ಐಸಿಸಿ (ICC) ವಿಶ್ವಕಪ್ ಪಂದ್ಯಾವಳಿ ಈ ಬಾರಿ ಮುಂಬೈನಲ್ಲಿ ನಡೆದಿದ್ದು, ಬಾಂಗ್ಲಾದೇಶ (ICC world cup -south Africa) ದಕ್ಷಿಣ ಆಫ್ರಿಕಾ ತಂಡದ ಪೈಪೋಟಿಯಲ್ಲಿ ಬಾಂಗ್ಲಾದೇಶ
ಹೀನಾಯ ಸೋಲು ಕಂಡಿದೆ.ಸುಮಾರು 149 ರನ್ ಗಳ ಅಂತರದಲ್ಲಿ ಸೋತಿರುವ ಬಾಂಗ್ಲಾದೇಶ ಇಗ ಬಾಂಗ್ಲಾ ದೇಶದ ದಂಡ ಐಸಿಸಿ ವಿಶ್ವಕಪ್ ನ ಅಂಕಪಟ್ಟಿಯಲ್ಲಿ ಕೊನೆಯ ಜಾಗವನ್ನು ಪಡೆದು
ಕೊಂಡಿದೆ.ಭರ್ಜರಿ ಗೆಲುವು ಸಾಧಿಸಿದ ಆಫ್ರಿಕಾ ತಂಡ ಅಂಕಪಟ್ಟಿಯಲ್ಲಿ (ICC world cup -south Africa) ಎರಡನೇ ಜಾಗ ಪಡೆದಿದೆ.
ದಕ್ಷಿಣ ಆಫ್ರಿಕಾ (Africa) ತಂಡ ಮೊದಲು ಟಾಸ್ಕ್ ಗೆದ್ದು ಬ್ಯಾಟಿಂಗ್ (Batting) ಮಾಡಿತ್ತು.ದಕ್ಷಿಣ ಆಫ್ರಿಕಾ ತಂಡದ ಆಟಗಾರ ಕ್ಚಿಂಟನ್ ಡಿಕಾಕ್ 174 ರನ್,ಐಡೆನ್ ಮಾರ್ಕಾಮ್ 60 ರನ್,ಹೆನ್ರಿಚ್ ಕ್ಲಾಸೆನ್
90 ರನ್, ಇವರ ಆಟದಿಂದ ಆಫ್ರಿಕಾ ತಂಡ 380 ರನ್ ಗಳನ್ನು ಪಡೆದಿತ್ತು. ಆದ್ರೆ ಬಾಂಗ್ಲಾ ತಂಡ 46.4 ಓವರ್ ಗಳಲ್ಲಿ 233 ರನ್ ಗಳಸಿ ಇಡೀ ತಂಡ ಆಲ್ಔಟ್ ಆಗಿ ಹೀನಾಯ ಸೋಲು ಕಂಡಿತು.
ಕಡಿಮೆ ರನ್ ಗಳನ್ನು ಗಳಿಸಿದ ಬಾಂಗ್ಲಾದೇಶದ ಬ್ಯಾಟಿಂಗ್ ಆಟಗಾರರು ದಕ್ಷಿಣ ಆಫ್ರಿಕಾ ತಂಡದ ಬೋಲಿಂಗ್ ಗೆ ಕಂಗಾಲುಲಾಗಿದ್ದಾರೆ.ಬರಿ 15 ಓವರ್ ಗಳಲ್ಲಿ ಬಾಂಗ್ಲಾದೇಶ 5 ವಿಕೆಟ್ ಗಳನ್ನು ಒಪ್ಪಿಸಿತು.
ಪ್ರಾರಂಭದ ಆಟಗಾರರಾದ ತಂಝೀನ್ ಹಸನ್,ಲಿಟ್ಟನ್ ದಾಸ್ 30 ರನ್ ಗಳಿಗೆ ಅಷ್ಟೇ ಸೀಮಿತವಾದರು.ಹಸನ್ ಕೇವಲ 12 ರನ್ ಗಳಿಸಿ ವಿಕೆಟ್ (Wicket) ಆದ್ರೂ ನಜ್ಮಲ್ ಹೊಸೈನ್ ಶಾಂಟೊ 0 ರನ್,
ಶಕೀಬ್ ಅಲ್ ಹಸನ್ 1 ರನ್, ಮುಶ್ಪಿಕರ್ 8 ರನ್ ಗಳಿಸಿದರು,ಪ್ರಾರಂಭದಲ್ಲಿ ಲಿಟ್ಟನ್ ದಾಸ್ 22 ರನ್ ಒಡೆಯುವಷ್ಟರಲ್ಲಿ ಸಾಕಾಗಿ ಹೋಗಿದ್ದರು.
ಸ್ಕ್ರೀಜ್ ನಲ್ಲಿ (Screeze) ಗಟ್ಟಿಯಾಗಿ ನಿಂತು ಮಹಮ್ಮದುಲ್ಲಾ ಅವರು ಅದ್ಬುತ ಆಟವಾಡಿದರು,ಎದುರಾಳಿ ತಂಡ ಒಡೆದಿದ್ದ ರನ್ ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.ಮಹಮ್ಮದುಲ್ಲಾ ಅವರು 111 ರನ್ ಗಳನ್ನು
ಗಳಿಸಿ ಔಟ್ (Out) ಆದರು. ಹಸನ್ ಮಹಮ್ಮದ್ 15 ರನ್ ಹಸನ್ ಮಿರಾಜ್ 11 ರನ್,ನಸುಮ್ ಅಹ್ಮದ್ 19 ರನ್,ಇವರೆಲ್ಲರೂ ಮಹಮ್ಮದುಲ್ಲಾ ಅವರಿಗೆ ಜೊತೆಯಾಗಿ ಹೊರಗೆ ಹೋದರು.
ಇದನ್ನು ಓದಿ: ಅಮೆರಿಕದಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ 22 ಮಂದಿ ಬಲಿ: ಬಂದೂಕುಧಾರಿಗಾಗಿ ಮುಂದುವರೆದ ಹುಡುಕಾಟ
- ನಾಗರಾಜ್ (ಕೆ.ಕಲ್ಲಹಳ್ಳಿ).