ಕೊರೊನಾ ಹಾಗೂ ಒಮಿಕ್ರಾನ್ ಪದೇ ಪದೇ ಜನರ ಜೀವನದ ಜೊತೆ ಆಟವಾಡುತ್ತಿದ್ದು, ಕೊರೊನಾದಿಂದ ತಪ್ಪಿಸಿಕೊಳ್ಳಬೇಕಾದರೆ ಜ್ವರದಿಂದ ದೂರವಿರಬೇಕಾದರೆ ಈ ಮನೆ ಮದ್ದುಗಳನ್ನು ಸೇವಿಸಿ ಆರೋಗ್ಯವಾಗಿರಿ.
ಹರ್ಬಲ್ ಟೀ :

ಹರ್ಬಲ್ ಟೀ ಆರೋಗ್ಯಕರ ದೃಷ್ಟಿಯಿಂದ ತುಂಬಾ ಉಪಯೋಗಕಾರಿ ಹರ್ಬಲ್ ಟೀ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಜ್ವರ ಮತ್ತು ನೆಗಡಿಯಿಂದಲೂ ದೂರವಿರುವಂತೆ ಮಾಡುತ್ತದೆ. ಬೇರೆ ಚಹಾಗಿಂತ ಹರ್ಬಲ್ ಚಹಾವೇ ಉತ್ತಮ.
ತುಪ್ಪ ಅಥವಾ ಎಣ್ಣೆ :

ತೆಂಗಿನ ಎಣ್ಣೆ(Coconut oil), ಎಳ್ಳು ಎಣ್ಣೆ ಅಥವಾ ತುಪ್ಪದ (ghee) ಕೆಲವು ಹನಿಗಳನ್ನು ಮೂಗಿಗೆ ಹಾಕಲಾಗುತ್ತದೆ. ಹೀಗೆ ಮಾಡುವುದರಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುವ ಕರೋನಾ ವೈರಸ್ಗಳನ್ನು (Coronavirus) ತಡೆಯಬಹುದು. ಮೂಗಿಗೆ 2 ಹನಿ ತುಪ್ಪ ಅಥವಾ ಎಣ್ಣೆ ಹಾಕಿದ ನಂತರ ಕೆಲವು ನಿಮಿಷಗಳ ಕಾಲ ಮಲಗಬೇಕು ಹೀಗೆ ಮಾಡುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿಯು ವೃದ್ದಿಸುತ್ತದೆ.
ಚವನ್ ಪ್ರಶ್ :

ಬಿಸಿನೀರು ಅಥವಾ ಹಾಲಿನೊಂದಿಗೆ ಚವನ್ ಪ್ರಶ್ ಸೇವಿಸುವುದರಿಂದ ದೇಹದಲ್ಲಿನ ರೋಗಾಣುಗಳು ನಾಶವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ದೇಹವನ್ನು ಸದೃಢವಾಗಿಡಲು ಕೂಡ ಇದು ಸಹಕಾರಿಯಾಗಿದೆ.
ಅರಶಿನಯುಕ್ತ ಹಾಲು :

ಅರಶಿನದಲ್ಲಿರುವ ಔಷಧೀಯ ಗುಣಗಳು, ದೇಹವನ್ನು ಪ್ರವೇಶಿಸಿದ ವೈರಸ್ (Virus) ಅನ್ನು ಕೊಲ್ಲಲು ಸಹಾಯ ಮಾಡುತ್ತವೆ. ಪ್ರತಿ ರಾತ್ರಿ ಒಂದು ಲೋಟ ಹಾಲಿಗೆ ಮತ್ತು ಒಂದು ಚಮಚ ಅರಿಶಿನವನ್ನು ಬೆರೆಸಿ ಕುಡಿದರೆ, ರೋಗನಿರೋಧಕ ಶಕ್ತಿ (immunity power) ಬಲಗೊಳ್ಳುತ್ತದೆ.
ಯೋಗಾಸನ :

ಕೊರೊನಾದಂತ ವೈರಾಣುಗಳು ದೇಹವನ್ನು ಪ್ರವೇಶಿಸಿದೊಡನೆ ನೇರವಾಗಿ ಶ್ವಾಸಕೋಶಕ್ಕೆ ಲಗ್ಗೆ ಇಡುತ್ತದೆ. ಶ್ವಾಸಕೋಶವನ್ನು ಬಲಪಡಿಸಲು ನಿಯಮಿತವಾಗಿ ಯೋಗ ಪ್ರಾಣಯಾಮ ಮಾಡುವ ಅಭ್ಯಾಸಗಳನ್ನು ರೂಢಿಸಿಕೊಂಡರೆ ಕೊರೊನಾದಂತ ವೈರಸ್ಗಳನ್ನು ದೂರವಿಡಲು ಸಹಕಾರಿಯಾಗುತ್ತದೆ. ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಕೊರೊನಾದಂತಹ ಹಲವು ವೈರೆಸ್ಗಳಿಗೆ ಮುಕ್ತಿ ನೀಡಬಹುದಾಗಿದೆ.