ಒಕ್ಕಲಿಗರು ಮತ್ತು ಲಿಂಗಾಯತರ ಮೀಸಲಾತಿಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

Karnataka: ಒಕ್ಕಲಿಗರು ಮತ್ತು ಲಿಂಗಾಯತರಿಗೆ ಪ್ರತ್ಯೇಕ (ಇತರ ಹಿಂದುಳಿದ ವರ್ಗ) ಒಬಿಸಿ ವರ್ಗವನ್ನು ರಚಿಸಿ, ಶಿಕ್ಷಣ (High Court stayed reservation) ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ರಾಜ್ಯ ಸರ್ಕಾರದ

ಈ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ( High Court stayed reservation ) ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಪಿಬಿ ವರಾಳೆ (PB Warale) ನೇತೃತ್ವದ ವಿಭಾಗೀಯ ಪೀಠವು ಹೊಸ ವರ್ಗಗಳಿಗೆ ತಡೆ ನೀಡಿದ್ದು, ಒಬಿಸಿ ಮೀಸಲಾತಿ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

 ಹೊಸ ವಿಭಾಗಗಳ ರಚನೆಯನ್ನು ಪ್ರಶ್ನಿಸಿ, ರಾಘವೇಂದ್ರ ಡಿಜಿ ಅವರು ಸಲ್ಲಿಸಿದ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ದಾವೆ) ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಈ  ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆಯನ್ನು  ಮುಂದಿನ ಜನವರಿ 30ಕ್ಕೆ ಮುಂದೂಡಿದೆ.

3ಎ ಮತ್ತು 3ಬಿ ವರ್ಗಗಳಲ್ಲಿರುವ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತರಿಗೆ 2ಎ ಸ್ಥಾನಮಾನದಡಿ ಮೀಸಲಾತಿಗೆ ಆಗ್ರಹಿಸುತ್ತಿದ್ದು, 3ಎ ಮತ್ತು 3ಬಿ ವರ್ಗಗಳನ್ನು ರದ್ದುಗೊಳಿಸಲು ಸರಕಾರ ನಿರ್ಧರಿಸಿದೆ.

2ಸಿ ಮತ್ತು 2ಡಿ ಎಂಬ ಎರಡು ಹೊಸ ವಿಭಾಗಗಳನ್ನು ರಚಿಸಲು ಸರ್ಕಾರ (Government ) ನಿರ್ಧರಿಸಿದೆ. 3A ಮತ್ತು 3B ಯಲ್ಲಿರುವವರು ಈಗ 2C ಮತ್ತು 2D ನಲ್ಲಿ ಮೀಸಲಾತಿ ಪಡೆಯಲಿದ್ದಾರೆ.  

ಇತರ ಪ್ರಬಲ ಸಮುದಾಯಗಳನ್ನು 2ಎಗೆ ಸೇರಿಸಿದರೆ ಅದು ತನ್ನ ಸಮುದಾಯದ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಕರ್ನಾಟಕ ರಾಜ್ಯ (State Government ) ಹಿಂದುಳಿದ ವರ್ಗಗಳ ಆಯೋಗದ ಕಾಯಿದೆ, 1995 ರ ಪ್ರಕಾರ, “ಮಧ್ಯಂತರ ವರದಿ” ಪರಿಕಲ್ಪನೆಯು ಶಾಸನಬದ್ಧ ಯೋಜನೆಯಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ.

ಆದ್ದರಿಂದ, ಈಗ ತಾತ್ಕಾಲಿಕ ವಿಧಾನವನ್ನು ಅನುಸರಿಸಲು ಕೋರಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಯಿತು.

ಪ್ರವರ್ಗ 2A ಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಉಪಪಂಗಡವನ್ನು ಸೂಚಿಸಲು ಕಾನೂನಿನಲ್ಲಿ ಅನುಮತಿಯಿಲ್ಲ.

2000ನೇ ಇಸವಿಯಲ್ಲಿ ಕೆಎಸ್‌ಸಿಬಿಸಿಯು ಲಿಂಗಾಯತ ಉಪಗುಂಪುಗಳು 2ಎ ವರ್ಗಕ್ಕೆ ಸೇರ್ಪಡೆಗೊಳಿಸಿದ್ದನ್ನು ತಿರಸ್ಕರಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಇದನ್ನೂ ಓದಿ: https://vijayatimes.com/inauguration-cruise-ganga-vilas/

ಇನ್ನು ರಾಜ್ಯವು OBC ಯ ನಾಲ್ಕು ವಿಭಾಗಗಳನ್ನು ಹೊಂದಿದೆ: 2A, 2B, 3A ಮತ್ತು 3B ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಆಧರಿಸಿ  ಈ ವಿಭಾಗ ಮಾಡಲಾಗಿದೆ.

ಈ ಸಮುದಾಯಗಳು ವರ್ಗಗಳ ಆಧಾರದ ಮೇಲೆ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆದ್ಯತೆಯ ಮೀಸಲಾತಿಗಳನ್ನು ಪಡೆಯುತ್ತವೆ.

2A ಅತ್ಯಂತ ಹಿಂದುಳಿದಿದ್ದರೆ, 2B ಮಧ್ಯಮ, ಮತ್ತು ಸ್ವಲ್ಪ ಮೇಲೆ 3A ಮತ್ತು 3B ಇವೆ. ಸದ್ಯ ಲಿಂಗಾಯತರು 3B ಯಲ್ಲಿದ್ದಾರೆ.
Exit mobile version