ಹಿಜಾಬ್ ಆಯ್ಕೆಯಲ್ಲ : ಇರಾನ್ನಲ್ಲಿ ಹಿಜಾಬ್ ಸುಟ್ಟು, ಕೂದಲು ಕತ್ತರಿಸಿ, ಮಹಿಳೆಯರಿಂದ ಬೃಹತ್‌ ಪ್ರತಿಭಟನೆ!

hijab

Tehran : ಇರಾನ್‌ನಲ್ಲಿ(Iran) ಹಿಜಾಬ್‌(Hijab is not an option) ವಿರುದ್ದ ಬೃಹತ್‌ ಪ್ರತಿಭಟನೆಗಳು ನಡೆಯುತ್ತಿದ್ದು, “ಹಿಜಾಬ್‌ ನಮ್ಮ ಆಯ್ಕೆಯಲ್ಲ” ಎಂದು ಘೋಷಣೆ ಕೂಗುತ್ತಿರುವ ಇರಾನ್‌ ಮಹಿಳೆಯರು, ಹಿಜಾಬ್‌ ಅನ್ನು ಸುಟ್ಟು, ಕೂದಲು ಕತ್ತರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು 22 ವರ್ಷದ ಮಹಿಳೆ ಮಹ್ಸಾ ಅಮಿನಿ(Mahsa Amini) ಅವರ ಸಾವಿನ ವಿರುದ್ಧ ಪ್ರತಿಭಟಿಸಿ ತಮ್ಮ ಹಿಜಾಬ್ ಅನ್ನು ಸುಟ್ಟು ಮತ್ತು ಕೂದಲನ್ನು ಕತ್ತರಿಸುತ್ತಿರುವ ಇರಾನ್ ಮಹಿಳೆಯರನ್ನು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಅವರು ಶ್ಲಾಘಿಸಿದ್ದಾರೆ.

https://youtu.be/N-hn7-K3MoU CITIZEN JOURNALISM

ಈ ಕುರಿತು ಮಾತನಾಡಿರುವ ತಸ್ಲೀಮಾ ನಸ್ರೀನ್, ಹಿಜಾಬ್ ವಾಸ್ತವವಾಗಿ ಆಯ್ಕೆಯಾಗಿಲ್ಲ, ಇರಾನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ವಿಶ್ವದಾದ್ಯಂತ ಮಹಿಳೆಯರು ಧೈರ್ಯವನ್ನು ಪಡೆಯುತ್ತಾರೆ. ಇಂದು ನಾನು ತುಂಬಾ ಸಂತೋಷವಾಗಿದ್ದೇನೆ. ಹಿಜಾಬ್ ಅನ್ನು ಸುಟ್ಟು ಪ್ರತಿಭಟಿಸುತ್ತಿರುವ ದೃಶ್ಯ ಸುಂದರವಾಗಿದೆ.

ಇದು ಜಗತ್ತಿಗೆ, ಎಲ್ಲಾ ಮುಸ್ಲಿಂ ಮಹಿಳೆಯರಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಹಿಜಾಬ್ ಮಹಿಳೆಯರ ನಿಗ್ರಹ, ದಬ್ಬಾಳಿಕೆ, ನಿಂದನೆ ಮತ್ತು ಅವಮಾನದ ಸಂಕೇತವಾಗಿದೆ. ಪ್ರಪಂಚದಾದ್ಯಂತ ಮುಸ್ಲಿಂ ಮಹಿಳೆಯರು ತಮ್ಮ ಹಿಜಾಬ್ ಅನ್ನು ಸುಡಬೇಕು ಮತ್ತು ಹಿಜಾಬ್ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದಾರೆ.

ಇನ್ನು ಹೆಚ್ಚಿನ ಸಂದರ್ಭಗಳಲ್ಲಿ ಹಿಜಾಬ್ ಆಯ್ಕೆಯಾಗಿಲ್ಲ ಎಂದು ತಸ್ಲೀಮಾ ನಸ್ರೀನ್ ಪ್ರತಿಪಾದಿಸಿದ್ದು, ಕುಟುಂಬದ ಒತ್ತಡ, ಭಯ ಅವರ ಮನಸ್ಥಿತಿಯನ್ನು ರೂಪಿಸುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ. ಹಿಜಾಬ್ ವಾಸ್ತವವಾಗಿ ಒಂದು ಆಯ್ಕೆಯಲ್ಲ. ಹೆಚ್ಚಿನ ಮಹಿಳೆಯರು ಹಿಜಾಬ್ ಧರಿಸುತ್ತಾರೆ.

ಏಕೆಂದರೆ ಅವರ ಪೋಷಕರು ಮತ್ತು ಕುಟುಂಬ ಸದಸ್ಯರು ಹಿಜಾಬ್ ಧರಿಸಲು ಒತ್ತಾಯಿಸುತ್ತಾರೆ. ಕೆಲವು ಮಹಿಳೆಯರು ಹಿಜಾಬ್ ಧರಿಸಲು ಬ್ರೈನ್ ವಾಶ್ ಆಗಿರುವುದರಿಂದ ಅದನ್ನು ಧರಿಸುತ್ತಾರೆ ಎಂದು ತಸ್ಲೀಮಾ ನಸ್ರೀನ್ ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/india-australia-face-to-face/

ಇನ್ನು ಇರಾನ್‌ ರಾಜಧಾನಿ ಟೆಹ್ರಾನ್ನಲ್ಲಿ 22 ವರ್ಷದ ಮಹಿಳೆ ಮಹ್ಸಾ ಅಮಿನಿ ಹಿಜಾಬ್ನಲ್ಲಿ ತಪ್ಪನ್ನು ಕಂಡುಕೊಂಡ ನೈತಿಕ ಪೋಲೀಸರಿಂದ ಬಂಧನಕ್ಕೊಳಗಾದ ನಂತರ ಅವಳು ಹೃದಯಾಘಾತಕ್ಕೆ ಒಳಗಾಗಿದ್ದಳು. ಮಹಾ ಅಸ್ಮಿನಿಯ ಸಾವಿನ ನಂತರ ಇರಾನ್ನಾದ್ಯಂತ ಹಿಜಾಬ್‌ ವಿರುದ್ದ ಪ್ರತಿಭಟನೆಗಳು ಭುಗಿಲೆದ್ದಿವೆ.

Exit mobile version