ಜ್ವರದ ಭಯ ಲಸಿಕೆ ಪಡೆಯಲು ಹಿಂದೇಟು

ಮಂಡ್ಯ ಆ 21 : ಲಸಿಕೆ  ಪಡೆದರೆ  ಜ್ವರ ಬರುತ್ತದೆ ಜ್ವರ ಬಂದಲ್ಲಿ ಕೆಲಸ ಮಾಡಲಾಗದೆ  ನಮ್ಮ ದುಡಿಮೆ ನಿಂತು ಹೋಗುತ್ತದೆ ಎಂಬ ಕಾರಣದಿಂದ  ಕುಲುಮೆ ಕೆಲಸಕ್ಕೆ ದೂರದ ಮಹರಾಷ್ಟ್ರ ಮತ್ತು ಉತ್ತರ ಕರ್ನಾಟದಿಂದ ಆಗಮಿಸಿರುವ ಜನರು ಕೊರನಾ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗಗಳಿಂದ  ಮಂಡ್ಯಗೆ ಸುಮಾರು 50ಕ್ಕೂ ಹೆಚ್ಚು ಜನ ಕುಲುಮೆ ಕೆಲಸಕ್ಕೆ ಬಂದಿದ್ದಾರೆ. ಯಾಕೆ ನೀವು ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಎಂದರೆ, ನಾವು ಇಲ್ಲಿಗೆ ಕೂಲಿ ಮಾಡಲು ಬಂದಿದ್ದೇವೆ. ನಾವು ಲಸಿಕೆ ಹಾಕಿಸಿಕೊಂಡು ಜ್ವರ ಹಾಗೂ ಕೈ ನೋವು ಬಂದರೆ ನಮಗೆ ಕೆಲಸ ಮಾಡಲು ಆಗುವುದಿಲ್ಲ. ನಾವು ಆ ದಿನ ದುಡಿದು ಆ ದಿನ ತಿನ್ನುವವರು. ನಾವು ಕೆಲಸ ಮಾಡದೇ ಇದ್ದರೆ ನಮಗೆ ಯಾರು ಊಟ ಕೊಡುತ್ತಾರೆ, ಹೀಗಾಗಿ ನಾವು ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಜನರು ಅವರ ಅಳಲನ್ನು ತೋಡಿಕೊಂಡರು

ಜನರು ಹೀಗೆ ಭಯದಿಂದ ಲಸಿಕೆಯನ್ನು ಪಡೆಯದೆ ಇದ್ದರೆ ಮುಂದಿನ ದಿನಗಳಲ್ಲಿ ಕೊರೊನಾ ಇನ್ನಷ್ಟು ಉಲ್ಬಣಗೊಂಡು ಬೇರೆಯವರಿಗೆ ಹರಡುವ ಸಾಧ್ಯತೆಯಿದೆ ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕಾಗಿದೆ.

Exit mobile version