Kathmandu : (ಜು.11) ಮೌಂಟ್ ಎವರೆಸ್ಟ್ (helicopter crash in Nepal) ಶಿಖರದ ಸೌಂದರ್ಯ ಸವಿಯಲು ತೆರಳಿದ್ದ ವಿದೇಶಿ ಪ್ರಯಾಣಿಕರಿದ್ದ ನೇಪಾಳ ಹೆಲಿಕಾಪ್ಟರ್ (Helicopter)
ಪತನವಾಗಿದೆ. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ಪೈಕಿ ಐವರು ಮೃತಪಟ್ಟಿದ್ದಾರೆ ಮತ್ತೊರ್ವನ ಪತ್ತೆ ಇಲ್ಲ ಎಂದು ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ.

ಘಟನೆಯ ವಿವರ: ಹೆಲಿಕಾಪ್ಟರ್ ಮೂಲಕ ಐವರು ಮೆಕ್ಸಿನ್ (Mexin) ಪ್ರಜೆಗಳು ಮೌಂಟ್ ಎವರೆಸ್ಟ್ ಸೌಂದರ್ಯ ಸವಿಯಲು ತೆರಳಿದ್ದರು. ಆದ್ರೆ ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಸೊಲೊಕುಂಬುವಿನಿಂದ
(Solokumbuvi) ಕಾಠ್ಮಂಡುವಿಗೆ ಮರಳುತ್ತಿದ್ದ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿದೆ. 10.05ಕ್ಕೆ ಸುಲೊಕುಂಬುವಿನಿಂದ ಕಠ್ಮಂಡುವಿಗೆ ನೇಪಾಳದ ಮನಾಂಗ್ ಏರ್ ಹೆಲಿಕಾಪ್ಟರ್ ಪ್ರಯಾಣ ಬೆಳೆಸಿದೆ.
ಆದರೆ ಹೆಲಿಕಾಪ್ಟರ್ ರೆಡಾರ್ ಸಂಪರ್ಕ ಸುಮಾರು 10.15ರ ಸುಮಾರಿಗೆ ಕಳೆದುಕೊಂಡಿದೆ ಎಂದು ಕಾಠ್ಮಂಡು ವಿಮಾನ ನಿಲ್ದಾಣದ ಮಾಹಿತಿ ಅಧಿಕಾರಿ ಗ್ಯಾನೇಂದ್ರ ಭುಲ್ ಹೇಳಿದ್ದಾರೆ.
ಇದನ್ನು ಓದಿ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ
ಹೆಲಿಕಾಪ್ಟರ್‌ನಲ್ಲಿದ್ದ ಆರು ಮಂದಿ ಪೈಕಿ ಐವರ ಮೃತದೇಹ ಪತ್ತೆಯಾಗಿದೆ ಆದ್ರೆ ಅವರ ಜೊತೆ ತೆರಳಿದ್ದ ನೇಪಾಳ ಪೈಲೆಟ್‌ನ (Pilot) ಸುಳಿವು ಇಲ್ಲ ಎಂದು ನೇಪಾಳದ ನಾಗರೀಕಯಾನ ಸಚಿವಾಲಯ
ಅಧಿಕೃತ ಹೇಳಿಕೆ ನೀಡಿದೆ. ಅಲ್ಲದೆ ಹೆಲಿಕಾಪ್ಟರ್‌ನ ಅವಶೇಷಗಳು ಹಾಗೂ ಪ್ರವಾಸಿಗರ ಮೃತದೇಹದ ಪತ್ತೆ ಕಾರ್ಯಾಚರಣೆಯನ್ನು ರಕ್ಷಣಾ ತಂಡಗಳ ಮೂಲಕ ಆರಂಭಿಸಿದೆ. ಹೆಲಿಕಾಪ್ಟರ್ ಮೌಂಟ್
ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ (helicopter crash in Nepal) ಪತನಗೊಂಡಿದೆ.
ಇಲ್ಲಿನ ಸ್ಥಳೀಯರು ಸೊಲೊಕುಂಬು ಜಿಲ್ಲೆಯ ಲಮ್ಜುರಾ ಪರ್ವತ ಶ್ರೇಣಿಯಲ್ಲಿ ವಿಮಾನ ಪತನಗೊಂಡಿದೆ ಎಂದು ಹೇಳಿದ್ದಾರೆ. ಭಾರೀ ಶಬ್ದ ಕೇಳಿಸಿದೆ, ನಂತರ ದಟ್ಟ ಹೊಗೆಯೂ ಕಾಣಿಸಿಕೊಂಡಿದೆ.
ಸ್ಥಳೀಯರು ಪರ್ವತ ಶ್ರೇಣಿ ದಾಟಿ ಶಬ್ದ ಬಂದ ಸ್ಥಳಕ್ಕೆ ತೆರಳಿ ನಂತರ ಪತನಗೊಂಡ ಹೆಲಿಕಾಪ್ಟರ್ (Helicopter) ಪತ್ತೆ ಹಚ್ಚಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಒಟ್ಟು 6 ಮಂದಿಯ ಪೈಕಿ ಕೇವಲ ಐವರ ಮೃತದೇಹ ಪತ್ತೆಯಾಗಿದೆ. ಹಾಗೂ ಮಾಧ್ಯಮಗಳು ಮತ್ತೊಬ್ಬರ ಸುಳಿವಿಲ್ಲ ಎಂದು ವರದಿ ಮಾಡಿದೆ. ಇತ್ತ ನೇಪಾಳ ವಿಮಾನಯಾನ ಸಚಿವಾಲಯ ಕಾರ್ಯಾಚರಣೆ
ಮುಂದುವರಿದಿದೆ ಎಂಬ ಮಾಹಿತಿಯನ್ನು ಹೇಳಿದೆ.
1997ರಿಂದ ಹೆಲಿಕಾಪ್ಟರ್ ಸೇವೆಯನ್ನು ಮನಾಂಗ್ ಏರ್ ಸಂಸ್ಥೆ ಆರಂಬಿಸಿದೆ. ನೇಪಾಳ ವಿಮಾನಯಾನ ಸಚಿವಾಲಯದಿಂದ ಅಧಿಕೃತ ಪರವಾನಗಿಯನ್ನು ಕಠ್ಮಂಡು ಮೂಲದ ಕಮರ್ಷಿಯಲ್ ಏರ್
ಸರ್ವೀಸ್ ನೀಡುವ ಸಂಸ್ಥೆಯಾಗಿರುವ ಮನಾಂಗ್ ಪಡೆದಿದೆ. ವಿಶೇಷವಾಗಿ ಸಾಹಸಿ ಪ್ರದೇಶದಲ್ಲಿ ಹೆಲಿಕಾಪ್ಟರ್ ಸೇರಿದಂತೆ ಇತರ ಏರ್‌ಕ್ರಾಫ್ಟ್ ಸರ್ವೀಸ್ (Aircraft Service) ಮನಾಂಗ್ ಏರ್ ನೀಡಲಿದೆ.
ಎವರೆಸ್ಟ್ ಸೌಂದರ್ಯ ವೀಕ್ಷಣೆ ಮತ್ತು ಮೌಂಟ್ ಎವರೆಸ್ಟ್ ಸಾಹಸಿಗಳಿಗೆ ಸೇರಿದಂತೆ ಹಲವು ಪರ್ವತಶ್ರೇಣಿಗಳಲ್ಲಿ ಮನಾಂಗ್ ಪ್ರವಾಸಿಗರಿಗೆ ಸೇವೆ ನೀಡುತ್ತಿದೆ.
ರಶ್ಮಿತಾ ಅನೀಶ್