ವಿಭಿನ್ನ ಹೋಟೆಲ್ಗಳ ಮಧ್ಯೆ ಐಸ್ನಿಂದಲೇ ಮಾಡಲ್ಪಟ್ಟ ಈ ವಿಶಿಷ್ಟ ಹೋಟೆಲ್ ಬಗ್ಗೆ ತಿಳಿದಿದೆಯಾ? ಓದಿ ನೋಡಿ

Ice Hotel

ಸಾಮಾನ್ಯವಾಗಿ ಒಂದು ಹೋಟೆಲ್(Hotel) ಕಟ್ಟುವಾಗ ಅದು ಬಹಳ ವರ್ಷಗಳ ಕಾಲ ಉಳಿಯಬೇಕು ಎನ್ನುವ ರೀತಿಯಲ್ಲಿ ನಿರ್ಮಾಣ ಮಾಡುತ್ತಾರೆ.

ಆದರೆ ಸ್ವೀಡನ್ ನಲ್ಲಿರುವ(Ice hotel at sweden) ಈ ಹೋಟೆಲ್ ಅನ್ನು ಪ್ರತಿ ವರ್ಷ ನಿರ್ಮಾಣ ಮಾಡುತ್ತಾರೆ. ಹೌದು, ಈ ಹೋಟೆಲ್ ಬಗ್ಗೆ ತಿಳಿದುಕೊಂಡರೆ ಖಂಡಿತ ನಿಮಗೆ ಅಚ್ಚರಿಯಾಗುತ್ತದೆ.

ಈ ವಿಶಿಷ್ಟ ಹೋಟೆಲ್ ಇರುವುದು ಸ್ವೀಡನ್ ನಲ್ಲಿ. ಇದನ್ನು ಐಸ್ ಹೋಟೆಲ್(Ice hotel at sweden) ಎಂದು ಕೂಡ ಕರೆಯುತ್ತಾರೆ. ಈ ಸ್ವೀಡನ್ನ ಹೋಟೆಲ್ ಅನ್ನು ಪ್ರತಿ ವರ್ಷದ ಚಳಿಗಾಲದಲ್ಲಿ ನಿರ್ಮಾಣ ಮಾಡುತ್ತಾರೆ.

ಅದು ಕೇವಲ ಐದು ತಿಂಗಳ ಮಟ್ಟಿಗೆ ಮಾತ್ರ. ಆ ನಂತರ ಅದು ಕರಗಿ ಹೋಗುತ್ತದೆ! ಈ ವಿಶಿಷ್ಟ ಹೋಟೆಲ್ ಅನ್ನು ನಿರ್ಮಾಣ ಮಾಡುವ ಪರಿಪಾಠ ಆರಂಭವಾದದ್ದು, 1989 ರಿಂದ. ಸ್ವೀಡನ್ ನಲ್ಲಿರುವ ಟೋರ್ನೆ ನದಿಯ ದಡದಲ್ಲಿ ಈ ಹೋಟೆಲ್ ಅನ್ನು ನಿರ್ಮಿಸಲಾಗುತ್ತದೆ.

https://vijayatimes.com/psuedo-belief-in-snake-nature/

ಇದಕ್ಕಾಗಿ ನದಿಯಿಂದ 2500 ಟನ್ ಐಸ್ ಅನ್ನು ತೆಗೆದುಕೊಳ್ಳಲಾಗುತ್ತದೆ. ಆನಂತರ ಅಕ್ಟೋಬರ್ ತಿಂಗಳಲ್ಲಿ ಹೋಟೆಲ್ ನಿರ್ಮಾಣ ಆರಂಭವಾಗುತ್ತದೆ. ಪ್ರತಿ ವರ್ಷವೂ ಪ್ರವಾಸಿಗರಿಗಾಗಿ ಈ ಹೋಟೆಲ್ ನಲ್ಲಿ ಹಲವು ರೂಮ್ ಗಳನ್ನು ಮಾಡಲಾಗುತ್ತದೆ.

ಈ ರೂಮ್ ನೊಳಗೆ ಮೈನಸ್ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ. ಅಂದ ಹಾಗೆ ಪ್ರತಿ ವರ್ಷ ಈ ಹೋಟೆಲ್ ಗೆ 50 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೊರಗಿನಿಂದಾಗಲೀ ಅಥವಾ ಒಳಗಿನಿಂದಾಗಲೀ ಈ ಹೋಟೆಲ್ ನೋಡುವುದಕ್ಕೆ ಬಹಳ ಆಕರ್ಷಕವಾಗಿರುತ್ತದೆ. ಮೇ ತಿಂಗಳ ತನಕ ಈ ಹೋಟೆಲ್ ಇರುತ್ತದೆ.

ಯಾವಾಗ ಮಂಜು ಕರಗಲು ಆರಂಭವಾಗುತ್ತದೆಯೋ ಆಗ ಈ ಹೋಟೆಲ್ ಬಂದ್ ಆಗುತ್ತದೆ. ಈ ಹೋಟೆಲ್ ನಲ್ಲಿ ಒಂದು ರಾತ್ರಿ ಉಳಿದುಕೊಳ್ಳುವುದಕ್ಕೆ 17 ಸಾವಿರ ರೂಪಾಯಿಯಿಂದ ಆರಂಭವಾಗಿ 1 ಲಕ್ಷದ ತನಕದ ರೂಮ್ ಗಳು ಲಭ್ಯವಿದೆ.

ಈ ಹೋಟೆಲ್ ನ ರಚನೆ ಪರಿಸರಸ್ನೇಹಿಯಾಗಿದ್ದು, ಸೌರಶಕ್ತಿಯನ್ನು ಮಾತ್ರ ಬಳಸಲಾಗುತ್ತದೆ ಎನ್ನುವುದು ವಿಶೇಷ. ಇಲ್ಲಿ ಐಸ್ ಬಾರ್ ಇದೆ, ಮಕ್ಕಳು ಆಟವಾಡುವುದಕ್ಕೆ ಪ್ರತ್ಯೇಕ ಸ್ಥಳ ಕೂಡ ಇದೆ. ಇಂತಹ ವಿಶಿಷ್ಟ ಹೋಟೆಲ್ ಗೆ ನೀವೂ ಕೂಡ ಒಮ್ಮೆ ಭೇಟಿ ನೀಡಿ.
Exit mobile version