ನ್ಯಾಯಾಂಗದ ವಿರುದ್ದ ಆರೋಪ ಮಾಡಿ 1 ವಾರ ಜೈಲು ಪಾಲಾದ ಹೈಕೋರ್ಟ್‌ ವಕೀಲ

Bengaluru : ನ್ಯಾಯಾಂಗ ವ್ಯವಸ್ಥೆ ಮತ್ತು ನಿರ್ದಿಷ್ಟವಾಗಿ ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಆರೋಪಗಳನ್ನು ಮಾಡಿದ್ದಕ್ಕಾಗಿ ಕರ್ನಾಟಕದ ಹೈಕೋರ್ಟ್(Karnataka High court) ವಕೀಲರಿಗೆ(Lawyer) ಒಂದು ವಾರ ಜೈಲು ಶಿಕ್ಷೆಯನ್ನು ಹೈಕೋರ್ಟ್ ವಿಧಿಸಿದೆ.‌

 ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ(Prasanna B Varale) ಮತ್ತು ನ್ಯಾಯಮೂರ್ತಿ ಅಶೋಕ್ (Ashok)ಎಸ್ ಕಿಣಗಿ ಅವರ ಹೈಕೋರ್ಟ್‌ವಿಭಾಗೀಯ ಪೀಠವು ವಕೀಲ ಕೆ ಎಸ್ ಅನಿಲ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಫೆಬ್ರವರಿ 10 ರಂದು ಮತ್ತೊಮ್ಮೆ ತನ್ನ ಮುಂದೆ ಹಾಜರುಪಡಿಸುವಂತೆ ಹೈಕೋರ್ಟ್‌ಆದೇಶಿಸಿದೆ. ಕ್ರಿಮಿನಲ್ ನ್ಯಾಯಾಂಗ ನಿಂದನೆಯ ಮೊಕದ್ದಮೆಯನ್ನು ಹೈಕೋರ್ಟ್‌ನಲ್ಲಿ ಎದುರಿಸುತ್ತಿರುವ ಅನಿಲ್ ಅವರು ಮೆಮೊ-ಕಮ್ ಲಿಖಿತ ಸಲ್ಲಿಕೆಯನ್ನು ಸಲ್ಲಿಸಿದ್ದು, ಅದರಲ್ಲಿ ಹಾಲಿ ನ್ಯಾಯಾಧೀಶರ ವಿರುದ್ಧ ದೂರು ಸಲ್ಲಿಸಿರುವುದರಿಂದ ತಮ್ಮ ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಬೇಕೆಂದು ಒತ್ತಾಯಿಸಿದ್ದಾರೆ.

ವಕೀಲರ ಸಲ್ಲಿಕೆಯನ್ನು ಉಲ್ಲೇಖಿಸಿ, ಹೈಕೋರ್ಟ್ ತನ್ನ ಆದೇಶದಲ್ಲಿ, “ಆರೋಪಿಯು ಈ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಆರೋಪಗಳನ್ನು ಮಾಡುವ ಪ್ಯಾರಾಗ್ರಾಫ್ 6 ರಲ್ಲಿ ನೀಡಿರುವ ಹೇಳಿಕೆಯು ಆರೋಪಿಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆರೋಪಿಯು ಹಿಂದಿನ ಸಂದರ್ಭಗಳಲ್ಲಿ ನ್ಯಾಯಾಂಗ ವ್ಯವಸ್ಥೆ ಮತ್ತು ನಿರ್ದಿಷ್ಟವಾಗಿ ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದು ಸಂಸ್ಥೆಯನ್ನು ಕೀಳಾಗಿಸಲು ಪ್ರಯತ್ನಿಸುತ್ತಿದೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಇಮೇಜ್ ಅನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಸೂಚಿಸುತ್ತದೆ.  ನ್ಯಾಯಾಂಗ ನಿಂದನೆ ಎಸಗಿರುವ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೈಕೋರ್ಟ್ ಹೇಳಿದೆ.

ವಕೀಲ್‌ ಅನಿಲ್(Lawyer Anil) ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು 2019ರಲ್ಲಿ ದಾಖಲಿಸಲಾಗಿತ್ತು. ನಂತರ ಅಕ್ಟೋಬರ್ 14, 2019ರಂದು ಜಾಮೀನು ನೀಡಬಹುದಾದ ವಾರಂಟ್ ಅನ್ನು ಹೊರಡಿಸಲಾಗಿತ್ತು. ಇದೀಗ  ವಕೀಲ್‌ ಅನಿಲ್‌ ವಿರುದ್ಧ ಮತ್ತೊಂದು ಸ್ವಯಂ-ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹೈಕೋರ್ಟ್‌ ದಾಖಲಿಸಿಕೊಂಡಿದೆ. ಇನ್ನು ಹೈಕೋರ್ಟ್‌ ನ್ಯಾಯಾಧೀಶರ ಈ ಎಲ್ಲಾ ವರ್ತನೆಯು ಪಾರದರ್ಶಕತೆಯ ಕೊರತೆಯಿಂದಾಗಿ ನ್ಯಾಯಾಂಗ ಭ್ರಷ್ಟಾಚಾರವನ್ನು ಜೀವಂತವಾಗಿಡಲು ಕಾನೂನಿನ ತೀವ್ರ ದುರ್ಬಳಕೆಯನ್ನು ಸಾಬೀತುಪಡಿಸುತ್ತದೆ” ಎಂದು ವಕೀಲ್ ಅನಿಲ್ ಆರೋಪಿಸಿದ್ದಾರೆ.  

Exit mobile version