ಬೇಸಿಗೆಯಲ್ಲಿ ನಿಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಈ ಫೇಸ್ ಪ್ಯಾಕ್ ಗಳನ್ನು ಬಳಸಿ!

facepack

ಬೇಸಿಗೆಕಾಲ ಬರುತ್ತಿದ್ದಂತೆ ನಮ್ಮ ತ್ವಚೆಯ ಕಾಂತಿ ಕೂಡ ಕಡಿಮೆಯಾಗುತ್ತಾ ಬರುತ್ತದೆ. ಅದರಲ್ಲೂ ಡ್ರೈ ಸ್ಕಿನ್, ಸನ್ ಬರ್ನ್, ಸೋರಿಕೆಯಂತಹ ತೊಂದರೆಗಳು ಸರ್ವೇಸಾಮಾನ್ಯ. ಹೀಗಾಗಿ ಈ ಬೇಸಿಗೆಕಾಲದ ಸಮಯದಲ್ಲಿ ತ್ವಚೆಗೆ ಬೇಕಾದ ಬದಲಾವಣೆಯನ್ನು ಮಾಡುವುದು ಉತ್ತಮ. ಬೆಳಗಿನ ಸೂರ್ಯನ ಎಳೆ ಬಿಸಿಲು ನಿಮ್ಮ ತ್ವಚೆಯ ಮೇಲೆ ಬೀರಿದರೆ ನಮಗೆ ವಿಟಮಿನ್ ಡಿ ಅಂಶ ಹೆಚ್ಚಾಗಿ ಸಿಗುತ್ತದೆ ಇದರಿಂದ ನಮ್ಮ ತ್ವಚೆಗೆ ಹೆಚ್ಚು ಅನುಕೂಲ ಇದೆ. ಹಾಗೆಯೇ ಪ್ರತಿನಿತ್ಯ ಹತ್ತರಿಂದ ಹನ್ನೆರಡು ಗ್ಲಾಸ್ ನೀರು ಕುಡಿಯುವುದು ಉತ್ತಮ. ಏಕೆಂದರೆ ಬೇಸಿಗೆ ಕಾಲದಲ್ಲಿ ನಮ್ಮ ಚರ್ಮದ ಭಾಗದಿಂದ ಹೆಚ್ಚು ನೀರಿನ ಅಂಶಗಳು ಹೊರಬರುತ್ತದೆ. ಇದರಿಂದ ನಮ್ಮ ಚರ್ಮದ ಕಾಂತಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಈ ಬೇಸಿಗೆಕಾಲದಲ್ಲಿ ಏನೆಲ್ಲಾ ಮಾಡಿದರೆ ನಮ್ಮ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

  1. ಕಡಲೆಹಿಟ್ಟು ಬಾದಾಮಿ ಬೀಜದ ಫೇಸ್ ಪ್ಯಾಕ್ : ಸುಮಾರು ಐದರಿಂದ ಆರು ಬಾದಾಮಿ ಬೀಜಗಳನ್ನು ಪುಡಿಮಾಡಿಕೊಂಡು ಆನಂತರ ಅದಕ್ಕೆ 1 ಚಮಚ ಹಾಲು ಮತ್ತು ನಿಂಬೆ ಹಣ್ಣಿನ ರಸ ಹಾಗೂ ಕಡಲೆಹಿಟ್ಟನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಆನಂತರ ಅದನ್ನು ನಿಮ್ಮ ಮುಖದ ಮೇಲೆ ಅಪ್ಲೈ ಮಾಡಿ ಬಿಡುವುದರಿಂದ ಅತ್ಯಂತ ಪರಿಣಾಮಕಾರಿಯಾದ ಫಲಿತಾಂಶ ನಿಮ್ಮದಾಗುತ್ತದೆ.
  1. ಅಕ್ಕಿ ಹಿಟ್ಟು ಹಾಗೂ ಅಲೋವೆರ ಜೆಲ್ ಫೇಸ್ ಪ್ಯಾಕ್ : 2 ಟೇಬಲ್ ಸ್ಪೂನ್ ಅಕ್ಕಿಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಅಷ್ಟೇ ಪ್ರಮಾಣದ ಅಲೊವೆರ ಜಲ್ ಹಾಕುವುದರ ಜೊತೆಗೆ ಅರ್ಧ ಗ್ಲಾಸ್ ಆಗುವಷ್ಟು ಗ್ರೀನ್ ಟೀ ಸೇರಿಸಿ ಮಿಶ್ರಣ ಮಾಡಿ. ಇದನ್ನು ನಿಮ್ಮ ತ್ವಚೆಯ ಮೇಲೆ ಹಚ್ಚಿಕೊಳ್ಳಿ 15 ನಿಮಿಷದ ನಂತರ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡರೆ, ಮುಖದ ಮೇಲೆ ಇರುವ ಕಲೆ ಮೊಡವೆಗಳು ಮಾಯವಾಗುತ್ತದೆ.

3. ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್ :

ಈ ಕೊತ್ತಂಬರಿ ಸೊಪ್ಪನ್ನು ಕೇವಲ ಅಡುಗೆಗೆ ಮಾತ್ರವಲ್ಲ ನಮ್ಮ ತ್ವಚೆಯನ್ನು ಕಾಪಾಡುವುದರಲ್ಲಿ ಕೂಡ ಸಹಾಯ ಮಾಡುತ್ತದೆ. ಅದು ಹೇಗೆ ಎಂದರೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಒಂದು ಒಳ್ಳೆಯ ಪೇಸ್ಟನ್ನು ತಯಾರಿಸಿಕೊಳ್ಳಿ. ಈ ತಯಾರಿಸಿಕೊಂಡ ಪೇಸ್ಟನ್ನು ಹಣೆಯ ಭಾಗ, ಗಲ್ಲ, ಕೆನ್ನೆ ಎಲ್ಲಾ ಕಡೆ ಹಚ್ಚಿಕೊಂಡು ಇಡೀ ರಾತ್ರಿ ಹಾಗೆ ಬಿಡಿ. ಇದನ್ನು ವಾರಕ್ಕೆ ಎರಡು ದಿನ ಮಾಡುವುದರಿಂದ ಬ್ಲಾಕೆಡ್ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

4. ತುಳಸಿ ಜೇನುತುಪ್ಪ ಮತ್ತು ಬೇವಿನ ಪುಡಿಯ ಫೇಸ್ ಪ್ಯಾಕ್ :

ಒಂದು ಚಮಚೆ ತುಳಸಿ ಎಲೆಯನ್ನು ಪುಡಿಮಾಡಿಕೊಳ್ಳಿ ಅದೇ ರೀತಿ ಒಂದು ಚಮಚ ಬೇವಿನ ಎಲೆಯನ್ನು ಪುಡಿಮಾಡಿಕೊಂಡು ಮಿಶ್ರಣ ಮಾಡಿಕೊಳ್ಳಿ. ಆನಂತರ ಇದಕ್ಕೆ ಜೇನುತುಪ್ಪ ಹಾಕಿಕೊಂಡು ಒಂದು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ ಅದನ್ನು ಮುಖದ ಮೇಲೆ 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಡಿ ಆನಂತರ ನೀರಿನಿಂದ ತೊಳೆಯಿರಿ ಹೀಗೆ ಮಾಡುವುದರಿಂದ ನಿಮ್ಮ ಚರ್ಮದ ಎಲ್ಲಾ ಕಾಯಿಲೆಗಳು ದೂರವಾಗುತ್ತದೆ. ಈ ಎಲ್ಲಾ ಫೇಸ್ ಪ್ಯಾಕ್ ಬಳಕೆ ಮಾಡುವುದರಿಂದ ನಿಮ್ಮ ತ್ವಚೆಯನ್ನು ಈ ಬಿಸಿಲಿನಿಂದ ಸೂಕ್ಷ್ಮವಾಗಿ ಕಾಪಾಡಿಕೊಳ್ಳಬಹುದು.

Exit mobile version