ದೇಹದ ತೂಕ ಹೆಚ್ಚಾಗಿದೆಯಾ? ತೂಕ ಇಳಿಸೋಕೆ ಉಪಾಯ ಸಿಗ್ತಿಲ್ವಾ? ಹಾಗಾದ್ರೆ ಇಲ್ಲಿದೆ ಸರಳ ಉಪಾಯ!

ಹೆಚ್ಚುತ್ತಿರುವ ತೂಕ ನಿಮ್ಮ ನಿದ್ದೆಗೆಡಿಸುತ್ತಿದೆಯಾ? ತೂಕ ಕಡಿಮೆ ನೀವು ಮಾಡಲಾಗದೆ ಒದ್ದಾಡ್ತಿದ್ದೀರಾ? ಹಾಗಾದ್ರೆ ಇವತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ, ಹೆಚ್ಚು ಕಷ್ಟ ಪಡದೆ ದೇಹದ ತೂಕ ಇಳಿಸುವುದರ ಬಗ್ಗೆ ಇಲ್ಲಿದೆ ಕೆಲ ಸರಳ ಉಪಾಯ ಅನುಸರಿಸಿ.

ಕಡ್ಡಾಯವಾಗಿ ಈ ಎರಡು ಸೂತ್ರ ಪಾಲಿಸಿ. ತೂಕ ಇಳಿಸಲು ನೀವು ಎರಡು ಸೂತ್ರಗಳನ್ನು ಅಳವಡಿಸಬೇಕು. ಒಂದು ಕೆಲವು ಅಭ್ಯಾಸಗಳನ್ನು ಸಂಪೂರ್ಣವಾಗಿ ಬಿಡಬೇಕು. ಮತ್ತೊಂದು ಕೆಲವು ಅಭ್ಯಾಸಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ನೀವು ತೂಕ ಕಡಿಮೆ ಮಾಡಲು ಕಡ್ಡಾಯವಾಗಿ ಬಿಡಬೇಕಾದ ಕೆಲ ಅಭ್ಯಾಸಗಳ ಬಗ್ಗೆ ತಿಳಿಯೋಣ.

ತಡವಾಗಿ ಮಲಗಿ ತಡವಾಗಿ ಏಳುವುದು : ಎದ್ದ ತಕ್ಷಣ ಮೊಬೈಲ್ ಫೋನ್ ಬಳಕೆ ಬೇಡ! ನಿದ್ದೆ ಮಾಡೋ ಮುನ್ನವೂ ಫೋನ್‌ ಬಳಸದಿರಿ. ಬೆಡ್‌ ಕಾಫಿ ಕುಡಿಯುವ ಅಭ್ಯಾಸ ಬಿಡುವುದು ಒಳಿತು. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚು ಸೇವಿಸದಿರಿ. ಹೊರಗಿನ ಜಂಕ್‌ಫುಡ್‌, ಫಾಸ್ಟ್‌ಫುಡ್‌ ಜಾಸ್ತಿ ತಿನ್ನುವ ಅಭ್ಯಾಸ ರೂಡಿಸಿಕೊಳ್ಳಬೇಡಿ. ಅನಗತ್ಯವಾಗಿ ವಾಹನಗಳ ಬಳಕೆ ಬೇಡ. ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯಲೇ ಬೇಡಿ. ಹಗಲು ನಿದ್ರೆ ಮಾಡುವುದರಿಂದ ದೇಹ ಊದಿಕೊಳ್ಳುತ್ತದೆ. ಹಗಲು ನಿದ್ದೆ ಸಂಪೂರ್ಣವಾಗಿ ತ್ಯಜಿಸಿ ಬಿಡಿ.

ಅಡ್ಡ ಪರಿಣಾಮಗಳಿಲ್ಲದೆ ದೇಹದ ತೂಕ ಇಳಿಸಲು ಹಾಗೂ ಉತ್ತಮ ಆರೋಗ್ಯ ಹೊಂದಲು ಇವಿಷ್ಟೂ ಅಭ್ಯಾಸಗಳನ್ನು ಮಾಡಿದರೆ ಸಾಲದು! ಇದಕ್ಕಾಗಿ ಕೆಲ ತ್ಯಾಗಗಳನ್ನು ಕೂಡ ಮಾಡಬೇಕಿದೆ. ಆಗ ನೀವು ಸರಳವಾಗಿ ತೂಕ ಇಳಿಸಿಕೊಳ್ಳಬಹುದು. ಆದರೆ ನಿಮಗೆ ಪಕ್ಕಾ ರಿಸಲ್ಟ್‌ ಸಿಗಬೇಕಾದ್ರೆ ಕೆಲವೊಂದು ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು. ಬೆಳಗಿನ ಉಪಾಹಾರವನ್ನು ತಪ್ಪದೇ ಸರಿಯಾದ ಸಮಯಕ್ಕೆ ಸೇವಿಸುವ ಅಭ್ಯಾಸ ರೂಡಿಸಿಕೊಳ್ಳಿ. ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ತೂಕ ಕಡಿಮೆಯಾಗುವುದಿಲ್ಲ ಬದಲಿಗೆ ನೀವು ರೋಗಗ್ರಸ್ಥರಾಗುತ್ತೀರಿ. ದೇಹದಲ್ಲಿ ನಿಶಕ್ತಿ ಹೆಚ್ಚಾಗಿ ಬಹಳ ಬೇಗ ಖಾಯಿಲೆಗಳಿಗೆ ತುತ್ತಾಗುತ್ತೀರಿ. ಜೊತೆ ಮೆದುಳಿಗೆ ಗ್ಲುಕೋಸ್ ಸರಬರಾಜಗುವುದಿಲ್ಲ ಬದಲು ನೆನಪಿನ ಶಕ್ತಿ ಕಡಿಮೆಯಾಗುತ್ತದೆ.

ನಿಯಮಿತವಾಗಿ ಊಟ ಸೇವಿಸಿ : ಪ್ರತಿದಿನವು ನಿಗದಿತ ಸಮಯದಲ್ಲಿ ಉಪಹಾರ ಮತ್ತು ಊಟ ಸೇವಿಸುವುದು ಬಹಳ ಮುಖ್ಯ. ಇದು ಕ್ಯಾಲೊರಿಗಳನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಕೊಬ್ಬು ಮತ್ತು ಸಕ್ಕರೆ ಅಂಶ ಇರುವಂತಹ ಜಂಕ್ ಮತ್ತು ಫಾಸ್ಟ್ ಫುಡ್ ಗಳ ಆಕರ್ಷಣೆಯಿಂದ ದೂರ ಉಳಿಯಲು ಉಪಾಯ.

ಹಣ್ಣು ಮತ್ತು ತರಕಾರಿಗಳ ಸೇವನೆ : ಹಣ್ಣು ಮತ್ತು ತರಕಾರಿಗಳಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನಾಂಶ ಕಡಿಮೆ ಇದ್ದು, ಇದು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಹಾಗಾಗಿ ಹೆಚ್ಚು ಹಣ್ಣು ತರಕಾರಿ ತಿನ್ನುವುದು ಒಳ್ಳೆಯದು.

ಹೆಚ್ಚು ಹೆಚ್ಚು ಕ್ರಿಯಾಶೀಲರಾಗಿ : ದೇಹವನ್ನು ಹೆಚ್ಚು ಸಕ್ರೀಯವಾಗಿರಿಸಿದಷ್ಟು ತೂಕ ಹೆಚ್ಚುವುದನ್ನು ತಡೆಯಬಹುದು ಹಾಗು ಇದು ತೂಕ ಇಳಿಕೆಗೂ ಸಹಾಯವಾಗುತ್ತದೆ. ನಡಿಗೆ,ಯೋಗ, ವ್ಯಾಯಾಮವು ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.

ಹೆಚ್ಚೆಚ್ಚು ನೀರು ಕುಡಿಯಿರಿ : ಆರೋಗ್ಯಕರ ಪಾನೀಯಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ತ್ವರಿತ ಪೌಡರ್ ಪಾನೀಯಗಳು ಮತ್ತು ಚಾಕೊಲೇಟ್ ಸೇರಿದಂತೆ ಅನೇಕ ತಂಪು ಪಾನೀಯಗಳಲ್ಲಿ ಹೆಚ್ಚಿನ ಸಕ್ಕರೆ ಇರುತ್ತದೆ. ಹೆಚ್ಚಿನ ಸಕ್ಕರೆ ಹೊಂದಿರುವ ಆಹಾರ ಮತ್ತು ಪಾನೀಯಗಳು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ. ಹೆಚ್ಚು ಶುದ್ಧ ನೀರು ಕುಡಿಯುವುದರಿಂದ ದೇಹದ ಆರೋಗ್ಯ ಕಾಯ್ದುಕೊಳ್ಳುವುದರ ಜೊತೆಗೆ ತೂಕದ ಇಳಿಕೆಗೂ ಸಹಾಯ ಮಾಡುತ್ತದೆ. ಮಹಿಳೆಯರು ದಿನಕ್ಕೆ 2.7 ಲೀಟರ್ ಮತ್ತು ಪುರುಷರು ದಿನಕ್ಕೆ 3.7 ಲೀಟರ್ ಮೇಲೆ ನೀರು ಕುಡಿಯಬೇಕು.

ನಾರಿನಂಶವಿರುವ ಆಹಾರವನ್ನು ಸೇವಿಸಿ : ಸಾಕಷ್ಟು ಫೈಬರ್ ಹೊಂದಿರುವ ಆಹಾರಗಳು ದೇಹದ ಇಳಿಕೆಗೆ ಬಹಳ ಸಹಾಯ ಮಾಡುತ್ತವೆ ಹಾಗು ಫೈಬರ್ ಹೊಂದಿರುವ ಆಹಾರದ ಸೇವನೆಯಿಂದ ಬೇಗ ಹಸಿವಾಗುವುದಿಲ್ಲ. ಬೀನ್ಸ್, ಬಟಾಣಿ, ಆಲುಗಡ್ಡೆ, ಡ್ರೈ ಫ್ರೂಟ್ಸ್, ಹಣ್ಣುಗಳು ಇನ್ನು ಹಲವು ಆಹಾರ ಪದಾರ್ಥಗಳಲ್ಲಿ ಸಾಕಷ್ಟು ಫೈಬರ್ ಕಂಡುಬರುತ್ತದೆ.

ಪ್ರತಿನಿತ್ಯ ಯೋಗಾಭ್ಯಾಸ ಮಾಡಿ : ಯೋಗವು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡುತ್ತದೆ. ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ ಬಹಳ ಆಕರ್ಷಣೀಯ ಹಾಗು ಸಧೃಡ ದೇಹ ಹೊಂದುವುದರ ಜೊತೆಗೆ ದೇಹದ ಆರೋಗ್ಯ ಕಾಯ್ದುಕೊಳ್ಳಬಹುದು.

Exit mobile version