ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ, ಆಧಾರ ರಹಿತವಾಗಿ ಪತಿಯ(Husband) ವಿರುದ್ದ ನಪುಂಸಕತ್ವ ಆರೋಪ ಹೊರಿಸಿದ್ದ ಪತ್ನಿಯ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿರುವ ರಾಜ್ಯ ಹೈಕೋರ್ಟ್(Highcourt) ಹೀಗೆ ಆರೋಪಿಸುವುದು ‘ಮಾನಸಿಕ ಕ್ರೌರ್ಯ’ ಎಂದು ವ್ಯಾಖ್ಯಾನಿಸಿದೆ.

ವಿಚ್ಛೇದನ(Divorce) ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ವೇಳೆ, ಆಧಾರ ರಹಿತವಾಗಿ ಪತ್ನಿಯೂ ಪತಿಯ ವಿರುದ್ದ ನಪುಂಸಕತ್ವ ಆರೋಪ ಹೊರಿಸುವುದು ಮಾನಸಿಕ ಕ್ರೌರ್ಯವಾಗುತ್ತದೆ. ಹೀಗಾಗಿ ಇದನ್ನು ಆಧರಿಸಿ ಪತಿಯೂ ವಿಚ್ಛೇದನ ಪಡೆಯಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಯಾವುದೇ ಆಧಾರವಿಲ್ಲದೇ ಪತಿಯ ವಿರುದ್ದ ನಪುಂಸಕತ್ವ ಆರೋಪ ಹೊರಿಸಿದ್ದ ಪತ್ನಿಯ ನಡೆಯ ವಿರುದ್ದ ವಿಚ್ಛೇದನಕ್ಕೆ ಕೋರಿ ಪತಿಯು ಸಲ್ಲಿಸಿದ್ದ ಅರ್ಜಿಯನ್ನು ರದ್ದು ಮಾಡಿದ್ದ ಧಾರವಾಡ(Dharwad) ಜಿಲ್ಲಾ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದು ಪಡಿಸಿದೆ.
ಸಾರ್ವಜನಿಕವಾಗಿ ಪತ್ನಿಯೂ ಪತಿಯ ವಿರುದ್ದ ಯಾವುದೇ ಆಧಾರವಿಲ್ಲದೇ, ನಪುಂಸಕತ್ವ ಆರೋಪ ಹೊರಿಸುವುದು ಪತಿಯ ಘನತೆಗೆ ಧಕ್ಕೆಯುಂಟು ಮಾಡುತ್ತದೆ. ಹೀಗಾಗಿ ಪತಿಯು ವಿಚ್ಛೇದನ ಪಡೆಯಲು ಅರ್ಹ ಎಂದು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ. ಇನ್ನು ಪತಿಯು ತಾನು ವೈದ್ಯಕೀಯ ಪರೀಕ್ಷೆಗೆ ಸಿದ್ದವಿರುವುದಾಗಿ ಹೇಳಿದ್ದರೂ, ಪತ್ನಿಯೂ ಪತಿಯ ನಪುಂಸಕತ್ವವನ್ನು ಸಾಬೀತು ಮಾಡಲು ಸೂಕ್ತ ವೈದ್ಯಕೀಯ ದಾಖಲೆಗಳನ್ನು ಒದಗಿಸಲು ಸಾಧ್ಯವಾಗಿಲ್ಲ.

ಲೈಂಗಿಕ ಕ್ರಿಯೆಯಲ್ಲಿ ಪತಿಯೂ ಅಸಮರ್ಥ ಎಂದು ಆರೋಪಿಸುವುದು ಪತಿ-ಪತ್ನಿಯ ನಡುವೆ ಸಾಮರಸ್ಯಯುತವಾಗಿ ಜೀವನ ನಡೆಸಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಹೀಗಾಗಿ ಪತಿಯೂ ವಿಚ್ಛೇದನ ಪಡೆಯಬಹುದು. ಇನ್ನು ಹಿಂದೂ ವಿವಾಹ ಕಾಯ್ದೆ(Hindu Marriage Act) -1955ರ ಸೆಕ್ಷನ್ 13ರಲ್ಲಿ ನಪುಂಸಕತ್ವವು ವಿಚ್ಛೇದನ ಪಡೆಸಲು ಕಾರಣವಲ್ಲ ಎಂದು ಹೇಳಿದೆ.