ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಿದ್ದೇನೆ : ಪ್ರತಾಪ್ ಸಿಂಹ

Tippu Express

Mysuru : ಸಾಕಷ್ಟು ವಿವಾದಕ್ಕೆ (Controversy) ಒಳಗಾಗಿರುವ ಟಿಪ್ಪು ಎಕ್ಸ್ಪ್ರೆಸ್ (I Renamed Tippu Express Says Prathap Simha) ರೈಲಿನ ಹೆಸರು ಬದಲಾವಣೆ ಬಗ್ಗೆ ವಿರೋಧ ಪಕ್ಷದ ನಾಯಕರು ಸಾಕಷ್ಟು ವಿರೋದ ವ್ಯಕ್ತಪಡಿಸಿದ್ದಾರೆ.

ಇದರ ಬಗ್ಗೆ ಪ್ರತಿಕಿಯಿಸಿರುವ ಸಂಸದ ಪ್ರತಾಪ್ ಸಿಂಹ(I Renamed Tippu Express Says Prathap Simha) ಖಡಕ್ ಉತ್ತರ ಕೊಟ್ಟಿದ್ದು, “ಮೈಸೂರು ಮಹಾರಾಜರು (ಮೈಸೂರು ಒಡೆಯರ್ ರಾಜವಂಶ) ಮೈಸೂರಿಗೆ ಕೊಟ್ಟಿರುವ ನೂರಾರು ಕೊಡುಗೆಗಳನ್ನು ನಾನು ಹೇಳುತ್ತೇನೆ.

ಟಿಪ್ಪು ಸುಲ್ತಾನ್ ಕೊಟ್ಟಿರುವ 3 ಕೊಡುಗೆಗಳನ್ನಾದರೂ ಅವರು ಹೇಳಲಿ ಸಾಕು” ಎಂದು ಸವಾಲು ಹಾಕಿದ್ದಾರೆ.


ಟಿಪ್ಪು ಮೈಸೂರಿನವನಾ??? ಅವನು ಶ್ರೀರಂಗಪಟ್ಟಣದವನು. ಮೈಸೂರಿನ ಮಹಾರಾಜರು(Mysuru Wadiyar) ಮೈಸೂರಿನ(Mysuru) ಹಲವಾರು ಅಭಿವೃದ್ದಿ ಕಾರ್ಯಗಳಲ್ಲಿ ಕೊಡುಗೆ ನೀಡಿದ್ದಾರೆ.

ಟಿಪ್ಪು ಏನು ಕೊಡುಗೆ ಕೊಟ್ಟಿದ್ದಾನೆ??? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : https://vijayatimes.com/unknown-facts-of-india/


ಇದುವರೆಗೂ ಯಾವ ರೈಲಿನ ಹೆಸರನ್ನೂ ಬದಲಾಯಿಸಿಲ್ಲ, ಆದರೆ ನಾನು ಉದ್ದೇಶ ಪೂರ್ವಕವಾಗಿಯೇ ತುಂಬಾ ಕಷ್ಟಪಟ್ಟು ಬದಲಾಯಿಸಿದ್ದೇನೆ.

ನಾನು ಇದುವರೆಗೂ ಮೈಸೂರಿಗೆ 10 ಟ್ರೈನ್ ತಂದಿದ್ದೇನೆ, ಈ ದೇಶದಲ್ಲಿ ಯಾವುದೇ ಸಂಸದ 10 ವರ್ಷಗಳಲ್ಲಿ ಮಾಡದ ಸಾಧನೆ ನಾನು ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.


ಸಿದ್ದರಾಮಯ್ಯನವರು(Siddaramaiah) ಓದಿದ ವಿಶ್ವವಿದ್ಯಾಲಯವು ಕೂಡ ಮೈಸೂರಿನ ಮಹಾರಾಜರು ಕಟ್ಟಿಸಿರುವುದು ಎಂಬುವುದನ್ನು ಕೂಡ ಮರೆತು ಉಡಾಫೆಯಾಗಿ ಮಾತನಾಡುತ್ತಾರೆ.

ಟಿಪ್ಪು(Tippu) ಒಬ್ಬ ಕನ್ನಡ ವಿರೋಧಿಯಾಗಿದ್ದ, ಟಿಪ್ಪು ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಹೇರಿದ್ದ, ದಿವಾನ್ ಎಂಬ ಪದ ಪರ್ಷಿಯನ್ ಭಾಷೆ.

https://youtu.be/B17BlX9yaF8 ಮೈದಾ ಅನ್ನೋ ಸ್ಲೋ ಪಾಯಿಸನ್‌!

ಕಂದಾಯ ಇಲಾಖೆಯಲ್ಲಿ ಇರುವ ಒಂದೊಂದು ಪದಗಳೂ ಕೂಡ ಪರ್ಷಿಯನ್ ಭಾಷೆಯದ್ದಾಗಿದೆ. ಟಿಪ್ಪು ಒಬ್ಬ ಕನ್ನಡ ವಿರೋಧಿಯಾಗಿದ್ದ.

ಕರ್ನಾಟಕ ಸರ್ಕಾರವೂ ಕೂಡ ಟಿಪ್ಪು ಜಯಂತಿಯನ್ನು (Tippu jayanthi) ನಿಲ್ಲಿಸಿದೆ. ಹಾಗೆಯೇ ಈವಾಗ ರೈಲಿನ ಹೆಸರನ್ನೂ ಕೂಡ ಬದಲಾಯಿಸಿದ್ದೇವೆ. ಇದಕ್ಕೆ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
Exit mobile version