ಎರಡನೇ ಮದುವೆ ಕಾನೂನು ಬಾಹಿರವಾಗಿದ್ದರೂ ಸಹ ಎರಡನೇ ಪತ್ನಿ ಮತ್ತು ಮಕ್ಕಳು ಜೀವನಾಂಶ ಪಡೆಯಲು ಅರ್ಹರು : ಹೈಕೋರ್ಟ್ ಆದೇಶ

Chennai : ಮೊದಲ ಮದುವೆಯ ಅಸ್ತಿತ್ವದ ಕಾರಣದಿಂದ ಈಗಾಗಲೇ ಆಗಿರುವ ಎರಡನೇ ಮದುವೆ ಒಂದು ವೇಳೆ (Highcourt about second marriage) ಕಾನೂನುಬದ್ಧವಾಗಿಲ್ಲದಿದ್ದರೂ ಸಹ

ಸಿಆರ್‌ಪಿಸಿಯ (CRPC) ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶಕ್ಕೆ ಎರಡನೇ ಪತ್ನಿ ಮತ್ತು ಎರಡನೇ ಮದುವೆಯಿಂದ ಜನಿಸಿದ ಮಕ್ಕಳು ಅರ್ಹರಾಗಿರುತ್ತಾರೆ ಎಂದು ಇದೀಗ ಮದ್ರಾಸ್

(Madras) ಹೈಕೋರ್ಟ್ (Highcourt about second marriage) ಮಹತ್ವದ ಆದೇಶ ಹೊರ ಹಾಕಿದೆ.

ಪತ್ನಿ ಮತ್ತು ಮಗನಿಗೆ ಮಾಸಿಕ ಹತ್ತು ಸಾವಿರ ರೂಪಾಯಿಗಳನ್ನು ಪಾವತಿಸಲು ಮತ್ತು ಒಂದು ತಿಂಗಳೊಳಗೆ ನಿರ್ವಹಣೆ ಮೊತ್ತದ ಬಾಕಿ ಸಂಪೂರ್ಣ ಖರ್ಚು ವೆಚ್ಚ ಪಾವತಿಸುವಂತೆ

ತಿರುನಲ್ವೇಲಿಯ ಕೌಟುಂಬಿಕ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ಕೆಳಹಂತದ ನ್ಯಾಯಾಲಯ ನಿರ್ದೇಶಿಸಿತ್ತು.

ಆದರೆ ಆ ವ್ಯಕ್ತಿಯು ಈ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಮರುಪರಿಶೀಲನಾ ಅರ್ಜಿ ಯನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮಧುರೈ (Madhurai) ಪೀಠದ

ನ್ಯಾಯಮೂರ್ತಿ ಕೆ ಮುರಳಿ ಶಂಕರ್ (K Murali Shankar)ಅವರಿದ್ದ ಪೀಠವು ಸಿಆರ್‌ಪಿಸಿಯ ಸೆಕ್ಷನ್ 125 ಜೀವನಾಂಶಕ್ಕೆ ಪತ್ನಿ ಅರ್ಹ ಎಂದು ಹೇಳಿದೆ.

ಇದನ್ನೂ ಓದಿ : ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌ನಲ್ಲಿ 43 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

25 ಲಕ್ಷ ಮೊತ್ತವನ್ನು ಗಂಡ ವರದಕ್ಷಿಣೆಯಾಗಿ ಬೇಡಿಕೆಯಿಟ್ಟಿದ್ದ ಆಗ ಆ ಬೇಡಿಕೆಯನ್ನು ಪೂರೈಸಲು ನನಗೆ ಸಾಧ್ಯವಾಗದಿದ್ದಾಗ, ಗಂಡ ತನ್ನನ್ನು ನಿರಾಕರಿಸಿದ್ದ. ಆದ್ದರಿಂದ ಕಾನೂನುಬದ್ಧವಾಗಿ ಪತಿ

ನನ್ನನ್ನು ಮತ್ತು ಮಗನನ್ನು ನೋಡಿಕೊಳ್ಳಲು ಅರ್ಹನಾಗಿದ್ದರು ತನ್ನನ್ನು ಆತ ನೋಡಿಕೊಳ್ಳಲು ವಿಫಲನಾಗಿದ್ದಾನೆ ಎಂದು ಆರೋಪಿಸಿ ಮಹಿಳೆ ಜೀವನಾಂಶಕ್ಕಾಗಿ ಈ ಹಿಂದೆ ಅರ್ಜಿಯನ್ನು ಸಲ್ಲಿಸಿದ್ದರು.

ಜೊತೆಗೆ ಗಂಡ ತಿಂಗಳಿಗೆ 50,000 ರೂ ವೇತನವನ್ನು ಪಡೆಯುತ್ತಿದ್ದಾರೆ ಅಷ್ಟೇ ಅಲ್ಲದೆ ಮಾಸಿಕ ರೂ.90,000 ಕ್ಕಿಂತ ಹೆಚ್ಚು ಬಾಡಿಗೆ ಆತನಿಗೆ 11 ಮನೆಗಳಿಂದ ಬರುತ್ತದೆ ಎಂದು ಪತ್ನಿಯು

ನ್ಯಾಯಾಲಯದಲ್ಲಿ ವಾದಿಸಿದ್ದಳು.

ಮದ್ರಾಸ್‌ ಉಚ್ಚ ನ್ಯಾಯಾಲಯ ವಾದ ವಿವಾದಗಳನ್ನು ಆಲಿಸಿ ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದ್ದು ಮಾಸಿಕ 10,000 ರೂ ಹಣವನ್ನು ಪತ್ನಿ ಮತ್ತು ಮಗನ ಜೀವನ

ನಿರ್ವಹಣೆಗೆ ನೀಡುವಂತೆ ಅದೇಶಿಸಿದೆ ಅಷ್ಟೇ ಅಲ್ಲದೆ ಒಂದು ವೇಳೆ ಎರಡನೇ ಮದುವೆ ಕಾನೂನು ಬಾಹಿರವಾಗಿದ್ದರೂ ಸಹ ಎರಡನೇ ಪತ್ನಿ ಮತ್ತು ಮಕ್ಕಳು ಜೀವನಾಂಶ ಪಡೆಯಲು ಅರ್ಹರು ಎಂದಿದೆ.

ರಶ್ಮಿತಾ ಅನೀಶ್

Exit mobile version