ಬ್ರಿಟನ್ನ ಲೀಸೆಸ್ಟರ್ನಲ್ಲಿ ಪಾಕ್‌ಮೂಲದ ಮುಸ್ಲಿಮರಿಂದ ಹಿಂದೂ ದೇವಾಲಯಗಳ ಮೇಲೆ ದಾಳಿ : ಭಾರತ ಖಂಡನೆ

Hindu Temple

London : ಬ್ರಿಟನ್‌ನ(Britain) ಲೀಸೆಸ್ಟರ್‌ನಲ್ಲಿ ಪಾಕಿಸ್ತಾನ(Pakistan) ಮೂಲದ ಮುಸ್ಲಿಂ ಗ್ಯಾಂಗುಗಳಿಂದ, ಹಿಂದೂ ದೇವಾಲಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುವ ಘಟನೆ ನಡೆದಿದೆ.

ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಈ ದಾಳಿಯಲ್ಲಿ ಭಾಗಿಯಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಬ್ರಿಟನ್‌ ಸರ್ಕಾರಕ್ಕೆ(Britain Government) ಎಚ್ಚರಿಕೆ ನೀಡಿದೆ. ಇನ್ನು ಬ್ರಿಟನ್‌ನ ಪೂರ್ವ ಲೀಸೆಸ್ಟರ್ನಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವ ಪಾಕ್‌ ಮೂಲದ ಮುಸ್ಲಿಂ ಗ್ಯಾಂಗುಗಳು, ದೇವಸ್ಥಾನದ ಹೊರಗಿನ ಕೇಸರಿ ಧ್ವಜವನ್ನು ಉರುಳಿಸಿದ ವೀಡಿಯೋ ಎಲ್ಲೆಡೆ ವೈರಲ್‌(Viral) ಆಗಿದೆ.

ಬ್ರಿಟನ್‌ನ ಪೂರ್ವ ಲೀಸೆಸ್ಟರ್ ನಗರದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಕಪ್ಪು ಬಟ್ಟೆಯನ್ನು ಧರಿಸಿದ ಅಪರಿಚಿತ ವ್ಯಕ್ತಿಗಳು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ. ಇದೇ ವೇಳೆ ಹಿಂದೂ ಸಮುದಾಯದವರ ಮನೆಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/chemical-food/

ಇನ್ನು ಭಾರತೀಯ ಹೈಕಮಿಷನ್ ಭಾರತೀಯ ಸಮುದಾಯದ ಮೇಲಿನ ಹಿಂಸಾಚಾರ ಮತ್ತು ಹಿಂದೂ ಧಾರ್ಮಿಕ ಚಿಹ್ನೆಗಳ ಧ್ವಂಸವನ್ನು ಖಂಡಿಸಿ ಹೇಳಿಕೆಯನ್ನು ನೀಡಿದೆ. ಲೀಸೆಸ್ಟರ್ಶೈರ್ ಪೋಲಿಸ್ರ ಪ್ರಕಾರ, ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ.

ಮೆಲ್ಟನ್ ರಸ್ತೆಯಲ್ಲಿರುವ ಧಾರ್ಮಿಕ ಸ್ಥಳದ ಹೊರಗೆ ಧ್ವಜವನ್ನು ಉರುಳಿಸಿದ ಘಟನೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಲೀಸೆಸ್ಟರ್ನ ಬೀದಿಗಳಲ್ಲಿ ಸ್ಥಳೀಯ ತೀವ್ರಗಾಮಿ ಇಸ್ಲಾಮಿಸ್ಟ್ಗಳು ಹಿಂದೂಗಳ ಮನೆಗಳು ಮತ್ತು ವಾಹನಗಳನ್ನು ಗುರಿಯಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/sonia-gandhi-responds/

ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು. ನಮ್ಮ ನಗರದಲ್ಲಿ ಹಿಂಸಾಚಾರ ಅಥವಾ ಅವ್ಯವಸ್ಥೆಯನ್ನು ನಾವು ಸಹಿಸುವುದಿಲ್ಲ” ಎಂದು ಲೀಸೆಸ್ಟರ್ಶೈರ್ ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗಿದ ಗುಂಪಿನಿಂದ ಮುಸ್ಲಿಮರ ಒಡೆತನದ ಆಸ್ತಿಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ಹೇಳಿಕೆಯನ್ನು ಪೊಲೀಸರು ನಿರಾಕರಿಸಿದ್ದಾರೆ.

ಮಹೇಶ್.ಪಿ.ಎಚ್

Exit mobile version