ಕೊಹ್ಲಿ, ಡುಪ್ಲೆಸಿಸ್ ಅಬ್ಬರಕ್ಕೆ ,ಮುಂಬೈ ತತ್ತರ ;ವಿಶ್ವ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

Bangalore: ಕೊಹ್ಲಿ(Kohli), ಡುಪ್ಲೆಸಿಸ್ ಅಬ್ಬರಕ್ಕೆ ,ಮುಂಬೈ ತತ್ತರ. ವಿಶ್ವ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್ (Dinesh Karthik) ಇದು ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 16 ನೇ ಆವೃತ್ತಿಯ ಐಪಿಎಲ್ ನ ಐದನೇ (Highlights of IPL match) ಪಂದ್ಯದ ಹೈಲೈಟ್‌.

ಯಸ್‌, ನಿನ್ನೆ ನಡೆದ ಹೈವೋಲ್ಟೇಜ್‌ ಮ್ಯಾಚ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ಭರ್ಜರಿ ಜಯ ಗಳಿಸಿ ಅಭಿಮಾನಿಗಳಿಗೆ ಗೆಲುವಿನ ರಸದೌತಣ ನೀಡಿದೆ .


ಆರ್‌ಸಿಬಿಯ(RCB) ಹುಚ್ಚು ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿದ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ (Mumbai Indians) ತಂಡ ಕಣಕ್ಕಿಳಿದರು.

ಈ ಐಪಿಎಲ್‌ ಆವೃತ್ತಿಯ ಐದನೇ ಪದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ತಿಲಕ್ ವರ್ಮಾ

ಅವರ ಅಜೇಯ 84 ರನ್ ಗಳಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು.

ಆ ಬಳಿಕ ಚೇಸಿಂಗ್ ಗೆ ಇಳಿದ ರಾಯಲ್ ಚಾಲೆಂಜರ್ಸ್ ಕೇವಲ 2 ವಿಕೆಟ್ ನಷ್ಟಕ್ಕೆ 16.2 ಓವರ್ ಗಳಲ್ಲಿ 172 ರನ್ ಬಾರಿಸಿ ಜಯಭೇರಿ ಭಾರಿಸಿತು.


ಮಿಂಚಿನ ಬ್ಯಾಟಿಂಗ್ (Batting) ನಡೆಸಿದ ಕೊಹ್ಲಿ ಮತ್ತು ಡುಪ್ಲೆಸಿಸ್ (Duplessis) ಕ್ರೀಡಾಂಗಣದ ಎಲ್ಲ ದಿಕ್ಕುಗಳಿಗೂ

ಅಭಿಮಾನಿಗಳಿಗೆ ಬೇಸರವಾಗದ ರೀತಿ ಚೆಂಡನ್ನು ಬಾರಿಸಿ ಎಲ್ಲರ ಮನಸೂರೆಗೊಂಡರು.

ಡುಪ್ಲೆಸಿಸ್ ತಮ್ಮ ತಮ್ಮ 73 ನ ರನ್ನಿಗೆ ಅರ್ಶದ್ ಖಾನ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಹೊರಟರೆ ಮತ್ತೆ ಬಂದ ದಿನೇಶ್ ಕಾರ್ತಿಕ್ ಮೂರನೇ ಚೆಂಡಿಗೆ ವಿಕೆಟ್ ಕೈ ಚೆಲ್ಲಿದರು .

ಆದರೆ ಆ ಬಳಿಕ ಬಂದ ಮ್ಯಕ್ಸ್ವೆಲ್ ಸಿಕ್ಸರ್ ಬಾರಿಸಿ ತಂಡದ ಮೊತ್ತ ಕ್ಕೆ ಅಪಾಯವಾಗದಂತೆ ನೋಡಿಕೊಂಡರು.

ಗೆಲುವಿಗೆ 6 ರನ್ ಬೇಕಾದಾಗ ಕೊಹ್ಲಿ ಅವರ ಸಿಕ್ಸರ್ ವಿಜಯಕ್ಕೆ ವರದಾನವಾಯಿತು.ಕೊಹ್ಲಿ 49 ರನ್ ಎದುರಿಸಿ 82 ರನ್ ಬಾರಿಸಿದರು ಅದಲ್ಲರಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡಿತ್ತು .


ವಿಶ್ವ ದಾಖಲೆ ಬರೆದ ದಿನೇಶ್ ಕಾರ್ತಿಕ್
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ,

ರೋಹಿತ್ ಶರ್ಮಾ (Rohith Sharma) ರವರ ಕ್ಯಾಚ್ ಹಿಡಿಯುವುದರೊಂದಿಗೆ ಟಿ-20 ಕ್ರಿಕೆಟ್ನಲ್ಲಿ ಇನ್ನೂರು ಕ್ಯಾಚ್ ಹಿಡಿದ ವಿಶ್ವದ ಮೂರನೇ ಮತ್ತು ಭಾರತದ ಎರಡನೇ ವಿಕೆಟ್ ಕೀಪರ್ ಎಂಬ (Highlights of IPL match) ಹೆಗ್ಗಳಿಕೆಗೆ ಪಾತ್ರವಾದರು.


ಅತ್ಯಧಿಕ ಕ್ಯಾಚ್ ಹಿಡಿದ ದಾಖಲೆ ಈಗ ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್ ಹೆಸರಿನಲ್ಲಿದೆ ಅವರು 207 ಕ್ಯಾಚ್ ಹಿಡಿದಿದ್ದಾರೆ.

ದ್ವಿತೀಯ ಸ್ಥಾನವನ್ನು ಚೆನ್ನೈ ತಂಡದ ಎಂ ಎಸ್ ದೋನಿ ಹೆಸರಿನಲ್ಲಿದೆ ಅವರು 203 ಕ್ಯಾಚ್ ಹಿಡಿದಿದ್ದಾರೆ.


ದಾಖಲೆ ಬರೆದ ಸಿರಾಜ್

ಮೊಹಮ್ಮದ್ ಸಿರಾಜ್ (Mohammad Siraj) ಮೊದಲ ಓವರ್ ಗೆ ಎರಡು ರನ್ ಕೊಟ್ಟು ನಂತರ ಓವರ್ ಗೆ ಕೇವಲ ಒಂದು ರನ್ ಕೊಟ್ಟಿದ್ದರು ಅಲ್ಲದೆ ಇಶಾನ್ ಕಿಶನ್ (Ishan Kishan) ರವರ ವಿಕೆಟ್ ಪಡೆದರು ,

ಈ ವಿಕೆಟ್ ಪಡೆಯುವ ಮೂಲಕ ಅಷ್ಟೇ ಅಲ್ಲದೆ ರಾಯಲ್ ಚಾಲೆಂಜರ್ಸ್ ಪರ 50 ವಿಕೆಟ್ ಪಡೆದ 6 ನ ಬೌಲರ್ ಎಂಬ ದಾಖಲೆಯನ್ನು ಮುಡಿಗೇರಿಸಿಕೊಂಡರು.


ಪಂದ್ಯದ 3 ಓವರ್ ಗಳಲ್ಲಿ ಕೇವಲ 5 ರನ್ ಕೊಟ್ಟ ಸಿರಾಜ್ ಕೊನೆಯ ಓವರ್ ನಲ್ಲಿ 21 ರನ್ ಕೊಟ್ಟು ಒಂದು ವಿಕೆಟ್ ಕಬಳಿಸುವ ಮೂಲಕ ಪಂದ್ಯ ಅಂತ್ಯಗೊಳಿಸಿದರು .


ಮಹಮ್ಮದ್ ಶರೀಫ್

Exit mobile version