• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ಯಾಕೆ `ಹೊನ್ನೆಮರಡು’ ಪ್ರವಾಸಿಗರ ನೆಚ್ಚಿನ ತಾಣವಾಗಿದೆ ; ಈ ಸ್ಥಳ ಎಲ್ಲಿದೆ ಗೊತ್ತಾ?

Mohan Shetty by Mohan Shetty
in ಲೈಫ್ ಸ್ಟೈಲ್
honnemaradu
0
SHARES
0
VIEWS
Share on FacebookShare on Twitter

ಹೊನ್ನೆಮರಡು(Honnemaradu) ತಾಣಕ್ಕೆ(Place) ದೇಶವಿದೇಶಗಳಿಂದ ಕೂಡಾ ಅನೇಕ ಪ್ರವಾಸಿಗರು(Tourists) ಬರುತ್ತಾರೆ. ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿದೆ ಈ ಸುಂದರ ಪ್ರಕೃತಿ(Nature) ತಾಣ.

ನಮ್ಮ ಭಾರತವು(India) ಅನೇಕ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ(Karnataka) ಅನೇಕ ಬೆಟ್ಟ ,ಗುಡ್ಡ, ಜಲಪಾತಗಳಿವೆ ಇವನ್ನೆಲ್ಲ ವೀಕ್ಷಿಸಲು ಪ್ರವಾಸಿಗರು ಬೇರೆ ಬೇರೆ ಪ್ರದೇಶಗಳಿಂದ ಬರುತ್ತಾರೆ. ಹೊನ್ನೆಮರಡು ನಿಸರ್ಗದ ಸುಂದರ ನೋಟದ ಬಗ್ಗೆ ತಿಳಿಯೋಣ.

travel blog

ಬಹಳ ದೂರದಿಂದ ನೋಡಿದಾಗ ಇಲ್ಲಿರುವ ವಿಶಾಲವಾದ ಜಲಾಶಯ ಮತ್ತು ಇಲ್ಲಿರುವ ಹಳ್ಳಿಮನೆಗಳು ತುಂಬಾನೇ ಸುಂದರವಾಗಿ ಕಾಣುತ್ತದೆ. ಹೊನ್ನೆಮರಡು ನೋಡಿದರೆ ಜನರು ಮರಳಾಗುವು ದಂತೂ ಸತ್ಯ. ಇಲ್ಲಿನ ಜಲಾಶಯದ ನೀರು ತುಂಬಾನೇ ಶುಭ್ರವಾಗಿರುತ್ತದೆ. ಸುತ್ತಲೂ ನಿಸರ್ಗದ ಅದ್ಭುತ ನೋಟ ಎಲ್ಲರ ಮೈ ಮನ ಸೆಳೆಯುವಂತೆ ಮಾಡುತ್ತದೆ. ಈ ಸ್ಥಳವು ಅನೇಕ ಸಾಹಸಿಗರನ್ನು ಮತ್ತು ಐತಿಹಾಸಿಕ ಪ್ರಿಯರನ್ನು, ಪ್ರಕೃತಿ ಪ್ರೇಮಿಯನ್ನು ಚಾರಣಿಗರನ್ನು ತನ್ನತ್ತ ಸೆಳೆಯುವುದು ವಿಶೇಷ.

ಅಷ್ಟಕ್ಕೂ ಈ ಸುಂದರ ತಾಣ ಇರುವುದಾದರೂ ಎಲ್ಲಿ? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ನೆಲೆಸಿದೆ ಹೊನ್ನೆಮರಡು. ಶರಾವತಿ ನದಿಯ ಮೂಲದಿಂದ ಈ ಜಲಪಾತವು ಉಗಮವಾಗಿದೆಯೆಂದು ಐತಿಹಾಸಿಕರು ತಿಳಿಸುತ್ತಾರೆ. ಇಲ್ಲಿ ಭೋರ್ಗರೆಯುವ ಜಲಪಾತವು ಕೂಡ ತನ್ನದೇ ಆದ ಪ್ರಖ್ಯಾತಿಯನ್ನು ಪಡೆದಿದೆ. ಅದನ್ನು ಕೂಡ ಹೊನ್ನಮರಡು ಎಂದೇ ಕರೆಯುತ್ತಾರೆ. ಈ ತಾಣವು ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ ಕೂಡ ಬೆಳಗಿನ ಜಾವ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಈ ದೃಶ್ಯವನ್ನು ನೋಡಲು ಕಣ್ಣು ತಂಪೆನಿಸುತ್ತದೆ.

honnemaradu

ಅದರಲ್ಲೂ ಮುಂಜಾವಿನ ಸಮಯದಲ್ಲಿ ಈ ಹಳ್ಳಿ ಅಥವಾ ಜಲಪಾತದ ಬಳಿ ಬಂದರೆ ಈ ವಾತಾವರಣವು ತುಂಬಾನೇ ಹಿತವಾಗಿರುತ್ತದೆ. ಅಷ್ಟೇ ಅಲ್ಲದೆ ಈ ತಾಣಕ್ಕೆ ಕ್ಯಾಂಪಿಂಗ್ ಬರುವವರಿಗೆ ಕೂಡ ಉತ್ತಮವಾದ ತಾಣವಾಗಿದೆ. ಇಲ್ಲಿ ರಾತ್ರಿ ಕೂಡ ಕ್ಯಾಂಪೇನ್ ಮಾಡಬಹುದು. ಇಲ್ಲಿ ಕ್ಯಾಂಪೇನ್ ಗೆ ಬರುವವರಿಗೆ ಫ್ರೀ ಪ್ಯಾಕೇಜ್ ಕೂಡ ಲಭ್ಯವಿದೆ ಹಾಗೂ ಜಲಾಶಯಗಳಲ್ಲಿ ತೆಪ್ಪದಲ್ಲಿ ಪ್ರಯಾಣ ಮಾಡಬಹುದು ಮತ್ತು ಈ ಜಲಾಶಯದಲ್ಲಿ ಈಜಾಡಲು ಅವಕಾಶ ಕಲ್ಪಿಸಲ‍ಾಗಿದೆ.

ಇಷ್ಟೇ ಅಲ್ಲ ಇಲ್ಲಿನ ನಿಸರ್ಗದ ಸೌಂದರ್ಯವನ್ನು ಸವಿಯಲು ಅದೆಷ್ಟು ದಿನ ಕಳೆದರೂ ಕೂಡ ಕಡಿಮೆಯೇ ಎಂದೆನಿಸುತ್ತದೆ. ಹೊನ್ನೆಮರಡು ನೋಡಲು ಬಲು ಆಕರ್ಷಣೀಯ ಮತ್ತು ಸುಂದರವಾಗುತ್ತದೆ. ಇಲ್ಲಿ ಭೋರ್ಗರೆಯುವ ಜಲಪಾತವು ಕೂಡ ಇರುತ್ತದೆ. ಇದನ್ನು ನೋಡಲು ಎರಡು ಕಣ್ಣು ಸಾಲದು ಎಂದೇ ಹೇಳಬಹುದು. ಈ ಹೊನ್ನೇಮರಡಲ್ಲಿ ಒಂದು ದ್ವೀಪವಿದೆ. ಇದು ಜಲಶಾಯದ ಮಧ್ಯ ಭಾಗದಲ್ಲಿದೆ. ಇಲ್ಲಿ ಸಿಹಿನೀರಿನ ಈಜುಕೊಳವಿದೆ. ಇದರ ಸುತ್ತಲು ಕೂಡ ಅರಣ್ಯ ಪ್ರದೇಶಗಳಿದ್ದು, ನೋಡಲು ಬಹು ಆಕರ್ಷಣೀಯ ಮತ್ತು ಸುಂದರವಾಗಿದೆ.

Tourism place


ಅದರಲ್ಲೂ ಕೂಡ ಸಾಹಸಪ್ರಿಯರು, ಕ್ರೀಡೆ ಪ್ರಿಯರಿಗೆ ಈ ಸ್ಥಳವಂತೂ ಹೇಳಿ ಮಾಡಿಸಿದ್ದಂತಿದೆ. ಹೊನ್ನೆಮರಡು ಹಳ್ಳಿಯು ಹೌದು, ಹಾಗೂ ಅದೇ ರೀತಿ ಹಾಗೂ ಹೊನ್ನೆಮರಡು ಜಲಾಶಯವು ಕೂಡ ಹೌದು. ಇಲ್ಲಿಯ ಜನರು ಹೇಳುವ ಪ್ರಕಾರ ಇಲ್ಲಿ ಹೊನ್ನೆ ಮರಗಳು ಅತಿ ಇರುವುದರಿಂದ ಇಲ್ಲಿಗೆ ಹೊನ್ನೆಮರಡು ಎಂಬ ಹೆಸರು ಸಿಕ್ಕಿದೆ ಎಂದು ಕೂಡ ಹೇಳುತ್ತಾರೆ. ಈ ಪ್ರದೇಶದಲ್ಲಿ ಪ್ರಾಕೃತಿಕ ಸಂಪತ್ತು ಕೂಡ ಹೇರಳವಾಗಿದೆ. ಈ ಹೊನ್ನೆಮರಡು ದಟ್ಟವಾದ ಗಿಡಮರಗಳಿಂದ ಕೂಡಿದೆ.


ಇಲ್ಲಿ 30 ಕಿಲೋ ಮೀಟರ್ ದೂರದಲ್ಲಿ ತುಂಬಾ ಪ್ರಸಿದ್ಧವಾದ ಜಲಪಾತವಿದೆ. ಇದು ಕೂಡ ನೋಡಲು ತುಂಬಾ ನಯನ ಮನೋಹರವಾಗಿದೆ. ಈ ಹೊನ್ನೆಮರಡು ಜಲಾಶಯ ತಟದಲ್ಲಿ ಪಕ್ಷಿಗಳನ್ನು ವೀಕ್ಷಣೆ ಮಾಡಬಹುದು. ಇಲ್ಲಿ ಕೆಲವು ಬೋಟಿಂಗ್ ಮತ್ತು ಕಯಾಕಿಂಗ್ ಅನ್ನು ಒಳಗೊಂಡಿದ್ದು, ಇದಕ್ಕೆ ನುರಿತ ತಜ್ಞರಿಂದ ಅನುಮತಿ ಪಡೆದಿರಬೇಕು ಇದು ಒಂದು ಸಣ್ಣ ಹಳ್ಳಿಯಾಗಿದ್ದು, ಇಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ, ರೈಲು ನಿಲ್ದಾಣವಿಲ್ಲ. ಶಿವಮೊಗ್ಗದಿಂದ ಈ ಸ್ಥಳಕ್ಕೆ ಸೀಮಿತವಾದ ಬಸ್ಸುಗಳ ವ್ಯವಸ್ಥೆ ಮಾತ್ರವಿದೆ ಅಷ್ಟೆ!

HONNEMARADU
ಹೊನ್ನೆಮರಡು ಗುಡ್ಡಗಳ ಮೇಲೆ ಇರುವಂತಹ ಒಂದು ಸಣ್ಣ ಹಳ್ಳಿಯಾಗಿದೆ. ಇಲ್ಲಿ ವಿವಿಧ ಪಕ್ಷಿಗಳ ಚಿತ್ರಗಳನ್ನು ವೀಕ್ಷಣೆ ಮಾಡುತ್ತಾ ಆ ಜಲಾಶಯದ ದಡದಲ್ಲಿ ಉತ್ತಮವಾದ ಕಾಲವನ್ನು ಕಳೆಯಬಹುದು. ಈ ಹೊನ್ನೆಮರಡು ನಲ್ಲಿರುವ ಗುಡ್ಡ ಬೆಟ್ಟಗಳೆಲ್ಲವೂ ಕೂಡ ಹಚ್ಚಹಸಿರನ್ನು ಹೊದ್ದು ಮಲಗಿರುವಂತೆ ಕಾಣುತ್ತದೆ.
ಈ ಹೊನ್ನೆಮರಡಿನ ಸೌಂದರ್ಯವನ್ನು ಎಷ್ಟು ಹೊಗಳಿದರೂ ಕಡಿಮೆಯೇ ಇಲ್ಲ ಬಿಡಿ. ಒಟ್ಟಾರೆಯಾಗಿ ಹೇಳುವುದಾದರೆ ಹೊನ್ನೆಮರಡು ಒಂದು ಗ್ರಾಮ ಎನ್ನುವುದಕ್ಕಿಂತ ಇದು ಒಂದು ದ್ವೀಪವಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದವರೇ ಅದೃಷ್ಟವಂತರು ಎನ್ನಬಹುದು.
  • Sowjanya
Tags: bloghonnemaradutourismtravelvijayatimes

Related News

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?
ಲೈಫ್ ಸ್ಟೈಲ್

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?

January 20, 2023
60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು
ಮನರಂಜನೆ

60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು

December 10, 2022
ಕಾಂತಾರ ನೋಡಿಲ್ಲ ಎಂದು ಟ್ರೋಲ್ ಮಾಡಿದವರಿಗೆ ನಾನು ನೋಡಿದ್ದೇನೆ ಎಂದ ನಟಿ ರಶ್ಮಿಕಾ ಮಂದಣ್ಣ!
Vijaya Time

ಕಾಂತಾರ ನೋಡಿಲ್ಲ ಎಂದು ಟ್ರೋಲ್ ಮಾಡಿದವರಿಗೆ ನಾನು ನೋಡಿದ್ದೇನೆ ಎಂದ ನಟಿ ರಶ್ಮಿಕಾ ಮಂದಣ್ಣ!

December 10, 2022
2022 ರಲ್ಲಿ ಗೂಗಲ್‌ನಲ್ಲಿ  ಅತಿಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿ ಬಿಡುಗಡೆ ; ಕಾಂತಾರ-ಕೆಜಿಎಫ್‌ಗೆ ಎಷ್ಟನೇ ಸ್ಥಾನ?
ಮನರಂಜನೆ

2022 ರಲ್ಲಿ ಗೂಗಲ್‌ನಲ್ಲಿ  ಅತಿಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿ ಬಿಡುಗಡೆ ; ಕಾಂತಾರ-ಕೆಜಿಎಫ್‌ಗೆ ಎಷ್ಟನೇ ಸ್ಥಾನ?

December 8, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.