ಕಿವಿಯ ಗುಗ್ಗೆ ಹಾಗೂ ತುರಿಕೆ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದು ಇಲ್ಲಿದೆ ನೋಡಿ

Health Tips : ಕಿವಿಯ ವ್ಯಾಕ್ಸ್(Homeremedies for Ear Pain) ಹಾಗೂ ಕಿವಿ ತುರಿಕೆ ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಹಲವು ಮದ್ದುಗಳು ಲಭ್ಯವಿದ್ದರೂ, ಮನೆಯಲ್ಲಿಯೇ ಮಾಡುವ ಈ ಮದ್ದು ಸುರಕ್ಷಿತವಾಗಿವೆ.

ಸಾಮಾನ್ಯವಾಗಿ, ಕಿವಿ ತುರಿಕೆಯನ್ನು ನಿವಾರಿಸಲು ಕೈ ಬೆರಳನ್ನು ಕಿವಿಗೆ ಹಾಕಿ ತೂರಿಸುತ್ತಾರೆ. ಕೆಲವರಂತೂ ತುರಿಕೆ ಕಡಿಮೆ ಮಾಡಲು ಕಡ್ಡಿಯನ್ನೂ ಹಾಕಲು ಹಿಂದು ಮುಂದು ನೋಡುವುದಿಲ್ಲ.

ಆದರೆ ಇದರಿಂದ ಹಲವಾರು ಸಮಸ್ಯೆಗಳು ಕಟ್ಟಿಟ್ಟ ಬುತ್ತಿ! ಇನ್ಫೆಕ್ಷನ್ ಆಗಬಹುದು. ಕಿವಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿಯೂ ಸೃಷ್ಟಿಯಾಗಬಹುದು.

ಯಾವುದೇ ವ್ಯಕ್ತಿಯಲ್ಲಾದರೂ ಅಲ್ಟ್ರಾ ಸೆನ್ಸಿಟಿವ್ ನ್ಯೂರೋಲಾಜಿಕಲ್ ಫೈಬರ್ಸ್ ಇರುವ ಕಾರಣ ತುರಿಕೆಯಾಗುತ್ತದೆ. ಇವು ಕಿವಿಯ ಹೊರ ಭಾಗದಲ್ಲಿ ಉಂಟಾಗುತ್ತದೆ, ಸೂಕ್ಷ್ಮತೆ ಹೆಚ್ಚಿದ್ದರೆ ತುರಿಕೆಯೂ ಕಾಡುತ್ತದೆ.

ಹಾಗಾಗಿ ಈ ಸಮಸ್ಯೆಗೆ ಇರುವ ಮನೆಮದ್ದುಗಳ(Homeremedies) ಬಗ್ಗೆ ತಿಳಿದುಕೊಳ್ಳೋಣ.

ಇದನ್ನೂ ಓದಿ : https://vijayatimes.com/bjp-questions-state-congress/

ಲೋಳೆಸರ : ಅಲೋವೆರಾದಲ್ಲಿ(Aloe Vera) ಆ್ಯಂಟಿ ಇನ್‌ಫ್ಲಾಮೇಟರಿ ಗುಣವಿದೆ, ಇವು ಕಿವಿ ತುರಿಕೆ ಮತ್ತು ಒಣಗುವಿಕೆಯನ್ನು ದೂರ ಮಾಡುತ್ತದೆ. ಅದಕ್ಕಾಗಿ ಕಿವಿಗೆ ಅಲೋವೆರಾ ಜೆಲ್‌ನ 3-4 ಹನಿ ಹಾಕಿ.

ಅದು ಆಳದವರೆಗೆ ಇಳಿದು ತುರಿಕೆ ಕಡಿಮೆ ಮಾಡುತ್ತದೆ.


ಬೆಳ್ಳುಳ್ಳಿ : ಬೆಳ್ಳುಳ್ಳಿ ಆ್ಯಂಟಿಬಯೋಟಿಕ್ ಮತ್ತು ನೋವು ನಿವಾರಕ ಅಂಶವನ್ನು ಹೊಂದಿದೆ. ಹಾಗಾಗಿ ಬಿಸಿ ಎಣ್ಣೆಯಲ್ಲಿ ಒಂದು ಬೆಳ್ಳುಳ್ಳಿ ಜಜ್ಜಿ ಹಾಕಿ, ನಂತರ ಬೆಳ್ಳುಳ್ಳಿಯನ್ನು ತೆಗೆದು, ಕಿವಿ ಹೊರಭಾಗಕ್ಕೆ ಹಚ್ಚಿಕೊಂಡರೆ ಪರಿಣಾಮಕಾರಿ.


ಎಣ್ಣೆ : ತೆಂಗಿನೆಣ್ಣೆ ಹಾಗೂ ಆಲೀವ್ ಆಯಿಲ್‌ನಂಥ ಎಣ್ಣೆಗಳು ತುರಿಕೆಯಂತಹ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಆದರೆ, ಕಿವಿಯೊಳಗೆ ಎಣ್ಣೆ ಬಿಟ್ಟುಕೊಳ್ಳುವುದನ್ನು ವೈದ್ಯರು ಸರಿಯಲ್ಲ ಎಂದು ಹೇಳುತ್ತಾರೆ.

ಕಿವಿಯ ಹೊರ ಭಾಗದಲ್ಲಿ ತುರಿಕೆ ಇದ್ದರೆ ಇದು ಒಳ್ಳೆ ಔಷಧಿ. ಆದರೆ ತಮಟೆ ಭಾಗಕ್ಕೆ ಎಣ್ಣೆ ತಾಗದಂತೆ ಜಾಗರೂಕರಾಗಿರಿ.


ಇನ್ನು, ಕಿವಿಯಲ್ಲಿ ಕಂಡು ಬರುವ ವ್ಯಾಕ್ಸ್ ಕಿವಿಯ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಇದು ಸಾಧಾರಣವಾಗಿ ಇರುವುದಕ್ಕಿಂತ ಹೆಚ್ಚಾಗಿದ್ದರೆ, ಈ ಪರಿಹಾರವನ್ನು ಮಾಡಿಕೊಳ್ಳಿ.

ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಕರಗಿಸಿ ಇದನ್ನು ತುಂಡು ಹತ್ತಿಯಲ್ಲಿ ಮುಳುಗಿಸಿ,

https://fb.watch/gFRT6QX_Gh/ ಸಿಎಂ ಬರುವಿಕೆಗಾಗಿ ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಮುಗಿಸುತ್ತಿರುವ ಜಿಲ್ಲಾಧಿಕಾರಿಗಳು

ತಲೆಯನ್ನು ಒಂದು ಕಡೆ ಬಾಗಿಸಿ ಕಿವಿಯನ್ನು ಮೇಲ್ಮುಖವಾಗಿ ಇಟ್ಟು ಹತ್ತಿಯ ಸಹಾಯದಿಂದ ಉಪ್ಪು ನೀರನ್ನು ಕಿವಿಯಲ್ಲಿ ಕೆಲವು ಹನಿಗಳು ಹಾಕಿಕೊಳ್ಳಬೇಕು.

ಐದು ನಿಮಿಷಗಳ ನಂತರ ನೀರು ಹಾಕಿದ ಕಿವಿಯನ್ನು ಬಾಗಿಸುವುದರಿಂದ ಕಿವಿಯಲ್ಲಿ ಇರುವ ಮಲಿನವು ತೊಲಗಿ ಹೋಗುತ್ತದೆ.

ಹೀಗೆ ಎರಡು ಕಿವಿಗಳನ್ನು ಕೂಡ ಚೆನ್ನಾಗಿ ಶುಭ್ರಗೊಳಿಸಿದ ನಂತರ ಉಪ್ಪು ಬೆರೆಸದ ಬರೀ ಉಗುರು ಬೆಚ್ಚಗಿರುವ ನೀರಿನಿಂದ ಶುಭ್ರ ಗೊಳಿಸಬೇಕು. ಹೀಗೆ ಮಾಡುವುದರಿಂದ ಕಿವಿಯಲ್ಲಿ ಮಲಿನ ತೊಲಗಿ ಹೋಗುತ್ತದೆ.

ಇದಕ್ಕೆ ಬೇಬಿ ಆಯಿಲ್ ನ ಬಳಕೆ ಕೂಡ ಮಾಡಬಹುದು,

ಆದರೆ ಬೇಬಿ ಆಯಿಲ್ ಬಳಕೆ ಮಾಡುವವರು ಯಾವುದೇ ರೀತಿಯ ಅಲರ್ಜಿ ಏನಾದ್ರೂ ಇದ್ದರೆ ನೀವು ಬೇಬಿ ಆಯಿಲ್ ಬಳಕೆ ಮಾಡದೇ ಇರುವುದೇ ಉತ್ತಮ. ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಮನೆ ಮದ್ದು ಮಾಡಿಕೊಳ್ಳಿ, ಆದರೆ ಇಂತಹ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರದೆ ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕ.

Exit mobile version