ಮನೆ ಮದ್ದು: ನೆಗಡಿ, ಕೆಮ್ಮಿಗೆ ತಕ್ಷಣ ಪರಿಹಾರ ಒದಗಿಸುವ ಆಯುರ್ವೇದ ಚಹಾಗಳು!

ಚಳಿಗಾಲದಲ್ಲಿ ಅನಾರೋಗ್ಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಶೀತ, ನೆಗಡಿ ಅಥವಾ ಕೆಮ್ಮು (Home Remedy for colds coughs) ಬಂದರೆ ಬೇಗ ಗುಣಮುಖವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ

ಇವುಗಳಿಗೆ ಆಯುರ್ವೇದ ಚಹಾ ರಾಮಬಾಣವಾಗಿದ್ದ, ತುಳಸಿ, ಶುಂಠಿ, ದಾಲ್ಚಿನ್ನಿ, ಕಾಳು ಮೆಣಸುಗಳ (Home Remedy for colds coughs) ಉಪಯೋಗ ಪಡೆದುಕೊಳ್ಳಿ.


ಮತ್ತು ಅದು ಯಾವುದು ಎಂಬ ಮಾಹಿತಿ ಹೀಗಿದೆ..

ತುಳಸಿ ಚಹಾ:
ತುಳಸಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿದ್ದು, ಇದು ಒಂದು ಔಷಧಿಯ ಸಸ್ಯವಾಗಿದೆ. ತುಳಸಿ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ ಕುದಿಸಿ ಅದಕ್ಕೆ ಶುಂಠಿ,

ಚಕ್ಕೆ ಮತ್ತು ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಚಹಾ ತಯಾರಿಸಿ ಕುಡಿಯುತ್ತಿದ್ದರೆ ಉಸಿರಾಟಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ಬಗೆಹರಿದು ನೆಗಡಿ, ಕೆಮ್ಮು, ಜ್ವರ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುತ್ತದೆ.

ಶುಂಠಿ ಚಹಾ
ಶುಂಠಿಯು ನೈಸರ್ಗಿಕವಾದ ಗಿಡಮೂಲಿಕೆಯಾಗಿದ್ದು, ಅದರಲ್ಲಿ ನಮಗೆ ಬೇಕಾದ ಆಂಟಿ ಇನ್ಫ್ಲಮೇಟರಿ ಮತ್ತು ಆಂಟಿ ಮೈಕ್ರೋಬಿಯಲ್ ಗುಣಗಳು ಸಾಕಷ್ಟಿವೆ.ಹಾಗಾಗಿ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು

ಅದಕ್ಕೆ ಶುಂಠಿ ಚೂರುಗಳನ್ನು ಹಾಕಿ ಸ್ವಲ್ಪ ನಿಂಬೆಹಣ್ಣಿನ ರಸ ಮತ್ತು ಲವಂಗವನ್ನು ಸೇರಿಸಿ. ಅದನ್ನು ಸ್ವಲ್ಪ ಹೊತ್ತು ಚೆನ್ನಾಗಿ ಕುದಿಸಿ ಆನಂತರ ಆರಿಸಿ ಸೋಸಿಕೊಳ್ಳಬೇಕು. ನಂತರ ಇದಕ್ಕೆ ಸ್ವಲ್ಪ ಜೇನುತುಪ್ಪ

ಸೇರಿಸಿಕೊಳ್ಳುವುದರಿಂದ ಇದು ಸುಲಭವಾಗಿ ಮೂಗು ಕಟ್ಟುವಿಕೆ, ಗಂಟಲು ನೋವು, ಜ್ವರ, ನೆಗಡಿ, ಕೆಮ್ಮು ಇತ್ಯಾದಿಗಳನ್ನು ಹೋಗಲಾಡಿ ಸುತ್ತದೆ.​

ದಾಲ್ಚಿನ್ನಿ ಚಹಾ:
ಇದು ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮ ಪಡಿಸುವುದಲ್ಲದೆ ತನ್ನಲ್ಲಿ ಆಂಟಿ ಮೈಕ್ರೋಬಿಯಲ್ ಗುಣಗಳನ್ನು ಹೊಂದಿದೆ.


ನೀರಿನಲ್ಲಿ ದಾಲ್ಚಿನ್ನಿ ಚಕ್ಕೆಯನ್ನು ಪುಡಿ ಮಾಡಿ ಹಾಕಿ ಜೊತೆಗೆ ಕಾಳು ಮೆಣಸು ಸೇರಿಸಿ ಚೆನ್ನಾಗಿ ಕುದಿಸಿ ಅದು ಆರಿದ ನಂತರ ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಹಾಕಿ. ದಾಲ್ಚಿನ್ನಿ ಚಹಾ ಕುಡಿಯುವುದರಿಂದ

ಕೆಮ್ಮು, ಕಫ, ಉರಿಯೂತ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಕಾಳು ಮೆಣಸಿನ ಚಹಾ:
ಕಾಳುಮೆಣಸಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಹೇರಳವಾಗಿದ್ದು, ಉಸಿರಾಟ ವ್ಯವಸ್ಥೆಗೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತದೆ. ಹಾಗಾಗಿ ನೀರಿನಲ್ಲಿ ಕಾಳು ಮೆಣಸಿನ ಪುಡಿ

ಸೇರಿಸಿ ಜೊತೆಗೆ ಸ್ವಲ್ಪ ಶುಂಠಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು ಇದು ಆರಿದ ನಂತರ ಸ್ವಲ್ಪ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಕುಡಿಯುವುದರಿಂದ ಜ್ವರದ ಲಕ್ಷಣಗಳ ಸಹಿತ ಕೆಮ್ಮು,

ಕಫ, ನೆಗಡಿ ಸಮಸ್ಯೆ ದೂರವಾಗುತ್ತದೆ.​

ಮುನ್ನೆಚ್ಚರಿಕೆ:
ಒಂದು ವೇಳೆ ಈಗಾಗಲೇ ಬೇರೆ ಬೇರೆ ಆರೋಗ್ಯ ಸಮಸ್ಯೆಗಳು ಇದ್ದರೆ ಅಂತಹ ಚಹಾಗಳನ್ನು ಪ್ರತಿದಿನ ಕುಡಿಯುವ ಅಭ್ಯಾಸ ಮಾಡಿಕೊಳ್ಳುವ ಮೊದಲು ಆರೋಗ್ಯ ತಜ್ಞರನ್ನು ಸಂಪರ್ಕಿಸಿ ಮಾಹಿತಿ

ಪಡೆದುಕೊಳ್ಳುವುದು ಉತ್ತಮ.

ಇದನ್ನು ಓದಿ: ಅಮಿತ್‌ ಶಾರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ: ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೊಳಿಸುವಂತೆ ಸಿಎಂ ಆಗ್ರಹ

Exit mobile version