ನಾನು ಪಕ್ಷಕ್ಕೆ ರೆಬಲ್ ಅಲ್ಲ, ಲಾಯಲ್: ನನ್ನ ನಿಲುವು ನ್ಯಾಯಬದ್ಧವಾಗಿದೆ ಬೆದರಿಕೆಗೆ ಜಗ್ಗಲ್ಲ, ಬಗ್ಗಲ್ಲ: ಈಶ್ವರಪ್ಪ

ಮೈಸೂರು, ಎ. 02: ಗ್ರಾಮೀಣಾಭಿವೃದ್ಧಿ ಇಲಾಖೆ ಅನುದಾನ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಈಶ್ವರಪ್ಪ ಮತ್ತೊಮ್ಮೆ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆ ಸಚಿವರ ಗಮನಕ್ಕೆ ತರದೇ ಶಾಸಕರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರ ಜಿ.ಪಂ ಒಂದಕ್ಕೆ 65 ಕೋಟಿ ಅನುದಾನ ಹಂಚಿಕೆಯಾಗಿರೋದು ಉಲ್ಲಂಘನೆ. ನನ್ನ ಗಮನಕ್ಕೆ ತರದೇನೆ ಕ್ರಿಯಾಯೋಜನೆ ಆಗಿರೋದು ತಪ್ಪು. ಈ ಬಗ್ಗೆ ಮೋದಿ, ಅಮಿತ್ ಶಾ ಗೆ ಪತ್ರ ಬರೆದಿದ್ದೇನೆ. ನಿಯಮ ಮತ್ತು ಪ್ರಕ್ರಿಯೆ ಮೀರಿದ್ದನ್ನು ಪ್ರಶ್ನೆ ಮಾಡಿದ್ದೇನೆ’ ಎಂದು ತಾವು ರಾಜ್ಯಪಾಲರಿಗೆ ಪತ್ರ ಬರೆದಿದ್ದನ್ನ ಸಮರ್ಥನೆ ಮಾಡಿಕೊಂಡರು.

ಅದರೆ ಈ ಗೊಂದಲ ನನ್ನ ಮತ್ತು ಸಿಎಂ ನಡುವಿನ ವೈಯಕ್ತಿಕ ವಿಚಾರವಲ್ಲ. ನನ್ನ ಇಲಾಖೆಗೆ ಹಣಕಾಸು ಇಲಾಖೆ ಹಣ ನೀಡುತ್ತೆ. ಆ ಹಣ ಖರ್ಚು ಮಾಡುವುದು ನನ್ನ ಇಲಾಖೆಯ ಹಕ್ಕು. ನಾನು ರೆಬೆಲ್ ಅಲ್ಲ , ಲಾಯಲ್..ನನ್ನ ಇಡೀ ಜೀವನದಲ್ಲಿ ನಾನು ಪಕ್ಷಕ್ಕೆ ರೆಬೆಲ್ ಆಗಿಲ್ಲ’ ಎಂದ ಅವರು, ಡಿಕೆಶಿ ಹೇಳ್ತಾರೆ ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಹೇಳಿದರು.

ಸಿಎಂ ಬಿಎಸ್ವೈ ಕೆಜೆಪಿ ಶುರು ಮಾಡಬೇಕು ಎಂದು ಶುರು ಮಾಡಿದರು, ನಾನು ಬೇಡ ಅಂದಿದ್ದೆ, ನಾನು ಅವರು ಒಂದೇ ತಟ್ಟೆಯಲ್ಲಿ ತಿಂದವರು, ಒಂದೇ ಬ್ಯುಸಿನೆಸ್ ಮಾಡುತ್ತಿದ್ದೆವು, ಕೆಜೆಪಿ ಬಳಿಕ ಕೇವಲ 4ಸ್ಥಾನ ಗಳಿಸಿದರು. ಮತ್ತೆ ಬಿಜೆಪಿಗೆ ಬಿಎಸ್ವೈ ಅವರನ್ನ ಸೇರಿಸಿಕೊಳ್ಳುವ ಬಗ್ಗೆ ನಾನು ಶಂಕರ್ ಮೂರ್ತಿ ಮಾತುಕತೆ ನಡೆಸಿದ್ದೆವು ಅಂತ ತಿಳಿಸಿದ್ರು.

ಪಕ್ಷಕ್ಕೆ ರೆಬೆಲ್ ಅಲ್ಲ , ಲಾಯಲ್ ಯಡಿಯೂರಪ್ಪ ಅವರು ಬಹಳ ಬೇಗ ಬೇರೆಯವರನ್ನ ನಂಬುತ್ತಾರೆ. ನನ್ನದು ಅವರದು ಇದೆ ಮೊದಲ ಸಂಘರ್ಷ ಅಲ್ಲ ಅದು ನಿಜ, ಈ ಜನ್ಮದಲ್ಲಿ ಬಿಜೆಪಿ ಸೇರೋದಿಲ್ಲ ಅಂತ ಹೇಳಿದ್ದರು ಅದಕ್ಕೆ ನನ್ನ ಭಾಷೆಯಲ್ಲಿ ನಾನು ಉತ್ತರಿಸಿದ್ದೆ, ನಾನು ಆಗ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದೆ, ನಾನು ಪಕ್ಷಕ್ಕೆ ಲಾಯಲ್ ಆಗಿದ್ದೇನೆ. ನನ್ನ ಜಯಮಾನದಲ್ಲಿ ರೇಬಲ್ ಆಗಲ್ಲ, ನಾನು ಪಕ್ಷಕ್ಕೆ ಲಾಯಲ್. ಕೆಲವು ಪತ್ರಿಕೆಗಳಲ್ಲಿ ಬಿಜೆಪಿಯಲ್ಲಿ ಈಶ್ವರಪ್ಪ ರೇಬಲ್ ಅಂತ ಹೇಳುತ್ತಿದ್ದಾರೆ ಎಂದಿಗೂ ರೆಬಲ್ ಆಗಲ್ಲ.

ಇನ್ನೂ ನಾಲ್ವರು ಸಚಿವರು, ನಾಲ್ವರು ಶಾಸಕರು ಈ ಬಗ್ಗೆ ಮಾತನಾಡಿದ್ದಾರೆ. ರಾಜೀನಾಮೆ ಕೇಳಿದ್ದು, ಖಾತೆ ಬದಲಾವಣೆ ಬಗ್ಗೆ ಚರ್ಚೆಯಾಗಿದೆ. ಇಂತಹ ಯಾವುದಕ್ಕೂ ನಾನು ಬಗ್ಗುವ ಪ್ರಶ್ನೆಯೇ ಇಲ್ಲ. ನನ್ನ ನಿರ್ಧಾರ ನ್ಯಾಯಬದ್ಧವಾಗಿದೆ. ರಾಜ್ಯದ ಹಲವು ಶಾಸಕರು, ಸಚಿವರು, ಸಂಸದರು, ಬಿಜೆಪಿ ಪದಾಧಿಕಾರಿಗಳು ನನ್ನ ಪರವಾಗಿ ಮಾತಾಡಿದ್ದಾರೆ. ಸಹಿ ಸಂಗ್ರಹಿಸುವ ಬಗ್ಗೆಯೂ ಅವರು ಕೇಳಿದ್ದಾರೆ. ಆದರೆ, ಸಹಿ ಸಂಗ್ರಹ ಮಾಡುವುದು ಬೇಡ ಎಂದಿದ್ದೆ. ಶಾಸಕರು ಸಹಿ ಸಂಗ್ರಹಿಸುವುದು ತಪ್ಪು. ಇದು ನನ್ನ, ಯಡಿಯೂರಪ್ಪ ನಡುವಿನ ವೈಯಕ್ತಿಕ ವಿಚಾರವಲ್ಲ. ನೀತಿ, ನಿಯಮ ಜಾರಿ ಮಾಡಬೇಕೆಂಬ ನನ್ನ ಪ್ರಯತ್ನವಷ್ಟೇ ಎಂದು ಸ್ಪಷ್ಟಪಡಿಸಿದರು.

Exit mobile version