ವಿಶ್ವವಿಖ್ಯಾತ  ದಸರಾದ ಹಿನ್ನೆಲೆ ನೀವು ತಿಳಿದಷ್ಟು ಸರಳವಾಗಿಲ್ಲ: ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ.

ಇತಿಹಾಸ ಪ್ರಸಿದ್ಧ ದಸರಾ ಆರಂಭವಾಗಿದೆ. ಹೌದು, ಮೈಸೂರು(History behind dusserha) ಎಂದ ತಕ್ಷಣ ನೆನಪಾಗುವುದೇ ದಸರಾ. ದಸರಾದ ವೈಭವವನ್ನು ಕಣ್ತುಂಬಿಕೊಳ್ಳಲು ಬೇರೆ ಬೇರೆ ರಾಜ್ಯಗಳ ಜನರಷ್ಟೇ ಅಲ್ಲದೇ, ವಿದೇಶಿಗರೂ ಆಗಮಿಸುತ್ತಾರೆ.

ಇಂತಹ ವಿಶ್ವವಿಖ್ಯಾತ ದಸರಾದ(History behind dusserha) ರೋಚಕ ಹಿನ್ನೆಲೆಯನ್ನು ತಿಳಿದುಕೊಳ್ಳೋಣ ಬನ್ನಿ.

ಮೈಸೂರು ಎಂಬುದು “ಮಹಿಷಾಸುರ” ಎಂಬ ಅಸುರನ ಹೆಸರಿನಿಂದ ಮೂಲವಾಗಿ ಬಂದಿದೆ. ಇದನ್ನು ಹಿಂದೆ “ಮಹಿಷಾಸುರನ ಊರು” ಎಂದೂ ಕರೆಯಲಾಗುತ್ತಿತ್ತು.

https://vijayatimes.com/russia-replies-to-narendra-modi/

ದೇವೀ ಭಾಗವತದಲ್ಲಿ ಬರುವ ಪೌರಾಣಿಕ ಕಥನಕ್ಕೆ ಮೈಸೂರಿನ ಜೊತೆ ನಂಟಿದೆ. ದೇವಿ ಪುರಾಣದಲ್ಲಿರುವ ಕಥೆಯ ಪ್ರಕಾರ, ಅಸುರರ ದೊರೆ, ಕೋಣನ ತಲೆಯುಳ್ಳ ಮಹಿಷಾಸುರ ಎಂಬಾತನು ಮೈಸೂರು ಪಟ್ಟಣವನ್ನು ಆಳುತ್ತಿದ್ದನು.

ಮಹಿಷಾಸುರನ ಉಪಟಳ ತಾಳಲಾರದೆ ದೇವಾನುದೇವತೆಗಳು ತಮ್ಮನ್ನು ರಕ್ಷಿಸುವಂತೆ ಪಾರ್ವತೀ ದೇವಿಯ ಮೊರೆ ಹೋದರು.

ದೇವಾನು ದೇವತೆಗಳ ಮೊರೆಯನ್ನು ಆಲಿಸಿದ ಪಾರ್ವತಿಯು ಚಾಮುಂಡೇಶ್ವರಿಯಾಗಿ ಅವತಾರವೆತ್ತಿ ಮೈಸೂರು ಸಮೀಪದ ಚಾಮುಂಡಿ ಬೆಟ್ಟದ ತುತ್ತ ತುದಿಯಲ್ಲಿ ಅಸುರನನ್ನು ಸಂಹರಿಸಿದಳು.

https://vijayatimes.com/araga-jnanendra-statement/

ಇದೇ ಕಾರಣದಿಂದಾಗಿ, ಈ ಬೆಟ್ಟಕ್ಕೆ ಚಾಮುಂಡಿ ಬೆಟ್ಟವೆಂದೂ, ನಗರಕ್ಕೆ ಮೈಸೂರು ಎಂದೂ ಹೆಸರು ಬಂದಿತು.

ರಕ್ಕಸನನ್ನು ಸಂಹರಿಸಿದ ಬಳಿಕ ಶ್ರೀದೇವಿಯು ಬೆಟ್ಟದ ತುದಿಯಲ್ಲಿ ನೆಲೆ ನಿಂತಳು. ಅಂದಿನಿಂದ ಇಂದಿನವರೆಗೂ ದೇವಿಯನ್ನು ಅಲ್ಲಿ ಭಕ್ತಿ ಭಾವಗಳಿಂದ ಪೂಜಿಸಿಕೊಂಡು ಬರಲಾಗುತ್ತಿದೆ.

ಹೀಗೆ, ತಾಯಿ ಚಾಮುಂಡೇಶ್ವರಿಯು ಮಹಿಷಾಸುರನನ್ನು ವಧಿಸಿದ ಸತ್ಕಾರ್ಯದ ಸ್ಮರಣಾರ್ಥವಾಗಿ, ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪ್ರತಿವರ್ಷ 10 ದಿನಗಳ ಪ್ರಖ್ಯಾತ ದಸರಾ ಉತ್ಸವವನ್ನು ಮೈಸೂರಿನಲ್ಲಿ ಆಚರಿಸಲಾಗುತ್ತದೆ

ಇನ್ನು, ವಿಜಯನಗರ ಅರಸರ ಕಾಲದಿಂದಲೂ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿ ಹಾಗೂ ದಸರಾ ಹಬ್ಬಕ್ಕೆ ಹೆಚ್ಚಿನ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀಕೃಷ್ಣದೇವರಾಯ.

ಆ ಕಾಲದಲ್ಲಿ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ದಸರಾ ಮಹೋತ್ಸವದ ಕೇಂದ್ರಗಳಾಗಿದ್ದವು.

https://www.youtube.com/watch?v=OfYo9EOEIJ4

ವಿಜಯನಗರ ಸಾಮ್ರಾಜ್ಯದ ಶಕ್ತಿ ಸಾಮರ್ಥ್ಯ, ಸಂಪತ್ತು, ವೈಭವ- ವೈಭೋಗ, ವೀರತ್ವ-ಧೀರತ್ವ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ, ಶ್ರೀಮಂತಿಕೆಯನ್ನು ತೋರ್ಪಡಿಸಿಕೊಳ್ಳುವ ಹಿನ್ನಲೆಯಲ್ಲಿ ಬಹು ಮುಖ್ಯವಾಗಿ ವಿಜಯದ ದ್ಯೋತಕವಾಗಿ ವಿಜಯದಶಮಿಯ ದಸರಾ ಮಹೋತ್ಸವವನ್ನು ವಿಜಯ ನಗರ ಅರಸರು ಆಚರಿಸುತ್ತಿದ್ದರು.

ವಿಜಯದಶಮಿ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯ ಪತನದ ನಂತರ ಮುಂದುವರಿಸಿಕೊಂಡು ಬಂದವರು ಯದು ವಂಶದ ಮೈಸೂರು ಒಡೆಯರು.

ಯದುವಂಶದ ಆಳ್ವಿಕೆಯ 9ನೇ ಅರಸರಾದ ರಾಜ ಒಡೆಯರು(1578-1617) ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದಂದು ದಸರಾ ಮಹೋತ್ಸವವನ್ನು ಆರಂಭಿಸಿದರು.

ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆಯ(1799-1868)ಕಾಲದಲ್ಲಿ ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗವಾಯಿತು.

ಅಲ್ಲಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ಅತೀವ ಕಾಳಜಿಯಿಂದ ಮತ್ತಷ್ಟು ವಿಜೃಂಭಣೆಯಿಂದ 1800ರಲ್ಲಿ ಮೈಸೂರಿನಲ್ಲಿ ದಸರಾ ಪ್ರಾರಂಭವಾಗಿ ‘’ಮೈಸೂರು ದಸರಾ’’ ಎಂದು ವಿಶ್ವವಿಖ್ಯಾತಿಯನ್ನು ಪಡೆಯಿತು.
Exit mobile version