ಹಿಜಾಬ್ ಧರಿಸಿಯೇ ನಾವು ಹೋಗುವುದು ಎಂದು ಹೈಕೋರ್ಟ್ ಮೆ‍ಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿನಿಯರು!

hijab

ಕಳೆದ ಒಂದೆರೆಡು ವಾರಗಳಿಂದ ಹಿಜಾಬ್ ವಾದ-ವಿವಾದ ಸಾಕಷ್ಟು ದೊಡ್ಡ ಮಟ್ಟದಲ್ಲಿದ್ದು, ಇಂದಿಗೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಹೌದು, ಎರಡು ವಾರಗಳ ಹಿಂದೆಯಷ್ಟೆ ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್ ಧರಿಸಿಯೇ ನಾವು ಪಾಠ ಕೇಳುವುದು ಎಂದು ಅಗ್ರಹಿಸಿದರು. ಈ ವಿಚಾರ ಕುರಿತು ಕಾಲೇಜು ಮಂಡಳಿ ಕೂಡ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗೆ ಬರುವಂತಿಲ್ಲ! ಹಿಜಾಬ್ ಧರಿಸಿಯೇ ಬರುತ್ತೀವಿ ಎಂದರೆ ನೀವಷ್ಟು ಜನ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳಿ ಎಂದರು. ಇದನ್ನು ತಿರಸ್ಕರಿಸಿದ ವಿದ್ಯಾರ್ಥಿನಿಯರು ಎಲ್ಲರೊಟ್ಟಿಗೆ ನಾವು ಪಾಠ ಕೇಳಬೇಕು. ಆನ್‍ಲೈನ್ ಕ್ಲಾಸ್ ನಮಗೆ ಬೇಕಿಲ್ಲ, ನಮ್ಮನ್ನು ಎಲ್ಲರೊಂದಿಗೆ ಸೇರಲು ಬಿಡಿ. ಹಿಜಾಬ್ ಧರಿಸಿ ಕ್ಲಾಸ್‍ಗೆ ಬರುವುದರಲ್ಲಿ ಅಂಥ ತಪ್ಪೇನು ಇದೆ ಎಂದು ಹೇಳಿದ್ದಾರೆ.

ಈ ಕುರಿತು ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸೋಮವಾರ ಉಡುಪಿ ಸರ್ಕಾರಿ ಮಹಿಳಾ ಕಾಲೇಜಿನ ಹಿಜಾಬ್ ಪ್ರಕರಣಕ್ಕೆ ಉತ್ತರಿಸಿದ ಅವರು, ವಿದ್ಯಾರ್ಥಿಗಳ ಜೀವನ ಈ ಹಿಜಾಬ್ ಪ್ರಕರಣದಲ್ಲಿ ಹಾಳಾಗುವುದು ಬೇಡ! ಕೇವಲ ಒಂದು ತಿಂಗಳ ಕಾಲೇಜು ತರಗತಿ ಬಾಕಿ ಇದೆ. ಹೀಗಾಗಿ ಅವರ ಭವಿಷ್ಯಕ್ಕೆ ತೊಂದರೆಯಾಗುವುದು ಬೇಡ. ಕಾಲೇಜಿಗೆ ಬರದಿದ್ದರೆ ಆನ್‍ಲೈನ್ ಕ್ಲಾಸ್ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು. ಆದರೆ ಇದ್ಯಾವುದಕ್ಕೂ ಮಣಿಯದ ಮುಸ್ಲಿಂ ವಿದ್ಯಾರ್ಥಿಗಳು ಹಠ ಬಿಡದೆ ಇಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು, ವಾದ ಮಂಡಿಸುವ ಮೂಲಕ ಹೈಕೋಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಉಡುಪಿಯ ಸರ್ಕಾರಿ ಮಹಿಳಾ ಪಿಯು ವಿದ್ಯಾರ್ಥಿನಿಯರು ರಿಟ್ ಅರ್ಜಿ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂವಿಧಾನದ ಪ್ರಕಾರ ಧಾರ್ಮಿಕ ಹಕ್ಕುಗಳನ್ನು ನೀಡಲಾಗಿದೆ. ಹಿಜಾಬ್ ಧರಿಸುವುದು ಧಾರ್ಮಿಕ ಹಕ್ಕಿನ ಭಾವ. ನಮಗೆ ಎಲ್ಲರೊಟ್ಟಿಗೆ ಕುಳಿತು ಪಾಠ ಕೇಳಬೇಕು, ನಮ್ಮ ಧರ್ಮದ ಆಚರಣೆಯಾಗಿ ನಾವು ಧರಿಸುವ ಹಿಜಾಬ್ ಅನ್ನು ಕ್ಲಾಸ್ ಧರಿಸಿ ಬರಬೇಡಿ ಎಂದು ಹೇಳುತ್ತಾರೆ. ಇದಕ್ಕೆ ಕಾಲೇಜು ಮಂಡಳಿ ಅನುಮತಿ ನೀಡುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ಸೂಕ್ತ ಆದೇಶ ನೀಡಲು ನಾವು ಮನವಿ ಸಲ್ಲಿಸಿದ್ದೇವೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.

Exit mobile version