ಶಾಕಿಂಗ್‌ ನ್ಯೂಸ್‌ : ಬೆಂಗಳೂರು ಹಾಗೂ ಮೈಸೂರಲ್ಲಿ ಹೆಚ್ಚುತ್ತಿದೆ ಬಾಲ ತಾಯಂದಿರ ಸಂಖ್ಯೆ !

ಅಚ್ಚರಿ ಎಂಬಂತೆ ಬೆಂಗಳೂರು ಹಾಗೂ ಮೈಸೂರು ಗ್ರಾಮೀಣ ಭಾಗಗಳಲ್ಲಿ ಅತಿಹೆಚ್ಚು ಬಾಲ್ಯ ವಿವಾಹ ಹಾಗೂ (high child mothers in Blore-Mysore) ಬಾಲ ತಾಯಂದಿರ ಪ್ರಕರಣಗಳೂ ಬೆಳಕಿಗೆ ಬಂದಿವೆ.

2022 ರಲ್ಲಿ ಬಾಲ ತಾಯಂದಿರ ಸಂಖ್ಯೆ 19,561 ಇದೆ. ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆಯನ್ನು ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳು ತಡೆಯಬೇಕಿದೆ.

ರಾಜ್ಯದಲ್ಲಿ ಬೆಂಗಳೂರು ನಂತರ ಅತಿ ಹೆಚ್ಚು ಬಾಲ ತಾಯಂದಿರಿರುವ ಜಿಲ್ಲೆ ಮೈಸೂರಾಗಿದೆ, ಕಳೆದ ಮೂರು ವರ್ಷಗಳಲ್ಲಿ ಮೈಸೂರು ಜಿಲ್ಲೆಯಲ್ಲಿಯೂ ಬಾಲ ತಾಯಂದಿರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು,

3,518 ಮಂದಿ ಪತ್ತೆಯಾಗಿದ್ದಾರೆ.ವಿವಾಹದ ಬಳಿಕ ಹೆಣ್ಣು ಮಕ್ಕಳು ಗರ್ಭಿಣಿಯಾದರೂ ಆಸ್ಪತ್ರೆಗೆ ದಾಖಲಾಗದೇ ಮನೆಯಲ್ಲಿಯೇ ಹೆರಿಗೆ ಮಾಡಿಸುತ್ತಿರುವುದರಿಂದ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ.

ರಾಜ್ಯ ಸರಕಾರ ಬಾಲ್ಯ ವಿವಾಹ ನಿಷೇಧ ಕಾಯಿದೆ, ಪೋಕ್ಸೋದಂತಹ ಕಾನೂನು- ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಸಿನ

ಹೆಣ್ಣು ಮಕ್ಕಳ ಮದುವೆ ತಪ್ಪುತಿಲ್ಲ. ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಸೇರಿದಂತೆ ನಾನಾ ಕಾರಣಗಳಿಂದ ಬಾಲಕಿಯರು ತಾಯಿ ಯಾಗುತ್ತಿರುವುದು ಹೆಚ್ಚಾಗುತ್ತಿದೆ. ಕೋವಿಡ್‌ ಬಳಿಕ ಈ ಸಂಖ್ಯೆ

ದ್ವಿಗುಣವಾಗಿದೆ. ಈ ಆತಂಕಕಾರಿ ಅಂಶ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ನೀಡಿರುವ ಮಾಹಿತಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಬೆಂಗಳೂರು ನಂತರ ಅತಿ ಹೆಚ್ಚು ಬಾಲ ತಾಯಂದಿರಿರುವುದು (high child mothers in Blore-Mysore) ಜಿಲ್ಲೆ ಮೈಸೂರಾಗಿದೆ.

ರಾಜ್ಯದಲ್ಲಿ 2020 ರಲ್ಲಿ 10,101 ಮಂದಿ ಇದ್ದ ಬಾಲತಾಯಂದಿರ ಸಂಖ್ಯೆ 2021ರಲ್ಲಿ 13,159 ಮತ್ತು 2022ರಲ್ಲಿ 19,561ಕ್ಕೆ ಏರಿದೆ. ಕಳೆದ ಮೂರು ವರ್ಷಗಳಲ್ಲಿ ಮೈಸೂರು ಜಿಲ್ಲೆಯಲ್ಲಿಯೂ

ಬಾಲ ತಾಯಂದಿರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 3,518 ಮಂದಿ ಪತ್ತೆಯಾಗಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ವಿವಾಹ ಮಾಡಲಾಗುತ್ತಿದ್ದು, ಕುಟುಂಬಸ್ಥರು ಮತ್ತು ಸಂಬಂಧಿಕರ ಒತ್ತಡದಿಂದಾಗಿ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ.

ಅಲ್ಲದೇ, ವಿವಾಹದ ಬಳಿಕ ಹೆಣ್ಣು ಮಕ್ಕಳು ಗರ್ಭಿಣಿಯಾದರೂ ಆಸ್ಪತ್ರೆಗೆ ದಾಖಲಾಗದೇ ಮನೆಯಲ್ಲಿಯೇ ಹೆರಿಗೆ ಮಾಡಿಸುತ್ತಿರುವುದರಿಂದ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ.

ಬಾಲ ತಾಯಂದಿರ ಕಾಳಜಿ ಅಗತ್ಯ:
”ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಸೇರಿದಂತೆ ನಾನಾ ಕಾರಣಗಳಿಂದ ಬಾಲ ತಾಯಂದಿರಾಗುತ್ತಿರುವವರು ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಇವರ

ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಅಲ್ಲದೇ ಲೈಂಗಿಕ ದೌರ್ಜನ್ಯದಿಂದಾಗಿ ತಾಯಂದಿರಾಗಿರುವ ಅಪ್ರಾಪ್ತೆಗೆ ಸಮಾಜದ ದೂಷಣೆ ತಪ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು

ಸರಕಾರ ಸೇರಿದಂತೆ ಸಂಘ-ಸಂಸ್ಥೆಗಳು ಮಾಡಬೇಕಿದೆ,” ಎಂದು ಸೇವಾ ಸಂಸ್ಥೆಯ ಒಡನಾಡಿ ಎಂ.ಎಲ್ .ಪರಶುರಾಮ್‌ ತಿಳಿಸಿದ್ದಾರೆ.

ಬಾಲ ತಾಯಂದಿರು ಹೆಚ್ಚಾಗಿ ಬೆಂಗಳೂರು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ದ್ವಿತೀಯ ಸ್ಥಾನಗಳಲ್ಲಿ ಮೈಸೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಿವೆ. ಅತಿ ಕಡಿಮೆ ಅಂದರೆ ದಕ್ಷಿಣ ಕನ್ನಡದಲ್ಲಿ 148,

ಉಡುಪಿ ಜಿಲ್ಲೆಯಲ್ಲಿ 86 ಪ್ರಕರಣಗಳು ವರದಿಯಾಗಿವೆ.

ಗ್ರಾಮೀಣ ಪ್ರದೇಶ ಸೇರಿದಂತೆ ಹಳ್ಳಿಗಳಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ವಿವಾಹ ಮಾಡಲಾಗುತ್ತಿದ್ದು, ತಾಯಂದಿರಾಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಾಗಿದೆ

ಎಂದು, ಮಾನವ ಹಕ್ಕು ಹೋರಾಟಗಾರ ಸಿಕ್ರಂ ಪ್ರಸನ್ನ ಹೇಳಿದ್ದಾರೆ.

ರಾಜ್ಯದಲ್ಲಿಬಾಲ ತಾಯಂದಿರ ಸಂಖ್ಯೆ:

ಕಳೆದ ಮೂರೂವರೆ ವರ್ಷಗಳ ಪ್ರಕರಣ
ಬೆಂಗಳೂರು: 6207
ಹಾಸನ: 139
ಮಂಡ್ಯ: 1753
ಮೈಸೂರು: 3518
ಮಂಡ್ಯ: 1753
ಕೊಡಗು: 298
ಚಾಮರಾಜ ನಗರ: 830

ಇದನ್ನು ಓದಿ: CSI ಮಾಡರೇಟರ್ ಬಿಷಪ್ ಎ ಧರ್ಮರಾಜ್ ರಸಾಲಂ ಅವರ ಆಯ್ಕೆಯನ್ನು ರದ್ದು ಮಾಡಿದ ಮದ್ರಾಸ್ ಹೈಕೋರ್ಟ್

Exit mobile version