ಇಂಟರ್​ನ್ಯಾಷನಲ್​ ಕ್ರಿಕೆಟ್ ಕೌನ್ಸಿಲ್ 2023ರ ಟಿ20 ತಂಡ ಪ್ರಕಟ: ನಾಲ್ವರು ಭಾರತೀಯರಿಗೆ ಸ್ಥಾನ

2023ರ ಸಾಲಿನ ಟಿ20 ತಂಡವನ್ನು ಇಂಟರ್​ನ್ಯಾಷನಲ್​ ಕ್ರಿಕೆಟ್ (ICCT20 Cricket team 2023) ಕೌನ್ಸಿಲ್ ಪ್ರಕಟಿಸಿದ್ದು, ಈ ತಂಡದಲ್ಲಿ ನಾಲ್ವರು ಭಾರತೀಯ (Indian cricketer) ಆಟಗಾರರು

ಸ್ಥಾನ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಕಳೆದ ವರ್ಷ 18 ಟಿ 20 ಪಂದ್ಯಗಳನ್ನಾಡಿದ್ದು, 733 ರನ್ ಬಾರಿಸಿದ್ದರು. ಈ ವೇಳೆ 2 ಭರ್ಜರಿ ಶತಕಗಳನ್ನು ಕೂಡ ಸಿಡಿಸಿದ್ದರು.

ಈ ಮೂಲಕ 2023ರ ಸಾಲಿನ ಅತ್ಯುತ್ತಮ ಟಿ20 ಆಟಗಾರನಾಗಿ ಸೂರ್ಯಕುಮಾರ್ ಯಾದವ್ (Suryakumar Yadav) ಗುರುತಿಸಿಕೊಂಡಿದ್ದರು.

ಇನ್ನು ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ. ಕಳೆದ ವರ್ಷದ ಅತ್ಯುತ್ತಮ ಟಿ20 ಆಟಗಾರರನ್ನು ಒಳಗೊಂಡಿರುವ ಈ ತಂಡದಲ್ಲಿ ಭಾರತ ತಂಡದಿಂದ ನಾಲ್ವರು

ಆಯ್ಕೆಯಾಗಿದ್ದರೆ, ಝಿಂಬಾಬ್ವೆ (Zimbabwe) ತಂಡದಿಂದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ಇನ್ನು ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್ (England, West Indies, New Zealand)

ತಂಡಗಳಿಂದ ತಲಾ ಒಬ್ಬ ಆಟಗಾರರು ಸ್ಥಾನ (ICCT20 Cricket team 2023) ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಐಸಿಸಿ 2023ರ ಟಿ20 ತಂಡ:
ಸೂರ್ಯಕುಮಾರ್ ಯಾದವ್ (ನಾಯಕ)
ಯಶಸ್ವಿ ಜೈಸ್ವಾಲ್ (ಭಾರತ)
ಫಿಲ್ ಸಾಲ್ಟ್ (ಇಂಗ್ಲೆಂಡ್)
ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್)
ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್)
ಸಿಕಂದರ್ ರಾಝ (ಝಿಂಬಾಬ್ವೆ)
ಅಲ್ಪೇಶ್ ರಾಮ್​ಜಾನಿ (ಉಗಾಂಡ)
ಮಾರ್ಕ್ ಅಡೈರ್ (ಐರ್ಲೆಂಡ್)
ರವಿ ಬಿಷ್ಣೋಯ್ (ಭಾರತ)
ರಿಚರ್ಡ್ ನಾಗರವ (ಝಿಂಬಾಬ್ವೆ)
ಅರ್ಷದೀಪ್ ಸಿಂಗ್ (ಭಾರತ)

ಭಾರತೀಯ ಆಟಗಾರರು:
ಸೂರ್ಯಕುಮಾರ್ ಯಾದವ್: 2023ರಲ್ಲಿ 18 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್ (Suryakumar Yadav) 733 ರನ್ ಬಾರಿಸಿದ್ದರು. ಹಾಗಾಗಿ ಸೂರ್ಯಕುಮಾರ್ ಯಾದವ್​ಗೆ

ನಾಯಕನ ಪಟ್ಟ ನೀಡಲಾಗಿದೆ.ಯಶಸ್ವಿ ಜೈಸ್ವಾಲ್: 2023ರಲ್ಲಿ 15 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಇನಿಂಗ್ಸ್ (Innings for Team India) ಆರಂಭಿಸಿದ್ದ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್

430 ರನ್​ ಕಲೆಹಾಕಿದ್ದರು ಈ ಮೂಲಕ ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅರ್ಷದೀಪ್ ಸಿಂಗ್: ಟೀಮ್ ಇಂಡಿಯಾ ಪರ ಕಳೆದ ವರ್ಷ 2023ರಲ್ಲಿ ಟಿ20 ಪಂದ್ಯಗಳನ್ನಾಡಿದ ಎಡಗೈ ವೇಗಿ ಅರ್ಷದೀಪ್ ಸಿಂಗ್ (Arshdeep Singh) 26 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಈ ಮೂಲಕ 2023 ರ ಸಾಲಿನ ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.

ರವಿ ಬಿಷ್ಣೋಯ್: 2023ರಲ್ಲಿ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ 44 ಓವರ್​ಗಳನ್ನು ಎಸೆದಿದ್ದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ (Spinner Ravi Bishnoi) ಒಟ್ಟು 18 ವಿಕೆಟ್ ಕಬಳಿಸಿದ್ದರು.

ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಐಸಿಸಿ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

Exit mobile version