ಚೀನಾದಲ್ಲಿ: ಹೊಸದಾಗಿ 80 ಕೋವಿಡ್ ಪ್ರಕರಣ ಪತ್ತೆ, ಕಠಿಣ ನಿರ್ಬಂಧ

ಬೀಜಿಂಗ್‌, ಆ. 06: ಚೀನಾದಲ್ಲಿ ಶುಕ್ರವಾರ ಹೊಸದಾಗಿ 80 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರ ಲಾಕ್‌ಡೌನ್‌, ಪ್ರಯಾಣ ನಿರ್ಬಂಧ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

‘ಸ್ಥಳೀಯ ಪ್ರಕರಣಗಳನ್ನು ಹೊರತುಪಡಿಸಿ ವಿದೇಶದಿಂದ ಬಂದ 44 ವ್ಯಕ್ತಿಗಳಲ್ಲಿ ಕೋವಿಡ್‌ ಪತ್ತೆಯಾಗಿದೆ. ಪ್ರಸ್ತುತ 1,370 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 34 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ’ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ಚೀನಾದಲ್ಲಿ ಈವರೆಗೆ ಒಟ್ಟಾರೆ 93,498 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 4,636 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

Exit mobile version