Bengaluru: ಸರ್ಕಾರವು ಅನ್ನಭಾಗ್ಯ ಯೋಜನೆಯಡಿ (about BPL Card Survey) ಬಿಪಿಎಲ್ ಕಾರ್ಡ್(BPL Card) ಹೊಂದಿರುವವರಿಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ
ಹಣವನ್ನ ನೀಡುತ್ತಿದೆ.ಆದರೆ ಇದೀಗ ಸರ್ಕಾರ BPL ಕಾರ್ಡ್ ಹೊಂದಿ ಉಚಿತ ಅನ್ನಭಾಗ್ಯ ರೇಷನ್ ಪಡೆಯುತ್ತಿದ್ದವರಿಗೆ ಬಿಗ್ ಶಾಕ್ ಕೊಟ್ಟಿದ್ದು,BPL ಕಾರ್ಡ್ ಸರ್ವೆಗೆ (Survey) .
ಆಹಾರ ಇಲಾಖೆಯು ಮುಂದಾಗಿದ್ದು, ಅರ್ಹತೆ ಇಲ್ಲದಿದ್ದರೂ BPL ಕಾರ್ಡ್ (about BPL Card Survey) ಪಡೆದವರ ಪತ್ತೆಗೆ ಸರ್ವೆ ನಡೆಸಲಿದೆ.

ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಗ್ಯಾರಂಟಿ ಸ್ಕೀಮ್‌ನಲ್ಲಿ ಒಂದಾಗಿರುವ ಅನ್ನ ಭಾಗ್ಯ ಯೋಜನೆಯಿಂದಾಗಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ.
ಆದ್ರೆ ರಾಜ್ಯ ಸರ್ಕಾರ(state governmnet) ಸದ್ಯ ಅರ್ಹ ಫಲಾನುಭವಿಗಳನ್ನ ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ. ಆಹಾರ ಇಲಾಖೆ(food department) ಯಾರೆಲ್ಲಾ ಬಿಪಿಎಲ್ ಕಾರ್ಡ್
(BPL Card) ಪಡೆದು ಅರ್ಹತೆ ಇಲ್ಲದಿದ್ರೂ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದರೋ ಅವರ ಮಾಹಿತಿಯನ್ನ ಕಲೆಹಾಕ್ತಿದೆ.
ನಿಗದಿತ ವಾರ್ಷಿಕ ಆದಾಯ, ವೈಟ್ ಬೋರ್ಡ್(White board car) ಕಾರು, ಮಾಲೀಕತ್ವ ಹೊಂದಿರುವ ಭೂಮಿ, ಸರ್ಕಾರಿ ನೌಕರಿ(Government job) ಸೇರಿ ಮಾನದಂಡ ಪರಿಶೀಲನೆ
ನಡೆಸಲಾಗುತ್ತದೆ.ಒಂದು ವೇಳೆ ಮಾನದಂಡಗಳ ವ್ಯಾಪ್ತಿಯಲ್ಲಿದ್ದೂ ಕಾರ್ಡ್ ಬಳಸುತ್ತಿದ್ದರೆ ರದ್ದು ಮಾಡಲಾಗುತ್ತದೆ. ಸರ್ಕಾರ 6 ಮಾನದಂಡಗಳನ್ನ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬೇಕೆಂದ್ರೆ
ನಿಗದಿ ಮಾಡಿದೆ. ಹಾಗಾದ್ರೆ ಆ ಮಾನದಂಡಗಳೇನು (about BPL Card Survey) ಅಂತಾ ನೋಡೋದಾದ್ರೆ.

BPL ಕಾರ್ಡ್ ಮಾನದಂಡ ಏನು..?
- 3 ಹೆಕ್ಟರ್‌ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು.
- ವಾರ್ಷಿಕ ಆದಾಯ 1.2 ಲಕ್ಷ ಮೀರಬಾರದು.
- ಯಾವುದೇ ಸರ್ಕಾರಿ ನೌಕರರಾಗಿರಬಾರದು.
- ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಇರಬಾರದು.
- ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 sqt ಮೀರಬಾರದು.
- ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT ರಿಟರ್ನ್ಸ್ ಪಾವತಿದಾರರು.
ಇದನ್ನೂ ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 53 ಹುದ್ದೆಗಳಿಗೆ ನೇರ ನೇಮಕಾತಿ: ಅರ್ಜಿ ಆಹ್ವಾನ… ಇಲ್ಲಿದೆ ಮಾಹಿತಿ
35 ಸಾವಿರಕ್ಕೂ ಅಧಿಕ BPL ಕಾರ್ಡ್ ಅನ್ನು ಈಗಾಗಲೇ ಸಮೀಕ್ಷೆ ನಡೆಸಿ ರದ್ದು ಮಾಡಲಾಗಿದೆ. ಜೊತೆಗೆ ದಂಡವನ್ನೂ ಸಹ ಮಾನದಂಡ ಉಲ್ಲಂಘಿಸಿದವರಿಂದ ವಸೂಲಿ ಮಾಡಲಾಗುತ್ತಿದೆ.
ಅನಧಿಕೃತ BPL ಕಾರ್ಡ್ ಹೊಂದಿದವರಿಂದ ಸರ್ವೇ ನಡೆಸಿ ಅಧಿಕ ದಂಡ ವಸೂಲಿ ಮಾಡಲಾಗಿದೆ. ಇನ್ನು ಕೆಲವರು ಅವರಿಗೆ ಅರ್ಹತೆ ಇಲ್ಲದಿದ್ರು BPL ಕಾರ್ಡ್ ಪಡೆದಿದ್ದರು ಅವರು ಸ್ವಯಂ
ಪ್ರೇರಿತವಾಗಿ ಕಾರ್ಡ್ ರದ್ದು ಮಾಡಿಸುತ್ತಿದ್ದಾರೆ. 45 ಸಾವಿರ ಕಾರ್ಡ್ ಗಳು ಇಲ್ಲಿಯವರೆಗೆ ರದ್ದಾಗಿವೆ. ಸದ್ಯ 1 ಕೋಟಿ 28 ಲಕ್ಷ ಮಂದಿ ರಾಜ್ಯದಲ್ಲಿ BPL ಕಾರ್ಡ್ ಹೊಂದಿದ್ದು ಇವರೆಲ್ಲ ಅನ್ನಭಾಗ್ಯದ
ಫಲಾನುಭವಿಗಳಾಗಿದ್ದಾರೆ. ಇದೀಗ ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚು BPL ಕಾರ್ಡ್ ಸರ್ವೇ ಶುರುವಾಗಿರುವ ಹಿನ್ನೆಲೆ ರದ್ದಾಗುವ ಸಾಧ್ಯತೆ ಇದೆ.

ಈಗಾಗಲೇ 35,000ಕ್ಕೂ ಅಧಿಕ BPL ಕಾರ್ಡ್ ಅನ್ನು ಇಲಾಖೆಯು ರದ್ದು ಮಾಡಿದೆ. ಸಾವನ್ನಪ್ಪಿರುವ 4.55 ಲಕ್ಷ ಮಂದಿಯ ಹೆಸರುಕೂಡ ತೆಗೆದಿದ್ದು, ಸರ್ಕಾರಕ್ಕೆ ತಿಂಗಳಿಗೆ ಇದರಿಂದಾಗಿ
6ರಿಂದ 7 ಕೋಟಿ ಉಳಿತಾಯವಾಗಿದೆ. ಅಷ್ಟೇ ಅಲ್ಲದೆ 8 ಕೋಟಿ ದಂಡವನ್ನು ಮಾನದಂಡ ಉಲ್ಲಂಘಿಸಿದವರಿಂದ ಸರ್ಕಾರ ವಸೂಲಿ ಮಾಡಿದೆ. ಈ ಪೈಕಿ ವೈಟ್ ಬೋರ್ಡ್ ಕಾರ್ ಮಾಲೀಕರೇ ಮತ್ತು
ಸರ್ಕಾರಿ ನೌಕರರು ಹೆಚ್ಚಾಗಿದ್ದಾರೆ.ಸರ್ಕಾರವು ಈ ಎಲ್ಲಾ ಮಾಹಿತಿಯನ್ನು RTO, IT, ಕಂದಾಯ, ಸಾರಿಗೆ ಇಲಾಖೆಗಳಿಂದ ಸಂಗ್ರಹಿಸುತ್ತಿದೆ.
35 ಲಕ್ಷ BPL ಕಾರ್ಡ್ ರದ್ದು ಇನ್ನೂ ಸರ್ವೆ ನಡೆದರೆ ಸಾಧ್ಯತೆಗಳಿವೆ.
ರಶ್ಮಿತಾ ಅನೀಶ್