Karnataka: ರಾಜ್ಯಾದ್ಯಂತ ಭಾರೀ ಸದ್ಧು ಮಾಡುತ್ತಿರುವ ಶಕ್ತಿ ಯೋಜನೆಯಡಿ (highcourt dismiss freebus petition) ಮಹಿಳೆಯರಿಗೆ ಒದಗಿಸುತ್ತಿರುವ ಉಚಿತ ಬಸ್
ಪ್ರಯಾಣವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದವರಿಗೆ ಹೈಕೋರ್ಟ್ (HighCourt) ತರಾಟೆಗೆ ತೆಗೆದುಕೊಂಡಿದ್ದು, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಿಂಪಡೆಯಲು
ಕೋರ್ಟ್ (highcourt dismiss freebus petition) ಗುರುವಾರ ಸೂಚಿಸಿದೆ.

ಉಚಿತ ಟಿಕೆಟ್ ನೀಡಿ ಪ್ರಯಾಣಿಸುವ ಶಕ್ತಿ ಯೋಜನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬೆಂಗಳೂರಿನ (Bengaluru) ವಿವಿಧ ಕಾನೂನು ಕಾಲೇಜುಗಳ ಕಾನೂನು
ವಿದ್ಯಾರ್ಥಿಗಳಾದ ಅಶ್ವಿನ್ ಶಂಕರ್ ಭಟ್ (Ashwini Shankar Bhat), ನೇಹಾ ವೆಂಕಟೇಶ್ ಮತ್ತು ಯಾಶಿಕಾ ಸರವಣ (Yashika Saravana) ಹೈಕೋರ್ಟ್ ಮೆಟ್ಟಲು ಹತ್ತಿದ್ದರು. ಮತ್ತು
ಆರ್ಥಿಕ ಹೊರೆಯಿಂದ ಇತರರಿಗೆ ತೊಂದರೆ ಆಗುತ್ತೆ ಎಂದು ಕೆಲವು ಕಾನೂನು ವಿದ್ಯಾರ್ಥಿಗಳು ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿ ಶಕ್ತಿ ಯೋಜನೆಗೆ ತಡೆ ಹಾಕಬೇಕೆಂದು ಕೇಳಿದ್ದರು.
ಗುರುವಾರ ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಇಬ್ಬರು ಮುಖ್ಯ ನ್ಯಾಯಮೂರ್ತಿಗಳು ಅರ್ಜಿದಾರರಿಗೆ ಸಕತ್ ಬುದ್ಧಿವಾದ ಹೇಳಿದರು. ಈ ಅರ್ಜಿ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ
ಪ್ರಸನ್ನ ಬಿ ವರಾಳೆ (Prasanna B Varale) ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ (MGS Kamal) ಅವರನ್ನೊಳಗೊಂಡ ಪೀಠವು ‘ಶಕ್ತಿ’ ಯೋಜನೆ ಪ್ರಾರಂಭಕ್ಕೂ ಮೊದಲು ಮಹಿಳೆಯರ
ಪ್ರಯಾಣ ಸರ್ಕಾರಿ ಬಸ್ಗಳಲ್ಲಿ ಆರಾಮದಾಯಕವಾಗಿತ್ತೇ ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ.
ಈ ಪೀಠವೂ ಅರ್ಜಿ ವಿಚಾರಣೆ ವೇಳೆ ಸಾಕಷ್ಟು ಪ್ರಶ್ನೆಗಳನ್ನು ಯುವ ಅರ್ಜಿದಾರರಿಗೆ ಕೇಳಿದ್ದು, ಅದು ಈ ರೀತಿ ಇದೆ
1) ಶಕ್ತಿ ಯೋಜನೆಯ ಬಗ್ಗೆ ಅಧ್ಯಯನ ಮಾಡಿ ಅರ್ಜಿಯನ್ನು ಸಲ್ಲಿಸಿದ್ದೀರಾ?
2)ಯೋಜನೆಯು ಆರ್ಥಿಕ ದುರ್ಬಲ ವರ್ಗಕ್ಕೆ ಸೌಲಭ್ಯ ನೀಡಿದೆ ಅಲ್ವಾ ?
3) ಶಕ್ತಿ ಯೋಜನೆ ಜಾರಿಗೆ ಮುನ್ನ ಸಂಚಾರವೂ ಸುಗಮವಾಗಿತ್ತಾ?
4) ಈ ಯೋಜನೆಯ ಕಾರಣದಿಂದ ಬಸ್ ನಲ್ಲಿ ದಟ್ಟಣೆ ಉಂಟಾಗಿದೆಯೇ?
5) ಉಂಟಾಗಿದ್ದರೆ ಎಲ್ಲೆಲ್ಲಿ ಎಂದು ಪ್ರಶ್ನೆ .
6) ಯಾವ ಯಾವ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಇದೆ?
7) ಸಾರ್ವಜನಿಕ ಸಾರಿಗೆ ಬಸ್ನಲ್ಲಿ ಇಷ್ಟೇ ಜನ ಪ್ರಯಾಣಿಸಬೇಕು ಎಂದು ಏನಾದರೂ ರೂಲ್ಸ್ ಆಗಿದಿಯಾ ? ಎಂದು ಮುಂತಾದ ಅಧ್ಯಯನ ಮಾಡಬೇಕಿದ್ದ ವಿಷಯಗಳ ಬಗ್ಗೆ ಹೈಕೋರ್ಟ್
ಅರ್ಜಿದಾರರನ್ನು ಪ್ರಶ್ನಿಸಿದೆ.

ಮುಂಬೈನಲ್ಲಿ ಓಡಾಡೋ ಲೋಕಲ್ ರೈಲುಗಳ ದಟ್ಟಣೆಯ ಬಗ್ಗೆ ನಿಮಗೇನಾದ್ರು ಅರಿವಿದ್ದಿದ್ರೆ ಈ ಅರ್ಜಿ ಸಲ್ಲಿಕೆ ಮಾಡುತ್ತಿರಲಿಲ್ಲ ಎಂದೂ ಕೋರ್ಟ್ (Court) ಕಮೆಂಟ್ ಮಾಡಿದ್ದು, ಒಟ್ಟಾರೆ ಅಧ್ಯಯನ
ಮಾಡದೇ ಅರ್ಜಿ ಸಲ್ಲಿಸಿದ್ದೀರಿ ಎಂದು ಕೋರ್ಟು ಅರ್ಜಿದಾರ ಕಾನೂನು ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಕೊನೆಗೆ ಅರ್ಜಿಯನ್ನು ಹಿಂಪಡೆಯಲು ನಿಮಗೆ ಅನುಮತಿ ನೀಡುತ್ತೇವೆ ಎಂದು
ಹೈಕೋರ್ಟ್ (Highcourt) ಅವಕಾಶವನ್ನು ನೀಡಿದೆ. ಈ ಮೂಲಕ ರಾಜ್ಯದ ಜನಪ್ರಿಯ ಶಕ್ತಿ ಯೋಜನೆಯನ್ನು ನಿಲ್ಲಿಸಬೇಕೆಂದು ಅರ್ಜಿ ಹಾಕಿದವರಿಗೆ ಭಾರಿ ಮುಖಭಂಗ ಉಂಟಾಗಿದೆ.
ದೂರುದಾರರ ಅರ್ಜಿ ಈ ರೀತಿ ಇದ್ದು, ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಬಸ್‌ಗಳಲ್ಲಿ ಸೀಟು ಪಡೆದುಕೊಳ್ಳಲು ಗಲಾಟೆ, ಹೊಡೆದಾಟ ನಡೆದ ಘಟನೆಗಳು ಸಂಭವಿಸಿದೆ.
ಹಿರಿಯ ನಾಗರಿಕರು, ಮಕ್ಕಳು ಬಸ್‌ಗಳಲ್ಲಿ ಹತ್ತಲು ಆಗುತ್ತಿಲ್ಲ. ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲಾ-ಕಾಲೇಜು ತಲುಪಲು ಆಗುತ್ತಿಲ್ಲ. ಇದರಿಂದಾಗಿ ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಅನುಚಿತ
ವರ್ತನೆ, ಅಹಿತಕರ ಘಟನೆಗಳು ನಡೆಯುತ್ತಿವೆ. ಬಸ್ ನಿಲ್ದಾಣ ಮತ್ತು ಸರ್ಕಾರಿ ಬಸ್‌ಗಳು ಯುದ್ಧ ಭೂಮಿ, ಮೀನು ಮಾರುಕಟ್ಟೆಯಂತಾಗಿವೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
ಮತ್ತು ಈ ಯೋಜನೆ ಜಾರಿಗೆ ಬಂದಾಗಿನಿಂದ ಮೂರು ಕೋಟಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದು, ಇದರಿಂದ ವಾರಕ್ಕೆ 100 ಕೋಟಿ ರೂಪಾಯಿ ತೆರಿಗೆದಾರರ ಹಣ ಸರ್ಕಾರಕ್ಕೆ
ನಷ್ಟವಾಗುತ್ತಿದೆ. ಈ ಯೋಜನೆಗೆ ವಾರ್ಷಿಕ 3,200 ರಿಂದ 3,400 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಿ ಅರ್ಜಿಯಲ್ಲಿ ತಿಳಿಲಾಗಿತ್ತು.
ಕಾನೂನು ವಿದ್ಯಾರ್ಥಿಗಳು ಮನವಿ ಮಾಡಿದ್ದು ಶಾಲಾ, ಕಾಲೇಜು ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಬಸ್ ಹತ್ತಿ-ಇಳಿಯಲು ಸೂಕ್ತ ವ್ಯವಸ್ಥೆ ನೀಡಬೇಕು. ದೂರದ ಊರುಗಳಿಗೆ ತೆರಳುವ ಬಸ್‌ಗಳಲ್ಲಿ
ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಬಸ್‌ಗಳಲ್ಲಿ ಹತ್ತಲು ಮೊದಲು ಅವಕಾಶ ಮಾಡಿಕೊಡಬೇಕು. ಅಲ್ಲದೆ ದೂರದ ಊರುಗಳಿಗೆ ನಿಂತು ಪ್ರಯಾಣಿಸುವುದನ್ನು ನಿಷೇಧಿಸಬೇಕು. ಮತ್ತು ಟಿಕೆಟ್
ಪಡೆದವರಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಬೇಕು. ಕಿಟಿಕಿ ಹಾಗೂ ಚಾಲಕರ ದ್ವಾರದ ಮೂಲಕ ಪ್ರಯಾಣಿಕರು ಹತ್ತುವುದನ್ನು ನಿರ್ಬಂಧಿಸಬೇಕು. ಇನ್ನು ಶಾಲಾ ಮಕ್ಕಳಿಗೆ ವಿಶೇಷ ಬಸ್‌ಗಳ
ವ್ಯವಸ್ಥೆ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಭವ್ಯಶ್ರೀ ಆರ್.ಜೆ