ಹಿಜಾಬ್‌ ಜೊತೆಗೆ ಕೇಸರಿ ರುಮಾಲ್‌ ಬಂದರೆ ನಾವು ಜವಾಬ್ದಾರರಲ್ಲ – ಶಾಸಕ ರಘುಪತಿ ಭಟ್‌

hijab

ಉಡುಪಿ ಜ 4 : ಕಳೆದ ಕೆಲವು ದಿನಗಳಿಂದ ತರಗತಿಯ ಒಲಗೆ ಹಿಜಾಬ್‌ ಧರಿಸಿಕೊಂಡು ಕೂರಲು ಅವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆಯ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್‌ ಹಿಜಾಬ್‌ ಹೋರಾಟ ನಡುವೆ ಕೇಸರಿ ರುಮಾಲ್‌ ಬಂದರೆ ನಾವು ಜವಾಬ್ದಾರರಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕೊಡಿ ಎಂದು ಉಡುಪಿಯ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ 6 ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಕ್ಲಾಸಿಗೆ ತೆರಳದೆ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಕೆಲ ಸಂಘಟನೆ ಬೆಂಬಲಿಸಿದೆ. ಹಿಜಬ್ ಹೋರಾಟ ನಿಲ್ಲಿಸಿ ಮತ್ತೆ ಕೇಸರಿ ರುಮಾಲು, ಸ್ಲೀವ್ ಲೆಸ್-ಜೀನ್ಸ್ ಬಂದ್ರೆ ನಾವು ಜವಾಬ್ದಾರರಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಸರ್ಕಾರ ಮತ್ತು ಪಿಯು ಬೋರ್ಡ್‍ಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಈ ಬಗ್ಗೆಮಾತನಾಡಿದ ಅವರು, ಉಡುಪಿ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿನೀಯರ ಹಿಜಬ್ ಹಕ್ಕಿನ ಪ್ರತಿಭಟನೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಟ್ವಿಟ್ಟರ್ ಮೂಲಕ ಟಾಪ್ ಟ್ರೆಂಡ್ ಮಾಡಲಾಗಿತ್ತು. ಈ ಬಗ್ಗೆ ಉಡುಪಿ ಬಿಜೆಪಿ ಶಾಸಕ, ಭರವಸೆ ಸಮಿತಿ ಅಧ್ಯಕ್ಷ ರಘುಪತಿ ಭಟ್ ಮಾತನಾಡಿದ್ದಾರೆ. ಹಿಜಬ್ ವಿಚಾರದಲ್ಲಿ ಉದ್ದೇಶಪೂರ್ವಕ ಗೊಂದಲ ಸೃಷ್ಟಿಯಾಗುತ್ತಿದೆ. ಸರ್ಕಾರಿ ಪಿಯು ಕಾಲೇಜಿನಲ್ಲಿ 1985 ರಿಂದಲೂ ಸಮವಸ್ತ್ರ ಕಡ್ಡಾಯ ಇದೆ. ಹಿಜಬ್‍ಗೆ ಒತ್ತಾಯ ಮಾಡುವವರು ಒಂದುವರೆ ವರ್ಷ ಸಮವಸ್ತ್ರದಲ್ಲಿ ಬಂದಿದ್ದಾರೆ.

ಯಾರದ್ದೋ ಕುಮ್ಮಕ್ಕಿನಿಂದ ಘಟನೆಯನ್ನು ರಾಜಕೀಯ ಗೊಳಿಸಲಾಗುತ್ತಿದೆ. ಯೂನಿಫಾರ್ಮ್ ಬೇಕಾ ಬೇಡ್ವಾ ಎಂಬುದನ್ನು ಸರ್ಕಾರ ತೀರ್ಮಾನಿಸಲಿ. ಪದವಿ ಪೂರ್ವ ಕಾಲೇಜಿನ ಬೋರ್ಡ್‍ಗೆ ನಾವು ಪತ್ರವನ್ನು ಬರೆದಿದ್ದೇವೆ. ಸಮವಸ್ತ್ರ ಬೇಡ ಎಂದರೆ ಯಾರಿಗೂ ಕಡ್ಡಾಯ ಮಾಡಬೇಡಿ. ಕೇಸರಿ ರುಮಾಲು, ಜೀನ್ಸ್, ಸ್ಲೀವ್ ಲೆಸ್ ಬಟ್ಟೆ ಹಾಕಿಕೊಂಡು ಬರಬಹುದೇ? ತಮಗಿಷ್ಟದ ಬಟ್ಟೆಯನ್ನು ಹಾಕಿಕೊಂಡು ಬರಲು ಅವಕಾಶ ಇದೆಯೇ? ಎಂಬ ಬಗ್ಗೆ ಸರ್ಕಾರ ತೀರ್ಮಾನಿಸಲಿ ಎಂದರುಸರ್ಕಾರ ಉಡುಪಿಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡು ಸರ್ಕಾರ ತೀರ್ಮಾನಿಸಬೇಕು. ಸಮವಸ್ತ್ರ ಎಂದರೆ ಶಿಸ್ತು ಸಮವಸ್ತ್ರ ಎಂದರೆ ಸಮಾನತೆ. ಶಿಕ್ಷಣದಲ್ಲಿ ಸಮಾನತೆ ಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಹಿಜಬ್ ಧರಿಸುವುದರಿಂದ ಧರ್ಮದ ಬೇಧ ಬರುತ್ತದೆ. ರಾಜ್ಯದಲ್ಲಿ ಯೂನಿಫಾರಂ ಬೇಕಾ ಬೇಡ್ವಾ ಎಂದು ಸರ್ಕಾರ ತೀರ್ಮಾನಿಸಲಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.

Exit mobile version