ತಮಿಳುನಾಡಿನಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ಥ, ಸೈಕ್ಲೋನ್ ಆರ್ಭಟ, ಇಬ್ಬರ ಸಾವು

Chennai: ಬಂಗಾಳ ಕೊಲ್ಲಿಯಲ್ಲಿ (Bay of Bengal) ಉಂಟಾಗಿರುವ ಮಿಚಾಂಗ್ ಚಂಡಮಾರುತದಿಂದ (Heavy Rains in Chennai) ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಇದರಿಂದ

ರಾಜಧಾನಿ ಚೆನ್ನೈ ಸೇರಿದಂತೆ ಅನೇಕ ಪ್ರದೇಶಗಳು ರಸ್ತೆಗಳು ಮತ್ತು ಮನೆಗಳು ಜಲಾವೃತವಾಗಿ ಸೈಕ್ಲೋನ್ (Cyclone) ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದ್ದು, ತಮಿಳುನಾಡಿನ

ಜನರಿಗೆ ಜಾಗ್ರತೆ ವಹಿಸಲು (Heavy Rains in Chennai) ಎಚ್ಚರಿಕೆ ನೀಡಲಾಗಿದೆ.

ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿ (Tamil Nadu, Andhra Pradesh and Puducherry)ಗಳಲ್ಲಿ ಮಿಂಚು ಚಂಡಮಾರುತದ ಪರಿಣಾಮ ಭಾರಿ ಮಳೆ ಸುರಿಯುತ್ತಿದೆ. ವಿಪರೀತ ಗಾಳಿ

ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಚೆನ್ನೈ (Chennai)ನಗರ ಸೇರಿದಂತೆ ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ರಸ್ತೆಗಳು ಜಲಾವೃತವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಚೆನ್ನೈನಲ್ಲಿ ಹೊಸದಾಗಿ ನಿರ್ಮಿಸಿದ್ದ ಗೋಡೆ ಕುಸಿದು ಜಾರ್ಖಂಡ್‌ನ ಇಬ್ಬರು ಕಾರ್ಮಿಕರ ಸಾವನ್ನಪ್ಪಿದ್ದು, ಚೆನ್ನೈ, ತಂಬರಮ್, ತಿರುವಳ್ಳೂರ್, ಕಾಂಚಿಪುರಂ (Tambaram, Tiruvallur, Kanchipuram)

ಗಳಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ, ರೈಲು, ಬಸ್ ಹಾಗೂ ವಿಮಾನ ಸಂಚಾರಗಳಲ್ಲಿ ವ್ಯತ್ಯಯವಾಗಿ, ಅನೇಕ ವಿಮಾನಗಳ ಸಂಚಾರ ರದ್ದುಮಾಡಲಾಗಿದೆ.

ಕಳೆದ ಮೂರು ದಿನಗಳಿಂದ ಕರಾವಳಿ ಭಾಗಗಳಲ್ಲಿ ಮಳೆಯಾಗುತ್ತಿದ್ದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲ ಬೆಟ್ಟದಲ್ಲಿ ಶನಿವಾರ ಸಂಜೆಯಿಡೀ ಸಂಪೂರ್ಣ ವಿದ್ಯುತ್ ಕಡಿತ ವಾಗಿತ್ತು ಆಂಧ್ರಪ್ರದೇಶದಲ್ಲಿ

ಕೂಡ ಮಿಚಾಂಗ್ (Cyclone Michaung) ಆರ್ಭಟ ತೀವ್ರವಾಗಿದ್ದು ಇದು ತೀರಾ ಅಪರೂಪದ ಸನ್ನಿವೇಶವಾಗಿದೆ. ಅಲ್ಲದೆ ರಾತ್ರಿ 11 ರಿಂದ ಭಾನುವಾರ ಬೆಳಿಗ್ಗೆ 9 ಗಂಟೆಯವರೆಗೂ ವಿದ್ಯುತ್ ಪೂರೈಕೆ ಇರಲಿಲ್ಲ.

ತಮಿಳುನಾಡಿನ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಕರ್ತವ್ಯಕ್ಕೆ ಹಾಜರಾಗಲು ಕೂಡ ಸಾಧ್ಯವಾಗುತ್ತಿಲ್ಲ. ತಮಿಳುನಾಡಿನಲ್ಲಿ ಸತತ ಧಾರಾಕಾರ ಮಳೆಯಾಗುತ್ತಿದ್ದು ಚೆನ್ನೈ ಸಾರಿಗೆ ಸಂಸ್ಥೆಯು 2,800

ಬಸ್‌ಗಳ ಪೈಕಿ 600 ಬಸ್‌ಗಳನ್ನು ಮಾತ್ರ ರಸ್ತೆಗಿಳಿದಿದ್ದು ಕೊಯಂಬೇಡು, ತಂಬಾರಂನಂತಹ ಮತ್ತು ಎಗ್ಮೋರೆ ಪ್ರದೇಶಗಳಿಗೆ ರೈಲು ಹಾಗೂ ಬಸ್‌ಗಳಲ್ಲಿ ಬಂದಿಳಿದ ಪ್ರಯಾಣಿಕರಿಗೆ ಅಲ್ಲಿಂದ ಹೋಗಲು

ವಾಹನಗಳಿಲ್ಲದೆ ಪರದಾಡುತ್ತಿದ್ದು. ಕೇವಲ 2- 3 ಕಿಮೀ ದೂರದ ಪ್ರಯಾಣಕ್ಕೆ ಆಟೋರಿಕ್ಷಾ (Auto Rikshaw) ಚಾಲಕರು ಗರಿಷ್ಟ 500 ರೂಪಾಯಿ ಕೇಳುತ್ತಿರುವುದರಿಂದ ಪ್ರಯಾಣಿಕರ ಕಡಿಮೆ ಬೆಲೆ ಕೊಟ್ಟು

ಪ್ರಯಾಣಿಸಲು ಅವರ ಪರದಾಟ ಹೆಚ್ಚಿಸಿದೆ.

ಚೆನ್ನೈ ವಿಮಾನ ನಿಲ್ದಾಣದಿಂದ ಹೊರಡುವ ಹಾಗೂ ಆಗಮಿಸುವ ಅನೇಕ ವಿಮಾನಗಳು ರದ್ದುಗೊಂಡಿದ್ದು ಭಾರಿ ಗಾಳಿ, ಮಳೆ ಕಾರಣದಿಂದ ವಿಮಾನ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ ಹಾಗಾಗಿ ಕನಿಷ್ಠ

20 ವಿಮಾನಗಳ ಹಾರಾಟ ವಿಳಂಬಗೊಂಡಿದೆ. ಆದ್ದರಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ವಿಮಾನದ ಸ್ಥಿತಿಗತಿ ಪರಿಶೀಲಿಸುವಂತೆ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಸಲಹೆ ನೀಡಿದೆ.

ಆದರೆ ಏರ್‌ಪೋರ್ಟ್ (Airport) ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.

ಚೆನ್ನೈನ ಕನಿಷ್ಠ 14 ಸಬ್‌ವೇಗಳು (Subway) ಮುಚ್ಚಿಹೋಗಿವೆ.ವಿದ್ಯುತ್ ಹಾಗೂ ಇಂಟರ್ನೆಟ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ

ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಲ್ಲದೆ ಸಬ್ ಅರ್ಬನ್ ರೈಲು (Suburban Train)ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಜನರ ಆರೋಗ್ಯದ ದೃಷ್ಟಿಯಿಂದ ಕುದಿಸಿದ ನೀರನ್ನೇ ಕುಡಿಯುವಂತೆ ಜನರಿಗೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಮಳೆ ಹಾಗೂ ಚಳಿ ವಾತಾವರಣದಿಂದ ಬ್ಯಾಕ್ಟೀರಿಯಾ (Bacteria), ವೈರಸ್‌ಗಳು

ಹೆಚ್ಚುವ ಅಪಾಯವಿದೆ ಎಂದು ಅದು ಹೇಳಿದೆ. ಎನ್‌ಡಿಆರ್‌ಎಫ್ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಸಕ್ರಿಯವಾಗಿ ತಂಬರಮ್ ಪ್ರದೇಶದಲ್ಲಿ ಮತ್ತು ಜಲಾವೃತ ಪ್ರದೇಶಗಳಲ್ಲಿ ಸಿಲುಕಿದ್ದ

15ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ.

ಮತ್ತಷ್ಟು ಮಳೆ ಸೂಚನೆ
ಚೆನ್ನೈ, ಚೆಂಗಲಪಟ್ಟು,ಕಂಚೀಪುರಂ, ತಿರುವಳ್ಳೂರ್ ಜಿಲ್ಲೆಗಳಲ್ಲಿ ಗಂಟೆಗೆ 60- 70 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಕಡ್ಡಲೋರ್, ಕಲ್ಲಕುರಿಚಿ ಮತ್ತು ತಿರುಪತ್ತೂರ್ ಜಿಲ್ಲೆಗಳಲ್ಲಿ ವಿಪರೀತ ಮಳೆ ಸಾಧ್ಯತೆ ಇದೆ.

ಆದ್ದರಿಂದ ವೆಲ್ಲೂರ್, ರಾಣಿಪೇಟೆ, ತಿರುವಣ್ಣಾಮಲೈ, ವಿಲ್ಲುಪುರಂ (Vellore, Ranipet, Tiruvannamalai, Villupuram) ಜಿಲ್ಲೆಗಳಲ್ಲಿ ಮಳೆ ಆರ್ಭಟ ಇನ್ನಷ್ಟು ಜೋರಾಗುವ ಸಾಧ್ಯತೆ ಇದ್ದು . ಚೆನ್ನೈ,

ಚೆಂಗಲಪಟ್ಟು, ಕಾಂಚಿಪುರಂ, ಹಾಗೂ ತಿರುವಳ್ಳೂರು ಜಿಲ್ಲೆಗಳ ಹಲವೆಡೆ ಕುಂಭದ್ರೋಣ ಮಳೆಯ ಎಚ್ಚರಿಕೆ ನೀಡಲಾಗಿದೆ.

ಇದನ್ನು ಓದಿ: ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯ: ಬೆಂಗಳೂರಿನಲ್ಲಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ

Exit mobile version