ಧಾರವಾಡದಲ್ಲಿ 18 ಕೋಟಿ ಅಕ್ರಮ ಹಣ ಪತ್ತೆ: ಎಸ್ಬಿಐ ಬ್ಯಾಂಕ್ಗೆ ರವಾನೆ

Dharwad: ಲೋಕಸಭಾ ಚುನಾವಣೆಯ (Lok Sabha Election) ಮತದಾನಕ್ಕೆ ದಿನಗಣನೆ (Illegal Money Seized In Dharwad) ಆರಂಭವಾಗಿರುವ ಹೊತ್ತಲ್ಲೇ ಕಾಂತಾಣದ ನರ್ತನ ಜೋರಾಗಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಅನೇಕ ದಾಳಿ ನಡೆಸಲಾಗಿದ್ದು, ಇದೀಗ ಧಾರವಾಡದಲ್ಲಿ (Dharwad) 18 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆಯುವ ಮೂಲಕ ಚುನಾವಣಾ ಅಧಿಕಾರಿಗಳು

ಭರ್ಜರಿ (Illegal Money Seized In Dharwad) ಕಾರ್ಯಾಚರಣೆ ನಡೆಸಿದ್ದಾರೆ.

ಹುಬ್ಬಳ್ಳಿ (Hubballi) ನಗರದ ದಾಸನಕೊಪ್ಪ ಸರ್ಕಲ್ ಹತ್ತಿರ ಇರುವ ಅರ್ನಾ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದಾಗ 18 ಕೋಟಿ ರೂಪಾಯಿ ಸಿಕ್ಕಿದ್ದು, ಆದಾಯ ತೆರಿಗೆ ಅಧಿಕಾರಿಗಳು ಈ ಹಣವನ್ನು ತಮ್ಮ

ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಖ್ಯಾತ ಉದ್ಯಮಿ ಯು.ಬಿ.ಶೆಟ್ಟಿ (U.B. Shetty) ಅವರ ಅಕೌಂಟೆಂಟ್ ಬಸವರಾಜ ದತ್ತುನವರ ಮನೆಯಲ್ಲಿ ಈ ಹಣ ಪತ್ತೆಯಾಗಿದೆ.

ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಅರ್ನಾ ಅಪಾರ್ಟ್ಮೆಂಟ್ನಲ್ಲಿರುವ ಬಸವರಾಜ ದತ್ತುನವರ ಅವರ ಮನೆಯ ಮೇಲೆ ದಾಳಿ ನಡೆಸಿದಾಗ 18

ಕೋಟಿ ರೂ. ಬೃಹತ್ ಮೊತ್ತದ ಹಣ ಪತ್ತೆಯಾಗಿತ್ತು. ಕೂಡಲೇ ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿತ್ತು. 20 ಜನ ಅಧಿಕಾರಿಗಳು ಮಶಿನ್ ಮುಖಾಂತರ ಹಣ ಎಣಿಕೆ ಮಾಡಿದ್ದಾರೆ.

ಇಂದು ಮಧ್ಯಾಹ್ನದವರೆಗೂ ಅಧಿಕಾರಿಗಳು ತಪಾಸಣೆ ನಡೆಸಿ ಹಣವನ್ನು 18 ಬ್ಯಾಗ್ಗಳಲ್ಲಿ ಭಾರೀ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್ಬಿಐ ಬ್ಯಾಂಕ್ಗೆ (SBI Bank) ಸಾಗಿಸಿದ್ದಾರೆ.

ಇನ್ನು ಬಸವರಾಜ ದತ್ತುನವರ ತಾನು ಯು.ಬಿ.ಶೆಟ್ಟಿ ಅವರ ಅಕೌಂಟೆಂಟ್ ಎಂದು ಹೇಳಿದ್ದರಿಂದ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಯು.ಬಿ.ಶೆಟ್ಟಿ ಅವರ ಕಚೇರಿ ಮೇಲೂ ದಾಳಿ ಮಾಡಿ ದಾಖಲೆಗಳನ್ನು

ಪರಿಶೀಲನೆ ನಡೆಸಿದ್ದರು. ನಂತರ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿ ಎರಡು ಪೊಲೀಸ್ ಎಸ್ಕಾರ್ಟ್ ವಾಹನದೊಂದಿಗೆ 18 ಕೋಟಿ ಹಣವನ್ನು ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್ಬಿಐ ಬ್ಯಾಂಕ್ಗೆ ರವಾನಿಸಿದ್ದಾರೆ.

ಇದನ್ನು ಓದಿ: ಸಿದ್ದು-ಡಿಕೆಯ ಅತಿಯಾದ ಓಲೈಕೆಯಿಂದಲೇ ಮತಾಂಧ ಬ್ರದರ್ಸ್ಗಳು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ – ಬಿಜೆಪಿ ವಾಗ್ದಾಳಿ

Exit mobile version