Bengaluru: ಬೆಂಗಳೂರಿನಲ್ಲಿ (Bengaluru) 2022ರಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು (Highest Acid Attack Cases) ಆ್ಯಸಿಡ್ ದಾಳಿಗಳು ನಡೆದಿದ್ದು, ರಾಷ್ಟ್ರೀಯ ಅಪರಾಧ ದಾಖಲೆಗಳ
ಬ್ಯೂರೋ (NCRB) 2022ರಲ್ಲಿ ನಡೆದ ಆ್ಯಸಿಡ್ ದಾಳಿಗಳ ಕುರಿತು ವರದಿಯನ್ನು ಬಹಿರಂಗಪಡಿಸಿದೆ. ಇನ್ನು ನಗರ ಪೊಲೀಸರು 8 ಪ್ರಕರಣಗಳನ್ನು ದಾಖಲಿಸಿದ್ದು, ಎನ್ಸಿಆರ್ಬಿಯು ಇತ್ತೀಚಿನ
ರದಿ ಬಿಡುಗಡೆ (Highest Acid Attack Cases) ಮಾಡಿದೆ.

ಕಳೆದ ವರ್ಷ ಬೆಂಗಳೂರಿನಲ್ಲಿ 8 ಮಹಿಳೆಯರ ಮೇಲೆ ಆ್ಯಸಿಡ್ ದಾಳಿ (Acid Attack) ಮಾಡಲಾಗಿದ್ದು, 19 ಮೆಟ್ರೋಪಾಲಿಟನ್ ನಗರಗಳ ಪೈಕಿ ಆ್ಯಸಿಡ್ ದಾಳಿಗೆ ಬಲಿಯಾದ ಮಹಿಳೆಯರ ಒಟ್ಟಾರೆ
ಪಟ್ಟಿಯನ್ನು ನೋಡಿದಾಗ ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂದು ಎನ್ಸಿಆರ್ಬಿ ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿದೆ.
ಇನ್ನು ದೆಹಲಿಯಲ್ಲಿ (Delhi) 2022ರಲ್ಲಿ 7 ಮಹಿಳೆಯರು ಆ್ಯಸಿಡ್ ದಾಳಿಗೆ ಬಲಿಯಾಗಿದ್ದು, ಎರಡನೇ ಸ್ಥಾನದಲ್ಲಿದೆ. ನಂತರ ಅಹಮದಾಬಾದ್ (Ahmedabad) ಮೂರನೇ ಸ್ಥಾನದಲ್ಲಿದ್ದು, ಅಲ್ಲಿ 5
ಪ್ರಕರಣಗಳು ದಾಖಲಾಗಿವೆ ಎಂದು ಎನ್ಸಿಆರ್ಬಿ ಬಿಡುಗಡೆ ಮಾಡಿದ ಅಂಕಿ-ಅಂಶಗಳು ಬಹಿರಂಗಪಡಿಸಿದೆ.
ಇದಷ್ಟೇ ಅಲ್ಲದೆ, ಬೆಂಗಳೂರಿನಲ್ಲಿ 3 ದಾಳಿ ಯತ್ನ ಪ್ರಕರಣಗಳು ದಾಖಲಾಗಿರುವ ಬಗ್ಗೆ ಉಲ್ಲೇಖಿಸಿದ್ದು, ಹೈದರಾಬಾದ್ (Hyderabad) ಮತ್ತು ಅಹಮದಾಬಾದ್ನಂತಹ ನಗರಗಳಲ್ಲಿ ಕೂಡ ಆ್ಯಸಿಡ್
ದಾಳಿ ಯತ್ನದ 2 ಪ್ರಕರಣಗಳು ದಾಖಲಾಗಿದೆ. ಎನ್ಸಿಆರ್ಬಿ ವಿಶ್ಲೇಷಣೆಯು 2022ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 7 ಆ್ಯಸಿಡ್ ದಾಳಿಯ ಯತ್ನ ಪ್ರಕರಣ ದಾಖಲಾಗಿದೆ ಎಂದು ಹೇಳಿದೆ.

ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದ ಆ್ಯಸಿಡ್ ದಾಳಿ ಪ್ರಕರಣ ಭಾರೀ ಸುದ್ದಿಯಾಗಿತ್ತು. 24 ವರ್ಷದ ಎಂ.ಕಾಂ ಪದವೀಧರೆ ಯುವತಿ ಮೇಲೆ ಏ.28ರಂದು ಕೆಲಸಕ್ಕೆ ಹೋಗುತ್ತಿದ್ದಾಗ ಆಕೆಯ ಮೇಲೆ
ಆ್ಯಸಿಡ್ ದಾಳಿ ನಡೆಸಲಾಗಿದೆ. ಪೊಲೀಸರ ಪ್ರಕಾರ ಆರೋಪಿ ನಾಗೇಶ್ (Nagesh) ಹಲವು ವರ್ಷಗಳಿಂದ ಸಂತ್ರಸ್ತೆಯನ್ನು ಪ್ರೀತಿಸುವಂತೆ ಹಿಂಬಾಲಿಸುತ್ತಿದ್ದ. ಮದುವೆಗೆಂದು ಆಕೆಯನ್ನು ಸಂಪರ್ಕಿಸಿದ್ದು
ಆಕೆ ತನ್ನ ಪ್ರಸ್ತಾವನೆಯನ್ನು ತಿರಸ್ಕರಿಸಿದಾಗ ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ ಎಂದು ಆರೋಪಿಯನ್ನು ಮೇ ತಿಂಗಳಲ್ಲಿ ತಿರುವಣ್ಣಾಮಲೈ (Tiruvannamalai) ಆಶ್ರಮದಿಂದ ಬಂಧಿಸಲಾಗಿತ್ತು.
ಅಲ್ಲಿ ಆತ ಖಾವಿ ವಸ್ತ್ರಧರಿಸಿ ಸ್ವಾಮೀಜಿ ವೇಷದಲ್ಲಿ ಅಡಗಿಕೊಂಡಿದ್ದ. ಜೂ.2023ರಲ್ಲಿ ಸಂತ್ರಸ್ತೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಕಚೇರಿಯಲ್ಲಿ ಗುತ್ತಿಗೆ ಆಧಾರದ
ಮೇಲೆ ಕೆಲಸ ನೀಡಲಾಗಿತ್ತು. ಇದೇ ರೀತಿಯ ಮತ್ತೊಂದು ಪ್ರಕರಣವು 2022ರ ಜೂ.10ರಂದು ನಡೆದಿದೆ. ಪ್ರಕರಣದಲ್ಲಿ ಆರೋಪಿಯು, ಪ್ರಿಯತಮೆ ತನ್ನ ಪ್ರೀತಿ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣ ಆ್ಯಸಿಡ್
ದಾಳಿಯನ್ನು ನಡೆಸಿದ್ದ ಎನ್ನುವುದು ತನಿಖೆಯ ವೇಳೆ ಬಯಲಾಗಿತ್ತು.
ಇದನ್ನು ಓದಿ: ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹ
- ಭವ್ಯಶ್ರೀ ಆರ್ ಜೆ