ಕೇಂದ್ರದಿಂದ ಜಿಎಸ್‌ಟಿ ತೆರಿಗೆದಾರರಿಗೆ ರಿಲೀಫ್‌ ಸಿಕ್ತಾ? : ಯಾವ ವಸ್ತುಗಳ ದರ ಇಳಿಕೆ ಇಲ್ಲಿದೆ ಮಾಹಿತಿ

New Delhi : ಕೇಂದ್ರ ಸರ್ಕಾರದ ಅಡಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌(important decisions about GST) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ದೇಶದ ರಾಜಧಾನಿ ನವದೆಹಲಿಯಲ್ಲಿ ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿಯ 49ನೇ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಮಾಡಲಾಯಿತು. ಈ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ

ನಿರ್ಮಲಾ ಸೀತಾರಾಮನ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಹಾಜರಿದ್ದರು. ಈ ಬಾರಿ ಜಿಎಸ್‌ಟಿ ತೆರಿಗೆ ಕಟ್ಟುವವರಿಗೆ ಹೆಚ್ಚು ಲಾಭದಾಯಕವಾಗಿದೆ

ಎಂದು ಹೇಳಲಾಗಿದೆ. ಅದು ಯಾವ ರೀತಿ ಅನ್ವಯವಾಗಲಿದೆ? ಯಾವ ರೀತಿ ಪರಿಣಾಮ ಬೀರಲಿದೆ? ಮತ್ತು ಯಾವ ವಸ್ತುಗಳ (important decisions about GST) ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ? ಎಂಬುದನ್ನು ತಿಳಿಯುವುದಾದರೆ,

ಇದನ್ನೂ ಓದಿ: ನನಗೂ ಮುಖ್ಯಮಂತ್ರಿಯಾಗುವ ಕನಸಿದೆ ; ಹೊಸ ಕಿಚ್ಚು ಹೊತ್ತಿಸಿದ ಪರಮೇಶ್ವರ್‌ ಹೇಳಿಕೆ

ಜಿಎಸ್‌ಟಿ- ಗೂಡ್ಸ್‌ ಸರ್ವಿಸ್‌ ಟ್ಯಾಕ್ಸ್ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಯ ವಿಳಂಬ ಶುಲ್ಕವನ್ನು ತರ್ಕಬದ್ಧವಾಗಿ ಪರಿಷ್ಕರಣೆ ಮಾಡಲಾಗಿದೆ. ಜಿಎಸ್‌ಟಿಎಟಿ ರಚನೆ, ಪಾನ್‌ ಮಸಾಲಾ ಹಾಗೂ ಗುಟ್ಕಾ ಉದ್ಯಮಗಳ ತೆರಿಗೆ ವಂಚನೆ

ಕುರಿತು ಸಚಿವರ ಗುಂಪು ನೀಡಿರುವ ವರದಿಯು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮುನ್ನೆಲೆಗೆ ಬಂದಿತು. ಜಗಿಯುವ ತಂಬಾಕು, ಪಾನ್‌ ಮಸಾಲ, ಗುಟ್ಕಾ ಕಂಪನಿಗಳು ಸಾಕಷ್ಟು ತೆರಿಗೆ ವಂಚನೆಯನ್ನು ಮಾಡುತ್ತಿದ್ದು, ಇದನ್ನು ತಪ್ಪಿಸಿ

ತೆರಿಗೆ ಆದಾಯ ಹೆಚ್ಚಿಸುವ ಸಂಬಂಧ ಸಚಿವರ ಸಮಿತಿ ನೀಡಿದ ವರದಿಯನ್ನು ಜಿಎಸ್‌ಟಿ ಮಂಡಳಿ ಅಂಗೀಕರಿಸಿದೆ.

• ಚರ್ಚೆಯಾಗದ ಸಿಮೆಂಟ್‌(Cement) ದರ ಇಳಿಕೆ

• ಪೆನ್ಸಿಲ್‌ ಶಾರ್ಪನರ್‌ಗಳಿಗೆ ಈ ಹಿಂದೆ ವಿಧಿಸಿದ್ದ ಜಿಎಸ್‌ಟಿ ದರವನ್ನು ಶೇ. 18-12ಕ್ಕೆ ಇಳಿಸಲಾಗಿದೆ.

• ಜೋನಿ ಬೆಲ್ಲದ ಮೇಲಿನ ಜಿಎಸ್‌ಟಿ ದರವನ್ನು ಶೂನ್ಯಕ್ಕೆ ಇಳಿಸಲಾಗಿದೆ. ಆದ್ರೆ, ಒಂದು ಷರತ್ತಿನ ಮೇಲೆ ಇದನ್ನು ವಿನಾಯಿತಿಗೊಳಿಸಲಾಗಿದೆ. ಈ ದ್ರವ ಬೆಲ್ಲ ಪ್ಯಾಕ್‌ ಆಗಿದ್ದರೆ ಅಥವಾ ಅದರ ಮೇಲೆ ಪ್ಯಾಕೆಜ್‌ ಲೇಬಲ್‌ ಅಂಟಿಸಿ

ಮಾರಾಟ ಮಾಡಿದರೆ, ಅದರ ಮೇಲೆ ಶೇ. 5%ರ ಜಿಎಸ್‌ಟಿ ವಿಧಿಸಲಾಗುತ್ತದೆ. ಇಲ್ಲದಿದ್ದರೇ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ.

• ರಿಟರ್ನ್ಸ್ ವಿಳಂಬ ಶುಲ್ಕ ಪರಿಷ್ಕರಣೆ.

• ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿ : ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿ ರಚನೆಗೆ ಸಂಬಂಧಿಸಿದಂತೆ ಸಚಿವರ ಸಮಿತಿ ನೀಡಿದ್ದ ವರದಿಯನ್ನು ಜಿಎಸ್‌ಟಿ ಮಂಡಳಿ ಕೆಲವು ತಿದ್ದುಪಡಿಗಳೊಂದಿಗೆ ಸ್ವೀಕರಿಸಿದೆ ಎಂದು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Exit mobile version