Mohali : ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟಿ-20 ಪಂದ್ಯ(India-australia face to face) ಪಂಜಾಬಿನ(Punjab) ಮೊಹಾಲಿಯಲ್ಲಿ(Mohali) ನಡೆಯಲಿದೆ.

ಸದ್ಯ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಒಟ್ಟು ಮೂರು ಟಿ-20 ಪಂದ್ಯಗಳನ್ನು ಭಾರತದ ವಿರುದ್ದ ಆಡಲಿದೆ. ಇನ್ನು ಭಾರತ ತಂಡ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಸರಣಿಯ ನಂತರ ದಕ್ಷಿಣ ಆಫ್ರಿಕಾದೊಂದಿಗೂ ಟಿ-20 ಸರಣಿಯನ್ನು ಆಡಲಿದೆ.
https://vijayatimes.com/chandigarh-vv-students-stop-protesting/
- ಭಾರತ – ಆಸ್ಟ್ರೇಲಿಯಾ ನಡುವಿನ ಟಿ-20 ಸರಣಿಯ ವೇಳಾಪಟ್ಟಿ :
- ಮೊದಲ ಟಿ-20 ಪಂದ್ಯ 20 ಸೆಪ್ಟೆಂಬರ್, ಮೊಹಾಲಿ
- ಎರಡನೇ ಟಿ-20 ಪಂದ್ಯ 23 ಸೆಪ್ಟೆಂಬರ್, ನಾಗ್ಪುರ
- ಮೂರನೇ ಟಿ-20 ಪಂದ್ಯ 25 ಸೆಪ್ಟೆಂಬರ್, ಹೈದರಾಬಾದ್

ಪಂದ್ಯದ ನೇರಪ್ರಸಾರ : ಭಾರತ – ಆಸ್ಟ್ರೇಲಿಯಾ ನಡುವಿನ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ನಡೆದು, 7:30 ಪಂದ್ಯ ಆರಂಭವಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್(Star Sports Network) ನೇರ ಪ್ರಸಾರ ಮಾಡಲಿದೆ. ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್ಸ್ಟಾರ್ನಲ್ಲಿ ನೋಡಬಹುದು.
https://youtu.be/N-hn7-K3MoU CITIZEN JOURNALISM
ಆಸ್ಟ್ರೇಲಿಯಾ ತಂಡ : ಆರನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್ವೆಲ್, ಕೇನ್ ರಿಚರ್ಡ್ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಆಡಮ್ ಝಂಪಾ.

ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.
- ಮಹೇಶ್.ಪಿ.ಎಚ್