಂತಹ ಐಸೊಟೋನಿಕ್ ವ್ಯಾಯಾಮಗಳನ್ನು ಮಾಡುವುದು ಉತ್ತಮವಾಗಿರುತ್ತದೆ.

– ಸ್ನಾಯುಗಳಿಗೆ ಒತ್ತಡ ಹಾಕುವ ವ್ಯಾಯಾಮಗಳಿಂದ ದೂರವಿರುವುದು ಒಳಿತು.

– ಕುಟುಂಬಸ್ಥರಲ್ಲಿ ಹೃದ್ರೋಗ ಸಂಬಂಧಿ ರೋಗಗಳಿದ್ದರೆ ಅದು ಕೂಡ ಕುಟುಂಬದಲ್ಲಿ ಮತ್ತೊಬ್ಬರಿಗೆ ಹೃದಯಾಘಾತಕ್ಕೆ ಕಾರಣವಾಗಬಹುದು. ಹೀಗಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

– ಅತಿಯಾದ ಮಸಾಲೆ ಪದಾರ್ಥಗಳು ಮತ್ತು ಮಾಂಸಾಹಾರ ಸೇವನೆಯೂ ಕೂಡಾ ದೇಹದಲ್ಲಿ ಕೊಲಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯದ ಕಾರ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

– ಸದಾ ಕುಳಿತು ಕೆಲಸ ಮಾಡುವ ಜನರಲ್ಲಿ ಹೃದಯಾಘಾತ ಸಂಭವ ಹೆಚ್ಚುತ್ತದೆ. ಹೀಗಾಗಿ ದೇಹವನ್ನು ಕ್ರಿಯಾಶೀಲವಾಗಿಟ್ಟುಕೊಳ್ಳುವುದು ಉತ್ತಮ.

ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ:

– ನಿಯಮಿತ ಹೃದಯ ಸೇರಿದಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.
– ಐಸೊಮೆಟ್ರಿಕ್ ವ್ಯಾಯಾಮಗಳನ್ನು ತಪ್ಪಿಸಿ ಹೆಚ್ಚು ಐಸೊಟೋನಿಕ್ ವ್ಯಾಯಾಮಗಳನ್ನು ಮಾಡಿ
– ಹೆಚ್ಚುವರಿ ಸಕ್ಕರೆ ಸೇವನೆ ಮತ್ತು ಕೊಬ್ಬಿನ ಸೇವನೆಯನ್ನು ನಿಯಂತ್ರಿಸಿ.
– ಕುಟುಂಬದ ಸದಸ್ಯರಿಗೆ ಹೃದಯ ಕಾಯಿಲೆಯಿದ್ದರೆ ಹೃದ್ರೋಗಶಾಸ್ತ್ರಜ್ಞರನ್ನು ಭೇಟಿ ಮಾಡಿ.
– ಜೀವನಶೈಲಿಯನ್ನು ಬದಲಾಯಿಸಿ. ಮಾನಸಿಕ ಮತ್ತು ದೈಹಿಕವಾಗಿ ಕ್ರಿಯಾಶೀಲರಾಗಿರಿ.
– ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು.

Exit mobile version