ಪಾಕಿಸ್ತಾನದಲ್ಲಿ ಏನಾಯಿತು ; ಇಮ್ರಾನ್ ಖಾನ್ ಮುಂದಿನ ಅಸ್ತ್ರವೇನು?

imrankhan

ಇಮ್ರಾನ್ ಖಾನ್(Imran Khan) ಮತ್ತು ಅಧ್ಯಕ್ಷ ಆರಿಫ್ ಅಲ್ವಿಯವರ(Aarif alwi) ರಾಜಕೀಯ(Political) ಗೊಂದಲಗಳು ನಿಮಿಷ, ನಿಮಿಷಕ್ಕೂ ರಾಜಕೀಯ ಅಖಾಡದಲ್ಲಿ ಆಶ್ಚರ್ಯವನ್ನುಂಟುಮಾಡುತ್ತಿವೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವು ಹೇಗೆ ಕಾರ್ಯನಿರ್ವಹಿಸುತ್ತದೆ? ಈ ಪ್ರಶ್ನೆಗೆ ಉತ್ತರವು ಸರಳವಾಗಿ ಅಡಗಿಕೊಂಡಿದೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಈ ಹಿಂದೆ ಕೇವಲ ಎರಡು ಅವಿಶ್ವಾಸ ನಿರ್ಣಯಗಳನ್ನು ತರಲಾಗಿತ್ತು, ಅಲ್ಲಿ ಯಾವುದೇ ಪ್ರಧಾನಿ ತನ್ನ ಪೂರ್ಣಾವಧಿಯನ್ನು ಇಲ್ಲಿಯವರೆಗೂ ಪೂರ್ಣಗೊಳಿಸಿಲ್ಲ.

1989 ರಲ್ಲಿ ಬೆನಜೀರ್ ಭುಟ್ಟೋ ಸರ್ಕಾರದ ವಿರುದ್ಧ ಮತ್ತು 2006 ರಲ್ಲಿ ಶೌಕತ್ ಅಜೀಜ್ ಸರ್ಕಾರದ ವಿರುದ್ಧ ಎರಡೂ ಅವಿಶ್ವಾಸ ನಿರ್ಣಯಗಳನ್ನು ಸೋಲಿಸಲಾಯಿತು. ಮೂರನೇ ಬಾರಿ, ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದಾಗ, ಪ್ರತಿಪಕ್ಷಗಳು ಪ್ರಜಾಪ್ರಭುತ್ವದ ನೆಲದ ಪರೀಕ್ಷೆಯಲ್ಲಿ ಮೊದಲ ಬಾರಿಗೆ ವಿಜಯದ ಪತಾಕೆಯನ್ನು ಹಾರಿಸಲಾಗಿತ್ತು. ಆದ್ರೆ ಕ್ರಿಕೆಟಿಗ, ರಾಜಕಾರಣಿ ತಮ್ಮ ಬೋಲಿಂಗ್ ದಾಳಿಯನ್ನು ಜನರ ಅಂಗಳಕ್ಕೆ ಬೀಸಿದರು.

ಸದ್ಯ ಅಸೆಂಬ್ಲಿಯನ್ನು ವಿಸರ್ಜಿಸಲಾಗಿದ್ದು, ಇಮ್ರಾನ್ ಡಿ-ನೋಟಿಫೈಡ್
ಪ್ರಧಾನ ಮಂತ್ರಿಯಾಗಿ, ಇಮ್ರಾನ್ ಖಾನ್ ಅವರು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಲು ಅಧ್ಯಕ್ಷ ಅಲ್ವಿಗೆ ಶಿಫಾರಸು ಮಾಡಿದರು. ಇದರಿಂದ ಪಾಕಿಸ್ತಾನದಲ್ಲಿ 90 ದಿನಗಳಲ್ಲಿ ಮುಂದಿನ ಸಂಸತ್ ಚುನಾವಣೆ ಅನಿವಾರ್ಯವಾಗಿದೆ. ಇದು ಇಮ್ರಾನ್ ಖಾನ್‌ಗೆ ಪ್ರಧಾನಿಯಾಗಿ ಮುಂದುವರಿಯಲು ಮತ್ತಷ್ಟು ಅವಕಾಶವನ್ನು ನೀಡಿತು.

ಪಾಕಿಸ್ತಾನದ ಅಧ್ಯಕ್ಷ ಅಲ್ವಿ ಅವರು ಇಮ್ರಾನ್ ಖಾನ್ ಅವರನ್ನು ದೇಶದ ಪ್ರಧಾನಿಯಾಗಿ ವಜಾಗೊಳಿಸಿ (ಡಿ-ನೋಟಿಫೈ ಮಾಡುವ) ಎಂದು ತಡರಾತ್ರಿ ಅಧಿಸೂಚನೆಯನ್ನು ಹೊರಡಿಸುವ ಮೂಲಕ ತಮ್ಮ ಅಸ್ತ್ರವನ್ನು ಸಮಯಕ್ಕೆ ಸರಿಯಾಗಿ ಎಂಬಂತೆ ಬಿಟ್ಟಿದ್ದಾರೆ.

Exit mobile version