ಆಗಾಗ ಕಪ್ಪಾಗುವ ತ್ವಚೆಗೆ ನಿಮ್ಮ ಅಡುಗೆ ಮನೆಯಲ್ಲೇ ಇದೆ ಪರಿಹಾರ ; ತಪ್ಪದೇ ಈ ಮಾಹಿತಿ ಓದಿ

A beautiful young woman looking at her face in the mirror

ಸುಂದರವಾದ ತ್ವಚೆ(Skin Care) ಬೇಕೆಂದು ಯಾರಿಗೆ ತಾನೆ ಆಸೆ ಇರೋದಿಲ್ಲ ಹೇಳಿ. ಆದರೆ ಕಾಂತಿ ಪಡೆಯೋದು ಜಾಹೀರಾತುಗಳಲ್ಲಿ ತೋರಿಸಿದಷ್ಟು ಸುಲಭವೇನಲ್ಲ. ಹೌದು, ಸಾಮಾನ್ಯವಾಗಿ ಕೆಲವೊಬ್ಬರ ತ್ವಚೆ ಆಗಾಗ್ಗೆ ಕಪ್ಪಾಗುವುದನ್ನು ಕಾಣಬಹುದು.

ಇದಕ್ಕೆ ಸೂರ್ಯನ ಕಿರಣಗಳು, ನಿಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳು ಕಾರಣವಾಗಿರಬಹುದು. ನಿಮ್ಮ ತ್ವಚೆಯ ಕಪ್ಪು ಕಲೆಯನ್ನು ತೊಲಗಿಸಿ, ಹೊಳಪನ್ನು ಹೆಚ್ಚಿಸಲು ಇಲ್ಲಿ ಕೆಲವು ಮನೆ ಔಷದಗಳನ್ನು(Home Remedies) ನೀಡಲಾಗಿದೆ. ಇವುಗಳಿಂದ ನಿಮ್ಮ ಚರ್ಮಕ್ಕೆ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ.


ಸೌತೆಕಾಯಿ : ಟ್ಯಾನ್ ಮತ್ತು ಸೂರ್ಯನ ಸುಟ್ಟ ಕಲೆಗಳಿಗೆ ಸೌತೆಕಾಯಿ(Cucumber) ಬಹಳ ಪ್ರಯೋಜನಕಾರಿಯಾಗಿದೆ. ಸೌತೆಕಾಯಿ ತಂಪುಗೊಳಿಸುವ ಪರಿಣಾಮ ಹೊಂದಿದ್ದು, ಸೂರ್ಯನ ಸುಟ್ಟ ಕಲೆಗಳಿಗೆ ಮತ್ತು ಸನ್ ಟ್ಯಾನ್ಗೆ ಒಳ್ಳೆಯ ಔಷಧಿಯಾಗಿದೆ. ಸೌತೆಕಾಯಿಯನ್ನು ಕತ್ತರಿಸಿ, ಅದನ್ನು ಹಿಂಡಿ ಸೌತೆಕಾಯಿ ರಸವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ.

ಹತ್ತಿಯಿಂದ ಈ ರಸವನ್ನು ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ. ಅದು ಸ್ವಲ್ಪ ಸಮಯ ತ್ವಚೆಯಲ್ಲೇ ಒಣಗಿದ ನಂತರ ತೊಳೆದುಕೊಳ್ಳಿ. ಹೆಚ್ಚು ಲಾಭ ಪಡೆಯಲು ಇದಕ್ಕೆ ನೀವು ನಿಂಬೆ ರಸವನ್ನು ಕೂಡ ಸೇರಿಸಿಕೊಳ್ಳಬಹುದು.


ಆಲೂಗೆಡ್ಡೆ : ಆಲೂಗೆಡ್ಡೆ(Potato) ರಸವನ್ನು ಹೆಚ್ಚಾಗಿ ಕಣ್ಣಿನ ಸುತ್ತಲೂ ಇರುವಂತಹ ಕಪ್ಪು ವೃತ್ತಗಳನ್ನು ತೆಗೆಯಲು ಉಪಯೋಗಿಸಲಾಗುತ್ತದೆ. ಇದರ ಜೊತೆಗೆ ಆಲೂಗಡ್ಡೆ ರಸವು ಬಿಳುಪು ಕಾರಕವಾಗಿ ಕೂಡ ಕೆಲಸ ಮಾಡುತ್ತದೆ.
ಆಲೂಗಡ್ಡೆ ರಸವನ್ನು ತಯಾರಿಸಿಕೊಂಡು, ಅದನ್ನು ನೇರವಾಗಿ ತ್ವಚೆಗೆ ಹಚ್ಚಿರಿ.

ಇದು ಕಷ್ಟವಾದರೆ ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ತ್ವಚೆಯ ಮೇಲೆ ಸವರಿ, ತೇವಾಂಶ ಅನುಭವ ಆಗುವವರೆಗೆ ಸವರಬೇಕು. 10 ರಿಂದ 15 ನಿಮಿಷಗಳ ನಂತರ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ : https://vijayatimes.com/know-more-about-colgate-toothpaste/

ನಿಂಬೆರಸ : ನಿಂಬೆರಸ(Lemon Juice) ಕೂಡ ಬಿಳುಪು ಕಾರಕ ಪರಿಣಾಮವನ್ನು ಒಳಗೊಂಡಿದೆ. ಇದು ನಿಮ್ಮ ತ್ವಚೆಯ ಮೇಲಿನ ಕಪ್ಪು ಕಲೆಗಳನ್ನು ತೆಗೆದು, ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ನಿಂಬೆರಸಕ್ಕೆ ಸ್ವಲ್ಪ ಜೇನುತುಪ್ಪ ಹನಿಯನ್ನು ಸೇರಿಸಿ, ನಿಮ್ಮ ಚರ್ಮಕ್ಕೆ ಹಚ್ಚಿರಿ.

ಅದನ್ನು ತ್ವಚೆಯ ಮೇಲೆ ಹಾಗೆಯೇ 30 ನಿಮಿಷಗಳ ಕಾಲ ಬಿಡಬೇಕು. ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ. ನಿಂಬೆರಸಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ, ಮುಖಕ್ಕೆ ನಿಧಾನವಾಗಿ ಉಜ್ಜುವುದರಿಂದ ಮುಖದಲ್ಲಿರುವ ನಿರ್ಜಿವ ಚರ್ಮವನ್ನು ತೆಗೆಯಲು ಸಹಾಯವಾಗುತ್ತದೆ.

ಇದನ್ನೂ ನೋಡಿ : https://fb.watch/f36oh59I2t/


ಟೊಮೆಟೊ : ಟೊಮೆಟೊಗಳು(Tamoto) ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ, ಇವು ತ್ವಚೆಯ ಹೊಳಪನ್ನು ಹೆಚ್ಚಿಸುತ್ತವೆ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ಇದು ಚರ್ಮವನ್ನು ಮೃದುವಾಗಿಸುತ್ತದೆ. ಒಂದು ಟೊಮೆಟೊ ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆಯಿರಿ. 2 ಚಮಚ ಮೊಸರಿನೊಂದಿಗೆ ಟೊಮೆಟೊವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ತ್ವಚೆಯಲ್ಲಿ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿರಿ, ಮತ್ತು 20 ನಿಮಿಷಗಳ ಬಳಿಕ ತೊಳೆಯಿರಿ.

Exit mobile version