ಇಸ್ರೇಲ್-ಹಮಾಸ್ ಉದ್ವಿಗ್ನತೆ : ಶುಕ್ರವಾರದ ಪ್ರಾರ್ಥನೆಗೂ ಮುನ್ನ ದೆಹಲಿಯಲ್ಲಿ ಹೈ ಅಲರ್ಟ್

New Delhi: ಹೆಚ್ಚುತ್ತಿರುವ ಇಸ್ರೇಲ್-ಹಮಾಸ್ (High Alert in Delhi) ಉದ್ವಿಗ್ನತೆಯ ನಡುವೆ ಸಮಾಜ ವಿರೋಧಿ ಚಟುವಟಿಕೆಗಳ ಬಗ್ಗೆ ಕಳವಳದ ಕಾರಣ ಇಂದು ದೆಹಲಿಯನ್ನು ಹೈ ಅಲರ್ಟ್

(High Alert) ಘೋಷಿಸಲಾಗಿದೆ. ಶುಕ್ರವಾರದ ಪ್ರಾರ್ಥನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಮತ್ತು ಯಹೂದಿ ಸಂಸ್ಥೆಗಳ ಬಳಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ರಾಜಧಾನಿ ದೆಹಲಿಯಲ್ಲಿ (Delhi) ಘರ್ಷಣೆ ಉಂಟಾಗುವ ಸಾಧ್ಯತೆಗಳ ಬಗ್ಗೆ ಭದ್ರತಾ ಏಜೆನ್ಸಿಗಳಿಂದ ಪೊಲೀಸರು ಮಾಹಿತಿ ಪಡೆದಿದ್ದು ಹೀಗಾಗಿ ಶುಕ್ರವಾರ ದೆಹಲಿಯಲ್ಲಿ ಹೈ ಅಲರ್ಟ್

ಘೋಷಿಸಲಾಗಿದೆ. ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಯಾವುದೇ ಗಲಾಟೆ ನಡೆಯದಂತೆ ಸಾಕಷ್ಟು ಪೊಲೀಸ್ ಪಡೆಗಳನ್ನು ದೆಹಲಿಯಲ್ಲಿ ನಿಯೋಜಿಸಲಾಗಿದೆ. ಇನ್ನು ದೇಶದಲ್ಲಿ ನೆಲೆಸಿರುವ

ಇಸ್ರೇಲಿಗಳ ಸುರಕ್ಷತೆಯನ್ನು (High Alert in Delhi) ಖಚಿತಪಡಿಸಿಕೊಳ್ಳಲು

ಭದ್ರತಾ ಏಜೆನ್ಸಿಗಳು (Agency) ಇತರ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಿವೆ ಎಂದು ಮೂಲಗಳು ತಿಳಿಸಿವೆ. ಇಸ್ರೇಲಿ ರಾಜತಾಂತ್ರಿಕರು, ಸಿಬ್ಬಂದಿ ಮತ್ತು

ಪ್ರವಾಸಿಗರಿಗೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರ (Maharashtra), ಹಿಮಾಚಲ ಪ್ರದೇಶ ಮತ್ತು ಗೋವಾದ (Goa) ರಾಜ್ಯ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಈಗಾಗಲೇ ಯುಎಸ್ (US), ಯುಕೆ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳಲ್ಲಿ ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಪರ-ವಿರೋಧ ಗುಂಪುಗಳ ನಡುವೆ ತೀವ್ರ ಸಂಘರ್ಷ ಉಂಟಾಗಿರುವ

ಹಿನ್ನಲೆಯಲ್ಲಿ ಭಾರತದಲ್ಲಿ ಆ ರೀತಿಯ ಯಾವುದೇ ಘಟನೆಗಳು ನಡೆಯದಂತೆ ಭಾರೀ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿಯೇ ದೇಶಾದ್ಯಂತ ನಡೆಯುತ್ತಿರುವ ಶುಕ್ರವಾರದ

ಪ್ರಾರ್ಥನೆಯ ಮೇಲೆ ಪೊಲೀಸರು ಮತ್ತು ಭದ್ರತಾ ಏಜನ್ಸಿಗಳು ತೀವ್ರ ನಿಗಾ ವಹಿಸಿವೆ.

ಇನ್ನು ಇಸ್ರೇಲ್ (Israel) ಮತ್ತು ಹಮಾಸ್ ಉಗ್ರರ ನಡುನಿನ ಯುದ್ದವು 7ನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲಿ ಪಡೆಗಳು ಗಾಜಾಪಟ್ಟಿಯ ಮೇಲೆ ನಿರಂತರವಾಗಿ ವಾಯುದಾಳಿ ನಡೆಸುತ್ತಿವೆ. ಗಾಜಾಪಟ್ಟಿಗೆ

ವಿದ್ಯುತ್, ನೀರು, ತೈಲ, ಆಹಾರ ಸೇರಿದಂತೆ ಸಂಪೂರ್ನ ದಿಗ್ಬಂಧನ ವಿಧಿಸಿರುವ ಇಸ್ರೇಲ್ ಹಮಾಸ್ ಉಗ್ರರ ವಿರುದ್ದ ನಿರ್ಣಾಯಕ ಕದನಕ್ಕೆ ಮುಂದಾಗಿದೆ. ಹಮಾಸ್ ಉಗ್ರರನ್ನು ಸಂಪೂರ್ಣವಾಗಿ

ನಿರ್ಣಾಮ ಮಾಡುವವರೆಗೂ ನಾವು ಯುದ್ದವನ್ನು ಮುಂದುವರೆಸುತ್ತೇವೆ. ಯುದ್ದವನ್ನು ಹಮಾಸ್ ಆರಂಭಿಸಿದೆ. ಆದರೆ ಈ ಯುದ್ದವನ್ನು ನಾವು ಮುಗಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಘೋಷಿಸಿದ್ದಾರೆ.

ಇದನ್ನು ಓದಿ: ಬೆಂಗಳೂರಿನ ಖಾಲಿ ಫ್ಲಾಟ್​ ಒಂದರಲ್ಲಿದ್ದ ಮಂಚದಡಿ ಕಂತೆ ಕಂತೆ ಹಣದ ಬಾಕ್ಸ್: ಐಟಿ ದಾಳಿವೇಳೆ ಪತ್ತೆ

Exit mobile version